ವಾಹನಕ್ಕಾಗುವ ಪ್ರತಿಯೊಂದು ಹಾನಿಗೂ ವಿಮೆಯ ಬೇಸ್ ಕವರ್‌ನಲ್ಲಿ ವಿಮೆ ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ಹೆಚ್ಚುವರಿ ಕವರೇಜ್ ಅನ್ನು ವಿಮೆದಾರರು ಪಡೆಯುತ್ತಾರೆ. ಆದರೆ ಇದರಿಂದ ಪ್ರೀಮಿಯಂ ವೆಚ್ಚವೂ ಏರಿಕೆಯಾಗುತ್ತದೆ ಎಂಬುದನ್ನು ಮರೆಯಬಾರದು. ಆದ್ದರಿಂದ ಅಗತ್ಯ ಇದ್ದರೆ ಮಾತ್ರ ಹೆಚ್ಚುವರಿ ಕವರೇಜ್ ಪಡೆಯಿರಿ.
ವಾಹನದಲ್ಲಿ ಹೆಚ್ಚು ಬದಲಾವಣೆ ಬೇಡ
ವಾಹನದಲ್ಲಿ ಅತಿಯಾದ ಬದಲಾವಣೆ ಮಾಡದಿರಿ. ಸಿಎನ್‌ಜಿ ಕಿಟ್ ಅಥವಾ ಎಲೆಕ್ಟ್ರಿಕ್ ಸಾಧನವನ್ನು ಅಳವಡಿಸಿದರೆ ವಿಮೆದಾರರಿಗೆ ಮಾಹಿತಿ ನೀಡಬೇಕು. ಏಕೆಂದರೆ ಅದು ಪ್ರೀಮಿಯಂ ಮೇಲೆ ಪ್ರಭಾವ ಬೀರಬಹುದು. ಬದಲಾವಣೆಗಳು ಕಾರಿನ ಬಿಡಿಭಾಗಗಳ ಕಳ್ಳತನಕ್ಕೂ ಅವಕಾಶ ಕಲ್ಪಿಸುವುದರಿಂದ ಪ್ರೀಮಿಯಂ ವೆಚ್ಚ ದುಬಾರಿಯಾದೀತು.
ಸಣ್ಣ ಹಾನಿಗೆ ಕ್ಲೇಮ್ ಬೇಡ
ಸಣ್ಣ ಪುಟ್ಟ ಡ್ಯಾಮೇಜ್‌ಗಳಿಗೆ ವಿಮೆ ಕ್ಲೇಮ್ ಮಾಡುವುದು ಸೂಕ್ತವಲ್ಲ. ಆಗ ನಿಮಗೆ ವಿಮೆಯ ಮುಂದಿನ ನವೀಕರಣದ ವೇಳೆ ನೋ-ಕ್ಲೇಮ್ ಬೋನಸ್ (ಎನ್‌ಸಿಬಿ) ಸೌಲಭ್ಯ ಸಿಗುವುದಿಲ್ಲ. ಎನ್‌ಸಿಬಿ ಡಿಸ್ಕೌಂಟ್ ಸಿಗುವುದಿಲ್ಲ.
ಆಂಟಿ ಥೆಫ್ಟ್ ಸಾಧನ ಅಳವಡಿಸಿ
ಕಾರಿನಲ್ಲಿ ಕಳವು ಆಗದಂತೆ ತಡೆಯುವ ಗೇರ್ ಲಾಕ್, ಅಲರಾಂ, ಸ್ಟಿಯರಿಂಗ್ ಲಾಕ್ ಇತ್ಯಾದಿ ಆ್ಯಂಟಿ ಥೆಫ್ಟ್ ಸಾಧನಗಳನ್ನು ಅಳವಡಿಸಿ. ಈ ಮೂಲಕ ಪ್ರೀಮಿಯಂನಲ್ಲಿ ಡಿಸ್ಕೌಂಟ್ ಪಡೆಯುವ ಸಾಧ್ಯತೆ ಇದೆ.
ಎನ್‌ಸಿಬಿ ವರ್ಗಾಯಿಸಿ
ಹೊಸ ಕಾರಿಗೆ ಎನ್‌ಸಿಬಿ ವರ್ಗಾಯಿಸುವುದರ ಮೂಲಕವೂ ಪ್ರೀಮಿಯಂ ವೆಚ್ಚವನ್ನು ಇಳಿಸಬಹುದು. 6-7 ವರ್ಷಗಳಿಂದ ನೋ ಕ್ಲೇಮ್ ಬೋನಸ್‌ಗೆ (ಎನ್‌ಸಿಬಿ) ಅರ್ಹತೆ ಗಳಿಸಿದ್ದರೆ, ನಿಮ್ಮ ಹಳೆಯ ಕಾರಿನಿಂದ ಹೊಸ ಕಾರಿಗೆ ಎನ್‌ಸಿಬಿಯನ್ನು ವರ್ಗಾಯಿಸಬಹುದು.
ಆಟೊಮೊಬೈಲ್ ಅಸೋಸಿಯೆಶನ್ಸ್‌ಗೆ ಸದಸ್ಯರಾಗಿ
ಆಟೊಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎಎಐ) ಅಥವಾ ವೆಸ್ಟರ್ನ್ ಇಂಡಿಯಾ ಆಟೊಮೊಬೈಲ್ ಅಸೋಸಿಯೆಶನ್ (ಡಬ್ಲುತ್ರ್ಯಐಎಎ) ಇತ್ಯಾದಿ ಆಟೊಮೊಬೈಲ್ ಅಸೋಸಿಯೆಶನ್‌ನಲ್ಲಿ ಸದಸ್ಯರಾಗಿ ನೋಂದಣಿಯಾಗಿದ್ದರೆ ಕೂಡ ನಿಮ್ಮ ಕಾರಿನ ಪ್ರೀಮಿಯಂನಲ್ಲಿ ನಿಶ್ಚಿತ ಮೊತ್ತದ ಪ್ರೀಮಿಯಂ ಸೌಲಭ್ಯ ಪಡೆಯಬಹುದು.
ನಿಮ್ಮ ಕಾರು ಬಹಳ ಹಳೆಯದಾಗಿದ್ದರೆ ಮತ್ತು ನೀವು ಅದನ್ನು ಶೀಘ್ರದಲ್ಲೇ ಮಾರಲು ಆಲೋಚಿಸುತ್ತಿದ್ದರೆ, ಥರ್ಡ್ ಪಾರ್ಟಿ ವಿಮೆ ಕವರೇಜ್ ಅನ್ನು ಮಾತ್ರ ಪಡೆಯಿರಿ. ಸಕಾಲಕ್ಕೆ ಪ್ರೀಮಿಯಂ ಪಾವತಿಸಬೇಕು. ಆನ್ ಲೈನ್ ಮೂಲಕ ವಿಮೆ ಖರೀದಿಸಿ. ಸಕಾಲಕ್ಕೆ ಪ್ರೀಮಿಯಂ ಕಟ್ಟದಿದ್ದರೆ ಪ್ರೀಮಿಯಂ ವೆಚ್ಚ ಏರುವ ಸಾಧ್ಯತೆ ಇದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
Read more
[wpas_products keywords=”deal of the day sale today offer all”]