Karnataka news paper

ಎಂಇಎಸ್‌ನಿಂದ ‘ಮಹಾಮೇಳಾವ’: ವಿಜಯ್ ದೇವನೆಗೆ ಪ್ರವೇಶ ನಿರಾಕರಣೆ


ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್)ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಮೇಳಾವದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಶಿವಸೇನಾದ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ದೇವನೆ ಹಾಗೂ ಇತರರನ್ನು ಕರ್ನಾಟಕ ಪೊಲೀಸರು ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು ವಾಪಸ್ ಕಳುಹಿಸಿದರು.

ಎಂಇಎಸ್‌ನವರು ಮಹಾಮೇಳಾವದಲ್ಲಿ ಭಾಗಿಯಾಗಲು ವಿಜಯ್ ಅವರಿಗೆ ಆಹ್ವಾನ ನೀಡಿದ್ದರು. ಕರ್ನಾಟಕದ ಗಡಿಗೆ ಬಂದಿದ್ದ ಅವರನ್ನು ಪೊಲೀಸರು ತಡೆದರು. ‘ಕರ್ನಾಟಕ ಮತ್ತು ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಪ್ರವೇಶ ನೀಡಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ಓದಿ: ಬೆಳಗಾವಿ: ವೇದಿಕೆ ತೆರವಿಗೆ ಬಂದ ಪಾಲಿಕೆ ಸಿಬ್ಬಂದಿಗೆ ಎಂಇಎಸ್ ನಾಯಕರ ಆವಾಜ್!



Read more from source