ಹೈಲೈಟ್ಸ್:
- ಮೇಕೆದಾಟು ಪಾದಯಾತ್ರೆ ಇಂದು ಕ್ಲೈಮ್ಯಾಕ್ಸ್ ಹಂತ ತಲುಪುವ ಸಾಧ್ಯತೆ
- ರಾಮನಗರ ಸೇರಿ 8 ಜಿಲ್ಲೆಗಳಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧ
- ಪಾದಯಾತ್ರೆಗೆ ಬರುವವರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು
ರಾಮನಗರ: ಹೈಕೋರ್ಟ್ ಅಸಮಾಧಾನ ಹಾಗೂ ಸರಕಾರದ ನಿರ್ಬಂಧದ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆ ಇಂದು ಕ್ಲೈಮಾಕ್ಸ್ ಹಂತ ತಲುಪುವ ಸಾಧ್ಯತೆ ನಿಚ್ಚಳವಾಗಿದೆ.
ಯಾತ್ರೆಯಲ್ಲಿ ಹಿರಿಯ ನಾಯಕರುಗಳೇ ಸೋಂಕಿಗೆ ತುತ್ತಾಗಿದ್ದರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್‌ನ ‘ಮೇಕೆದಾಟು ಪಾದಯಾತ್ರೆ’ಯು ಸಾವಿರಾರು ಜನರೊಂದಿಗೆ ರಾಮನಗರದತ್ತ ಬುಧವಾರ ಹೆಜ್ಜೆ ಹಾಕಿದೆ. ರಾಜ್ಯ ಸರಕಾರ ರಾಮನಗರ ಸೇರಿದಂತೆ ಸುತ್ತಲಿನ 8 ಜಿಲ್ಲೆಗಳ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿದೆ. ಹೀಗಾಗಿ, ಇಂದು (ಗುರುವಾರ) ಮಂಡ್ಯ ಜಿಲ್ಲೆಯಿಂದ ಮೇಕೆದಾಟು ಹೋರಾಟಕ್ಕೆ ಬರಬೇಕಿದ್ದ ಕಾರ‍್ಯಕರ್ತರ ಮೇಲೆ ಜಿಲ್ಲಾಡಳಿತವು ಹದ್ದಿನ ಕಣ್ಣಿಟ್ಟಿದೆ. ರಾಜ್ಯ ಸರಕಾರ ಆರ್‌ಟಿಒಗೆ ಸ್ಪಷ್ಟ ಸೂಚನೆ ನೀಡಿದ್ದು, ಇತರೆ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಅನಗತ್ಯ ಪ್ರವೇಶ ನಿರ್ಬಂಧಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇಂದಿನ ಪಾದಯಾತ್ರೆಯಲ್ಲಿ ಸ್ಥಳೀಯರು ಮಾತ್ರವೇ ಭಾಗವಹಿಸಬೇಕಾದ ಅನಿವಾರ‍್ಯತೆ ಇದೆ. 6 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ರಾಮನಗರದಿಂದ ಶುರುವಾಗಲಿರುವ 5ನೇ ದಿನದ ಪಾದಯಾತ್ರೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ನಿಯೋಜಿಸಿದೆ. ಕೆಲ ನಾಯಕರಿಗೆ ಸೋಂಕು ಬಂದಿರುವುದರಿಂದ ಪಾದಯಾತ್ರೆಯಲ್ಲಿ ಬಹಳಷ್ಟು ಜನರಿಗೂ ತಗುಲಿದೆ ಎಂದು ಅಂದಾಜಿಸಲಾಗುತ್ತಿದೆ. ಹೈಕೋರ್ಟ್‌ನ ನೋಟಿಸ್‌ಗೆ ಗುರುವಾರ ರಾಮನಗರ ಜಿಲ್ಲಾಧಿಕಾರಿ ಉತ್ತರಿಸುವ ಸಾಧ್ಯತೆ ಇದೆ. ‘ಪಾದಯಾತ್ರೆ ನಡೆಯಬೇಕು ಎಂಬುದು ಜನಾಭಿಪ್ರಾಯವು ಆಗಿದೆ. ನಾವು ಸರಕಾರಿಂದ ಅನುಮತಿಯನ್ನೇ ಕೇಳಿಲ್ಲ. ನಮ್ಮೂರಿನಲ್ಲಿ ನಾವು ನಡೆದುಕೊಂಡು ಹೋಗುತ್ತೇವೆ’ ಎಂದು ಹೇಳುತ್ತ ಡಿ.ಕೆ.ಶಿವಕುಮಾರ್ ಯಾತ್ರೆ ಮುಂದುವರಿಸಿದ್ದರೆ, ನಿಯಮ ಉಲ್ಲಂಘನೆಯೇ ಆಗಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಲೆಕ್ಕಾಚಾರವೇನು?: ಕೊರೊನಾ ಹೆಚ್ಚುತ್ತಿರುವುದರಿಂದ ವಾರಂತ್ಯ ಕರ್ಫ್ಯೂ ಹಾಗೂ ಕೋರ್ಟ್ ನಿರ್ದೇಶನದ ಹಿನ್ನಲೆಯಲ್ಲಿ ಪಾದಯಾತ್ರಿಗಳನ್ನು ಬಿಡದಿಯಲ್ಲಿ ನಿರ್ಬಂಧಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಮೇಕೆದಾಟು ಹೋರಾಟ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹೀಗಾಗಿ ಪಾದಯಾತ್ರೆ ಕೈ ಬಿಡುವುದಿಲ್ಲ. ಹೀಗಾಗಿ ನಮ್ಮನ್ನು ತಾಕತ್ತಿದ್ದರೆ ಬಂಧಿಸಿ ಎಂದು ಸವಾಲು ಹಾಕುವ ಮೂಲಕ ಸರಕಾರವೇ ಪಾದಯಾತ್ರೆಯನ್ನು ಹತ್ತಿಕ್ಕಿತು ಎಂದು ಲಾಭ ಪಡೆಯಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
Read more
[wpas_products keywords=”deal of the day sale today offer all”]