ಹೈಲೈಟ್ಸ್:
- ಡಿಸೆಂಬರ್‌ನಲ್ಲಿ ಶೇಕಡಾ 5.59ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ
- ಕಳೆದ 6 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದ ಹಣದುಬ್ಬರ
- ಹಣದುಬ್ಬರದ ಏರಿಕೆಯಿಂದ ಕಂಗಾಲಾದ ಜನ ಸಾಮಾನ್ಯರು
- ನವೆಂಬರ್‌ನಲ್ಲಿ ಶೇ. 4.91 ಇದ್ದ ಸಿಪಿಐ ಚಿಲ್ಲರೆ ಹಣದುಬ್ಬರ
- ಇನ್ನೊಂದೆಡೆ ಬುಧವಾರ ಕಚ್ಚಾ ತೈಲ ದರದಲ್ಲೂ ಶೇ. 4ರಷ್ಟು ಏರಿಕೆ
ಮುಖ್ಯವಾಗಿ ಆಹಾರ ವಸ್ತುಗಳ ದರಗಳು ಏರಿಕೆಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ಹೆಚ್ಚಳವಾಗುತ್ತಿದೆ. ಸೂಚ್ಯಂಕದಲ್ಲಿ ಆಹಾರ ವಸ್ತುಗಳು ಸುಮಾರು ಅರ್ಧದಷ್ಟು ಪಾಲನ್ನು ಹೊಂದಿವೆ. ಡಿಸೆಂಬರ್‌ನಲ್ಲಿ ಇಂಧನದ ರಿಟೇಲ್ ದರದಲ್ಲಿ ಶೇ.11 ಏರಿಕೆಯಾಗಿತ್ತು. ಇದು ಕೂಡ ಒಟ್ಟಾರೆ ಬೆಲೆ ಏರಿಕೆಗೆ ಕಾರಣವಾಗಿದೆ. ಬಟ್ಟೆ ಬರೆ, ಪಾದರಕ್ಷೆ, ಹಾಲಿನ ಉತ್ಪನ್ನಗಳ ದರಗಳಲ್ಲೂ ಡಿಸೆಂಬರ್‌ನಲ್ಲಿ ಏರಿಕೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.
ಐಐಪಿ ಶೇ. 1.4 ಬೆಳವಣಿಗೆ
ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ಏರಿದ್ದರೂ, ಕಳೆದ ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ (ಐಐಪಿ) ಶೇ. 1.4 ಹೆಚ್ಚಳವಾಗಿತ್ತು. ಕೋವಿಡ್ ಬಿಕ್ಕಟ್ಟಿನ ಪರಿಣಾಮ 2020ರಲ್ಲಿ ಕೈಗಾರಿಕಾ ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿತ್ತು. ಈ ನಡುವೆ ಭಾರತ 2021-22ರಲ್ಲಿ ಶೇ. 8.3ರ ಜಿಡಿಪಿ ಬೆಳವಣಿಗೆ ದಾಖಲಿಸಬಹುದು ಎಂದು ವಿಶ್ವ ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ. 2022-23ರಲ್ಲಿ ಶೇ. 8.7 ಮತ್ತು 2023-24ರಲ್ಲಿ ಶೇ. 6.8ರ ಜಿಡಿಪಿ ಬೆಳವಣಿಗೆಯನ್ನು ವಿಶ್ವ ಬ್ಯಾಂಕ್ ಮುನ್ನೋಟದ ವರದಿ ತಿಳಿಸಿದೆ.
ತೈಲ ದರ ಶೇ. 4 ಹೆಚ್ಚಳ
ಹೊಸದಿಲ್ಲಿ: ಕಚ್ಚಾ ತೈಲ ದರದಲ್ಲಿ ಮಂಗಳವಾರ ಶೇ. 4 ಏರಿಕೆಯಾಗಿದೆ. ಓಮಿಕ್ರಾನ್ ವೈರಸ್‌ನ ಪ್ರತಿಕೂಲ ಪರಿಣಾಮಗಳು ಅಲ್ಪಕಾಲೀನ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ವೃದ್ಧಿಸಿದ್ದು, ದರ ಜಿಗಿದಿದೆ. ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 83.72 ಡಾಲರ್‌ಗೆ ಜಿಗಿಯಿತು. ಹೀಗಿದ್ದರೂ ಭಾರತದಲ್ಲಿ ಕಳೆದ ಹಲವು ದಿನಗಳಿಂದ ರಿಟೇಲ್ ತೈಲ ದರ ಯಥಾಸ್ಥಿತಿಯಲ್ಲಿದೆ. ಓಮಿಕ್ರಾನ್ ಭೀತಿ ಕಡಿಮೆಯಾ ಗುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತು ಉತ್ಪಾದನೆ ಹಾಗೂ ಬೇಡಿಕೆ ಮುಂದಿವರಿಯಲಿದೆ ಎಂಬ ವಿಶ್ವಾಸ ಉಂಟಾಗಿದೆ.
Read more…
[wpas_products keywords=”deal of the day”]