ಹೈಲೈಟ್ಸ್:
- ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷಕ್ಕೆ ನೆರವಾಗಲಿದೆ
- ಪಂಜಾಬಿನಲ್ಲಿ ನಾನು ಹೋದ ಕಡೆ ಜನರು ಬ್ಯಾರಿಕೇಡ್ ಮುರಿದುಕೊಂಡು ನನ್ನತ್ತ ಧಾವಿಸುತ್ತಾರೆ..!
- ತಮ್ಮ ಜನಪ್ರಿಯತೆ ಬಗ್ಗೆ ತಾವೇ ಹೊಗಳಿಕೊಂಡ ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ..!
ಬುಧವಾರ ಸ್ಥಳೀಯ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಯಾವಾಗ ಕಾಂಗ್ರೆಸ್ ಪಂಜಾಬಿನಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡದೆಯೇ ಚುನಾವಣೆ ಎದುರಿಸಿದೆಯೋ, ಆವಾಗ ಪಕ್ಷಕ್ಕೆ ಸೋಲು ನಿಶ್ಚಿತವಾಗಿದೆ. ಅದೇ, ಸಿಎಂ ಅಭ್ಯರ್ಥಿ ಘೋಷಿಸಿದಾಗೆಲ್ಲವೂ, ಅಂದರೆ 2017 ಸೇರಿದಂತೆ ಕಾಂಗ್ರೆಸ್‌ಗೆ ವಿಜಯದ ಮಾಲೆಯನ್ನು ಜನರನ್ನು ತೊಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ಘೋಷಿಸಬೇಕು, ಆ ಬಗ್ಗೆ ಭರವಸೆ ಇದೆ’ ಎಂದು ಚನ್ನಿ ಹೇಳಿದ್ದಾರೆ.
ಯಾರನ್ನು ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷಕ್ಕೆ ನೆರವಾಗಲಿದೆ ಎಂಬ ಪ್ರಶ್ನೆಗೆ ಅವರು ನಿಖರ ಉತ್ತರ ನೀಡಿಲ್ಲ. ಆದರೆ, ಪಂಜಾಬಿನಲ್ಲಿ ತಾವು ಹೋದ ಕಡೆ ಜನರು ಬ್ಯಾರಿಕೇಡ್ ಮುರಿದುಕೊಂಡು ತಮ್ಮತ್ತ ಧಾವಿಸುತ್ತಾರೆ ಎಂದು ಜನಪ್ರಿಯತೆಯ ಬಗ್ಗೆ ಮಾತನಾಡಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಿಎಂ ಸ್ಥಾನದ ಆಕಾಂಕ್ಷಿ ನವಜೋತ್ ಸಿಂಗ್ ಸಿಧು, ‘ರಾಜ್ಯದ ಸಿಎಂ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮಾಡುತ್ತದೆ ಎಂದು ಯಾರು ಹೇಳಿದ್ದು? ಪಂಜಾಬಿನ ಜನರೇ ಸಿಎಂ ಆಯ್ಕೆ ಮಾಡುತ್ತಾರೆ. ಎಲ್ಲರಿಗೂ ಸಿಎಂ ಆಗಬೇಕು ಎಂಬ ಆಸೆಯಿದೆ’ ಎಂದಿದ್ದರು. ಈ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ಸೆಡ್ಡು ಹೊಡೆದು ಸಿಎಂ ಸ್ಥಾನ ಅಲಂಕರಿಸುವ ಹಂಬಲವನ್ನು ಸಿಧು ವ್ಯಕ್ತಪಡಿಸಿದ್ದರು.
ಕಳೆದ ತಿಂಗಳು ಪಂಜಾಬ್ ಕಾಂಗ್ರೆಸ್ ಚುನಾವಣಾ ತಂತ್ರದ ಬಗ್ಗೆ ಮಾತನಾಡಿದ್ದ ಹಿರಿಯ ಕಾಂಗ್ರೆಸ್ಸಿಗ ಹಾಗೂ ಹೈಕಮಾಂಡ್‌ಗೆ ಆಪ್ತ ಸುನಿಲ್ ಜಾಖಡ್ ಅವರು, ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆ ಎದುರಿಸಲಿದೆ. ಸಿಎಂ ಅಭ್ಯರ್ಥಿ ಘೋಷಣೆ ಸದ್ಯಕ್ಕೆ ಮಾಡಲ್ಲ ಎಂದಿದ್ದರು.
ಆಪ್‌ಗೆ ಲಾಭ ಸಾಧ್ಯತೆ: ಆಂತರಿಕ ಕಿತ್ತಾಟದಿಂದ ಬಳಲಿರುವ ಪಂಜಾಬ್ ಕಾಂಗ್ರೆಸ್‌ನಲ್ಲಿ ಚುನಾವಣೆ ವೇಳೆ ಕೂಡ ನಾಯಕರ ಅಸಮಾಧಾನ ಮುಂದುವರಿದಲ್ಲಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾಯ್ದು ಕುಳಿತಿರುವ ಆಮ್ ಆದ್ಮಿ ಪಕ್ಷ (ಆಪ್)ಕ್ಕೆ ವರದಾನ ಆಗುವುದು ನಿಶ್ಚಿತ. ಜತೆಗೆ, ಮಾಜಿ ಸಿಎಂ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಕ್ಯಾ. ಅಮರಿಂದರ್ ಸಿಂಗ್ ಅವರು ಬಿಜೆಪಿ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ನ ಅನೇಕ ಭದ್ರಕೋಟೆಗಳನ್ನು ಬಾಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Read more
[wpas_products keywords=”deal of the day sale today offer all”]