ಹೈಲೈಟ್ಸ್:
- ಕೋವಿಡ್ ಮೊದಲನೇ ಅಲೆ ತಬ್ಲೀಗಿಗಳು ಹಬ್ಬಿಸಿದರು
- 3ನೇ ಅಲೆಯನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ
- ಕಾಂಗ್ರೆಸ್ ವಿರುದ್ಧ ಸಚಿವ ಸುನಿಲ್ ಕುಮಾರ್ ವಾಗ್ದಾಳಿ
ರಾಜ್ಯದಲ್ಲಿ ಕೊರೊನಾ ಹರಡುತ್ತಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ ಎಂದು ನಾನು ಆರೋಪಿಸುತ್ತೇನೆ. ಈ ನೆಲದ ಕಾನೂನನ್ನು ಕಾಂಗ್ರೆಸ್ ಗೌರವಿಸುವುದಿಲ್ಲ. ಲಸಿಕೆ ಬಂದಾಗ ಲಸಿಕೆಯನ್ನು ತಿರಸ್ಕರಿಸಿದರು. ನೀರಿಗಾಗಿ ಅಲ್ಲ,ನಾಯಕತ್ವಕ್ಕಾಗಿ ನಡೆಯುತ್ತಿರುವ ಪಾದಾಯಾತ್ರೆ ಇದು. ಜನರ ಆರೋಗ್ಯ ದೃಷ್ಟಿಯಿಂದ ಕಾಂಗ್ರೆಸ್ ನಾಯಕರಿಗೆ ಕಾಳಜಿ ಇರಲಿ ಎಂದರು.
ಮೇಕೆದಾಟು ಪಾದಯಾತ್ರೆ: ಡಿಕೆಶಿ ವಿರುದ್ಧದ ಹೇಳಿಕೆ ಎಫೆಕ್ಟ್, ಸೈಡ್ ಲೈನ್ ಆದ್ರು ವಿ.ಎಸ್ ಉಗ್ರಪ್ಪ!
ಸರ್ಕಾರನೇ ಕೋವಿಡ್ ಅಂಕಿ ಅಂಶ ಹೆಚ್ಚು ಮಾಡುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಈ ನೆಲದ ಕಾನೂನನ್ನು ಗೌರವಿಸಲ್ಲ. ಅಂಕಿ ಅಂಶದ ಮೇಲೆ ನಂಬಿಕೆ ಇಲ್ಲ. ಪಾದಯಾತ್ರೆ ಮಾಡುವ ಎಷ್ಟು ಜನರಿಗೆ ಪಾಸಿಟಿವ್ ಬಂತು?
ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಇಲ್ಲ. ಸಲಹೆ ಕೊಡಬೇಕಿದ್ದ ನಾಯಕರೆ ಮಕ್ಕಳ ಜೊತೆ ಸಭೆ ನಡೆಸಿ ಕೊರೊನಾ ವಿಸ್ತರಣೆ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು. ನಾಯಕರ ವಿರುದ್ದ ಕ್ರಮ ತೆಗೆದುಕೊಳ್ಳದಿರುವ ವಿಚಾರವಾಗಿ, ನಿಯಮಾವಳಿಗಳು ಎಲ್ಲರಿಗೂ ಒಂದೇ. ಮೊಕದ್ದಮೆ ಬಂಧನ ಮಾಡುವುದು ದೊಡ್ಡ ವಿಷಯವಲ್ಲ.
ವಿಳಂಬ, ವಿವಾದ, ರಾಜಕೀಯ ತಿಕ್ಕಾಟದ ಸುತ್ತ ‘ಮೇಕೆದಾಟು ಯೋಜನೆ’
ಸರ್ಕಾರ ನಡೆಸಿದ್ದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಗಿದ್ದ ಕಾಳಜಿ ಈಗ ಯಾಕೆ ವಿಪಕ್ಷಗಳಿಗೆ ಇಲ್ಲ? ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಇದೆ.
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದರೆ ಕಾಂಗ್ರೆಸ್ ಕಾರಣ. ಈ ರೀತಿ ರಾಜಕೀಯ ಮೇಲಾಟವನ್ನು ಕಾಂಗ್ರೆಸ್ ಬಿಡಬೇಕು. ಈ ನಿಟ್ಟಿನಲ್ಲಿ ಮರುಚಿಂತನೆಯನ್ನು ಕಾಂಗ್ರೆಸ್ ಮಾಡಬೇಕು ಎಂದರು.
Read more
[wpas_products keywords=”deal of the day sale today offer all”]