FIR ಹಾಕಿ ನಮ್ಮನ್ನು ಹೆದರಿಸೋಕಾಗುತ್ತಾ? ಇಂತಹ ಎಫ್‌ಐಆರ್‌ಗಳನ್ನು ಬಹಳ ನೋಡಿದೀವಿ: ಸಿದ್ದರಾಮಯ್ಯ
ರಾಮನಗರದಲ್ಲಿ ಸಂಚಾರ ನಿರ್ಬಂಧ
ರಾಜ್ಯ ಸರಕಾರ ರಾಮನಗರ ಸೇರಿದಂತೆ ಸುತ್ತಲಿನ ೮ ಜಿಲ್ಲೆಗಳ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿದೆ. ಹೀಗಾಗಿ ಗುರುವಾರ ಮಂಡ್ಯ ಜಿಲ್ಲೆಯಿಂದ ಮೇಕೆದಾಟು ಹೋರಾಟಕ್ಕೆ ಬರಬೇಕಿದ್ದ ಕಾರ್ಯಕರ್ತರ ಮೇಲೆ ಜಿಲ್ಲಾಡಳಿತವು ಹದ್ದಿನ ಕಣ್ಣಿಟ್ಟಿದೆ. ರಾಜ್ಯ ಸರಕಾರ ಆರ್‌ಟಿಓಗೆ ಸ್ಪಷ್ಟ ಸೂಚನೆ ನೀಡಿದ್ದು, ಇತರೆ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಅನಗತ್ಯ ಪ್ರವೇಶ ನಿರ್ಬಂಧಿಸಿರುವುದು ಸಾಕಷ್ಟು ಕುತುಹಲಕ್ಕೆ ಕಾರಣವಾಗಿದೆ.
ಇಂದಿನ ಪಾದಯಾತ್ರೆಯಲ್ಲಿ ಸ್ಥಳೀಯರು ಮಾತ್ರವೇ ಭಾಗವಹಿಸಬೇಕಾದ ಅನಿವಾರ್ಯತೆ ಇದೆ. 6 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ರಾಮನಗರದಿಂದ ಶುರುವಾಗಲಿರುವ 5ನೇ ದಿನದ ಪಾದಯಾತ್ರೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ನಿಯೋಜಿಸಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ನಮ್ಮ ಹೋರಾಟ ರಾಜ್ಯದ ಜನತೆಗೋಸ್ಕರ. ರಾಮನಗರದವರು ನೀವು ಮೇಲಿದ್ದೀರಿ. ಕನಕಪುರದವರಾದ ನಾವು ಕೆಳಗಿದ್ದೇವೆ. ರಾಮನಗರದವರಿಗೆ ವೃಷಭಾವತಿಯ ಕಚಡಾ ನೀರು ಕುಡಿದು ಸಹಿಸಿಕೊಳ್ಳುತ್ತಿದ್ದೀರಿ. ಏನಾದರು ಮಾಡಿ ಗಲಾಟೆ ಮಾಡಿ ಎಂದು ಅಶ್ವತ್ಥ್ ನಾರಾಯಣ್ ತಮ್ಮ ಕಾರ್ಯಕರ್ತರಿಗೆ ಹೇಳಿದ್ದಾರೆ. ಇದನ್ನು ಕೆಲ ಪೊಲೀಸರೇ ಹೇಳಿದ್ದಾರೆ. ಬೆಳಗ್ಗೆ ಹೋರಾಟ ನಿಲ್ಲಿಸಲು ಏನೇನೋ ಟ್ರಿಕ್ಸ್ ಮಾಡುತ್ತಾರೆ. ಏನೇ ಮಾಡಿದರೂ, ರಾಮನಗರದಿಂದ ಪಾದಯಾತ್ರೆ ನಡೆಯುತ್ತದೆ. ಕುಮಾರಣ್ಣನಿಗೆ ನಾವು ಯಾತ್ರೆ ಮಾಡಬಾರದು ಎನ್ನುವ ಉದ್ದೇಶವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಸವನಗುಡಿ ಮೈದಾನ ತಲುಪುತ್ತೇವೆ: ಡಿಕೆ ಸುರೇಶ್
ಕೆಲವರು ಸುದ್ದಿಗೋಷ್ಠಿಯಲ್ಲಿ ಹೇಳಿದಂತೆ ಅವರುಗಳೇ ಯೋಜನೆ ಅನುಷ್ಠಾನಗೊಳಿಸಲಿ. ಒಂದು ವೇಳೆ ಅದು ಸಾಧ್ಯವಾದರೆ, ಇಡೀ ಜಿಲ್ಲೆಯ ಜನ ನಿಮ್ಮೊಂದಿಗೆ ಇರುತ್ತಾರೆ. ನೀವು (ಬಿಜೆಪಿ) ಮೊದಲು ಪ್ರಧಾನಿಗಳ ಬಳಿ ಮಾತನಾಡಿ. ನಾವು ಏನೇ ಆದರೂ ಬೆಂಗಳೂರಿನ ಬಸವನಗುಡಿ ಮೈದಾನ ತಲುಪುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಬಂಧ ಡಿಕೆ ಸುರೇಶ್ ತಿಳಿಸಿದ್ದಾರೆ.
ನಾನು ಫಿಟ್ ಅಂಡ್ ಫೈನ್ ಇದ್ದೀನಿ, ನನಗೆ ಕೋವಿಡ್ ಟೆಸ್ಟಿಂಗ್ ಅಗತ್ಯವಿಲ್ಲ : ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ
ಡಿ.ಕೆ.ಶಿವಕುಮಾರ್ ಅವರೊಂದಿಗೆ ಮತ್ತೊಮ್ಮೆ ಮಾತನಾಡಿ, ಪಾದಯಾತ್ರೆ ಸ್ಥಗಿತಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]