Classroom
ಪ್ರಸ್ತುತ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವ ಅಗತ್ಯ ಆಗಿದೆ. ನಿಮ್ಮ ಪಿಎಫ್ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಡಿಸೆಂಬರ್ 31, 2021 ಆಗಿದ್ದು ಅದಕ್ಕೂ ಮುನ್ನವೇ ನೀವು ಪಿಎಫ್ ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಿ, ಭವಿಷ್ಯದಲ್ಲಿ ಆಗುವ ತೊಂದರೆಯನ್ನು ದೂರ ಮಾಡಿ.
ಭಾರತದಲ್ಲಿ ಸಾಮಾನ್ಯವಾಗಿ ಸಂಬಳ ಪಡೆಯುವ ಎಲ್ಲಾ ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPF) ಖಾತೆಯನ್ನು ಹೊಂದಿದ್ದಾರೆ. ಈ ಖಾತೆಗೆ ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದ ಒಂದು ಭಾಗವನ್ನು ಜಮೆ ಮಾಡಲಾಗುತ್ತದೆ. ಹಾಗೆಯೇ ಇದಕ್ಕೆ ಉದ್ಯೋಗಿಗಳು ಕೆಲಸ ಮಾಡುವ ಸಂಸ್ಥೆಯು ಅಷ್ಟೇ ಪ್ರಮಾಣದ ಹಣವನ್ನು ಜಮೆ ಮಾಡಲಿದೆ. ಇದು ಒಂದು ಉಳಿತಾಯ ಮತ್ತು ನಿವೃತ್ತಿ ಯೋಜನೆಗೆ ಕೊಡುಗೆ ನೀಡುವ ಯೋಜನೆ ಆಗಿದೆ.
ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?
EPFO ಅಧಿಕೃತ ಪ್ರಕಟಣೆಯ ಪ್ರಕಾರ, ನಿಮ್ಮ ಪಿಎಫ್ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಡಿಸೆಂಬರ್ 31, 2021 ಆಗಿದೆ. ಹಾಗಾಗಿ ಅದಕ್ಕೂ ಮುನ್ನವೇ ನೀವು ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಿಕೊಳ್ಳಿ. PF ಖಾತೆದಾರರು EPFO ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಇ-ನಾಮಿನಿ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಬಹುದು. ಹಾಗಾದರೆ ನಾಮಿನಿಯನ್ನು ಸೇರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ನಿಮ್ಮ PF ಖಾತೆಗೆ ಇ-ನಾಮಿನೇಷನ್ ಸಲ್ಲಿಸುವುದು ಹೇಗೆ?
* ಮೊದಲು EPFO ವೆಬ್‌ಸೈಟ್ epfindia.gov.in. ಗೆ ಭೇಟಿ ನೀಡಿ
* ‘Services’ ಆಯ್ಕೆಯ ಕೆಳಗೆ ‘For Employees’ ಅನ್ನು ಆಯ್ಕೆ ಮಾಡಿ
* ‘Member UAN/Online Service (OCS/OTCP)’ ಆಯ್ಕೆಯನ್ನು ಕ್ಲಿಕ್ ಮಾಡಿ
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
* ‘Manage’ ಪೇಜ್‌ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು, ‘yes’ ಎಂದು ಕ್ಲಿಕ್ ಮಾಡಿ
* ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ ‘Add New’ ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆಯು ಅಂತ್ಯವಾಗಲಿದೆ
ಪಿಎಫ್ ಖಾತೆಯಿಂದ ಎನ್‌ಪಿಎಸ್ ಖಾತೆಗೆ ಫಂಡ್ ವರ್ಗಾವಣೆ ಉಚಿತ
ಒಮ್ಮೆ ನೀವು ನಿಮ್ಮ ಕುಟುಂಬದ ಮಾಹಿತಿಯನ್ನು ಹಾಕಿದರೆ ನಿಮ್ಮ ಇ-ನಾಮಿನೇಷನ್ ನಿಮ್ಮ PF ಖಾತೆಗೆ ಸಲ್ಲಿಸಲಾಗುತ್ತದೆ. ಕೊನೆಯ ದಿನಾಂಕವಾದ ಡಿಸೆಂಬರ್ 31, 2021 ರ ಮೊದಲು ನಾಮಿನಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿದೆ ಎಂಬುವುದನ್ನು ನೆನಪಿನಲ್ಲಿ ಇಡಿ. ನೀವು ನಾಮಿನಿ ಸಲ್ಲಿಸುವುದು ಮುಖ್ಯವಾಗಿದೆ. ಯಾವುದೇ ಅನಾಹುತ ಸಂಭವಿಸಿದರೆ ನಾಮಿನಿಯು ವಿಮೆಯಂತಹ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಾಮಿನಿ ಸಲ್ಲಿಕೆ ಮಾಡದಿದ್ದರೆ, ನಿಮ್ಮ ಸಾವಿನ ಬಳಿಕ ಹಣವನ್ನು ಪಡೆಯುವುದು ಕಷ್ಟವಾಗುತ್ತದೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಇಪಿಎಫ್‌ಒ, “ಚಂದಾದಾರರು ತಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರಿಗಾಗಿ, ಆನ್‌ಲೈನ್ ಪಿಎಫ್, ಪಿಂಚಣಿ ಮತ್ತು ವಿಮೆ (sic) ಮೂಲಕ ಅವರನ್ನು ರಕ್ಷಿಸುವ ಸಲುವಾಗಿ ನಾಮಿನಿಯನ್ನು ನೋಂದಾಯಿಸಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಸೇವೆಗಳ ಲಾಭ ಪಡೆಯಲು ಜನರು ತಮ್ಮ ನಾಮಿನಿಯನ್ನು ಸೇರ್ಪಡೆ ಮಾಡಿ,” ಎಂದು ಇಪಿಎಫ್‌ಒ ತಿಳಿಸಿದೆ.
English summary
How to file e-nomination for your PF account?
How to file e-nomination for your PF account?.
Story first published: Monday, December 13, 2021, 19:45 [IST]