ಹೈಲೈಟ್ಸ್:
- ಮಲೈಕಾ ಅರೋರ, ಅರ್ಜುನ್ ಕಪೂರ್ ಪ್ರೀತಿ ಮಾಡುತ್ತಿದ್ದಾರೆ
- ಅರ್ಜುನ್ ಕಪೂರ್‌ಗಿಂತ ಮಲೈಕಾ 11 ವರ್ಷ ಚಿಕ್ಕವರು
- ಬ್ರೇಕ್ ಅಪ್ ವಿಚಾರಕ್ಕೆ ಫುಲ್‌ಸ್ಟಾಪ್ ಇಟ್ಟ ಅರ್ಜುನ್ ಕಪೂರ್
ಮಲೈಕಾ ಅರೋರ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅರ್ಜುನ್ ಕಪೂರ್, “ವದಂತಿಗಳಿಗೆ ಜಾಗವಿಲ್ಲ, ಎಲ್ಲರೂ ಸುರಕ್ಷತೆಯಿಂದ ಇರಿ, ಜನರಿಗೆ ಒಳ್ಳೆಯದಾಗಲಿ ಎಂದು ಹಾರೈಸಿ, ಲವ್ ಯೂ ಆಲ್” ಎಂದು ಕ್ಯಾಪ್ಶನ್ ನೀಡಿದ್ದಾರೆ. ಅದಕ್ಕೆ ಮಲೈಕಾ ಅರೋರ ಕೂಡ ಪ್ರತಿಕ್ರಿಯೆ ನೀಡಿದ್ದು ಹಾರ್ಟ್ ಇಮೋಜಿ ಕಳಿಸಿದ್ದಾರೆ. ನಟಿಯರಾದ ಭೂಮಿ ಪಡ್ನೇಕರ್, ತಾರಾ ಸುತಾರಿಯಾ, ಅಮೃತಾ ಅರೋರ, ಅಥಿಯಾ ಶೆಟ್ಟಿ, ಇಶಾ ಗುಪ್ತ, ತಹಿರಾ ಕಶ್ಯಪ್, ಸೋನಲ್ ಚೌಹಾಣ್, ಮೋಹಿತ್ ರೈ ಮುಂತಾದವರು ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್‌ಗೆ ಎಲ್ಲರ ಮೆಚ್ಚುಗೆ ಸಿಕ್ಕಿದ್ದು ಕೆಲ ನೆಟ್ಟಿಗರು ಬೇಗ ಮದುವೆಯಾಗಿ ಎಂದು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಮಲೈಕಾ ಮನೆಯಿಂದ ಹೊರಗೆ ಬಂದಿಲ್ಲ, ಅವರು ಪೂರ್ಣ ಪ್ರಮಾಣದಲ್ಲಿ ಐಸೋಲೇಟ್ ಆಗಿದ್ದಾರೆ. ಅರ್ಜುನ್, ಮಲೈಕಾ ಭೇಟಿಯೂ ಆಗಿಲ್ಲ. ರಿಯಾ ಕಪೂರ್ ಹಾಗೂ ಮಲೈಕಾ ಅರೋರ ಮನೆ ತುಂಬ ಹತ್ತಿರವಿದೆ. ರಿಯಾ ಕಪೂರ್ ಮನೆಗೆ ಊಟಕ್ಕೆ ಬಂದಿದ್ದ ಅರ್ಜುನ್ ಅವರು ಮಲೈಕಾರನ್ನು ಭೇಟಿಯೇ ಆಗಿಲ್ಲ ಎಂದು ಕೂಡ ಹೇಳಲಾಗಿತ್ತು.
ಕರೀನಾ ಕಪೂರ್‌ಗೆ ಕೊರೊನಾ ವೈರಸ್; ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಆರೋಪ
ತಾವು ಲವ್ ಮಾಡುತ್ತಿರುವ ವಿಚಾರವನ್ನು ಮಲೈಕಾ ಅರೋರ, ಅರ್ಜುನ್ ಕಪೂರ್ ಮುಚ್ಚಿಟ್ಟಿಲ್ಲ. ಅವರಿಬ್ಬರು ಸಾಕಷ್ಟು ಬಾರಿ ಒಟ್ಟಿಗೆ ವಿದೇಶಗಳಿಗೆ ಹೋಗಿ ಹಾಲಿಡೇ ಎಂಜಾಯ್ ಮಾಡಿದ್ದಾರೆ, ಡಿನ್ನರ್ ಡೇಟ್ ಮಾಡುತ್ತಿರುತ್ತಾರೆ. ಮಲೈಕಾ ಅವರು ಅರ್ಬಾಜ್ ಖಾನ್‌ಗೆ ವಿಚ್ಛೇದನ ಕೊಟ್ಟ ನಂತರ ಮಗನ ಜೊತೆ ಬೇರೆ ಮನೆಯಲ್ಲಿದ್ದಾರೆ. ಮಲೈಕಾ ಮಗ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ, ಮಗನನ್ನು ಬಿಟ್ಟಿರುವ ಬಗ್ಗೆಯೂ ಮಲೈಕಾ ಈ ಹಿಂದೆ ಮಾತನಾಡಿದ್ದರು. ಮಗನ ಖುಷಿಗೋಸ್ಕರ ಅರ್ಬಾಜ್ ಖಾನ್ ಜೊತೆ ಮಲೈಕಾ ಆಗಾಗ ಹೋಟೆಲ್‌ನಲ್ಲಿ ಒಟ್ಟಿಗೆ ಊಟ ಕೂಡ ಮಾಡುತ್ತಾರೆ.
11 ವರ್ಷ ಚಿಕ್ಕವನ ಜೊತೆ ಲವ್ ಮಾಡಿದ ತಾಯಿ ಬಗ್ಗೆ ನಟಿ ಮಲೈಕಾ ಅರೋರ ಪುತ್ರ ಹೇಳಿದ್ದೇನು?
ಮಲೈಕಾ ಅರೋರ, ಅರ್ಜುನ್ ಕಪೂರ್ ನಡುವೆ 11 ವರ್ಷದ ವಯಸ್ಸಿನ ಅಂತರವಿದೆ. ಅರ್ಜುನ್‌ಗಿಂತ ಮಲೈಕಾ ದೊಡ್ಡವರು. ಈ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಾಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಲೈಕಾ ಅರೋರ, “ನೀವು ರಿಲೇಶನ್‌ಶಿಪ್‌ನಲ್ಲಿದ್ದಾಗ ವಯಸ್ಸಿನ ಅಂತರ ಯಾವುದೇ ಕಾರಣಕ್ಕೂ ಸಮಸ್ಯೆಯಾಗದು. ಇದು ಬುದ್ಧಿ, ಮನಸ್ಸುಗಳಿಗೆ ಬಿಟ್ಟ ವಿಚಾರ. ನಮ್ಮ ಸಮಾಜ ಇದನ್ನೆಲ್ಲ ತಿರಸ್ಕರಿಸಬಹುದು. ವಯಸ್ಸಾದ ಮುದುಕ, ಯುವತಿ ಜೊತೆ ರೊಮ್ಯಾನ್ಸ್ ಮಾಡೋದನ್ನು ಕಾಣುತ್ತೀರಾ. ಆದರೆ ಪುರುಷ ಚಿಕ್ಕವನು, ಮಹಿಳೆ ದೊಡ್ಡವಳಾಗಿದ್ದರೆ ಮುದುಕಿ, ಹತಾಶೆಗೊಳಗಾದವಳು ಎಂದು ಹೇಳುತ್ತಾರೆ. ಆ ರೀತಿ ಯೋಚನೆ ಮಾಡುವವರು ಇದ್ದಾರೆ” ಎಂದಿದ್ದರು.
Read more
[wpas_products keywords=”deal of the day sale today offer all”]