ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ.
- ಜನವರಿ 19ರಿಂದ 3 ಒಡಿಐ ಪಂದ್ಯಗಳು ಪಾರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಡೆಯಲಿವೆ.
- ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ತಂದು ಪರಿಷ್ಕೃತ ತಂಟವನ್ನು ಪ್ರಕಟಿಸಲಾಗಿದೆ.
ಈಗಾಗಲೇ ಟೆಸ್ಟ್ ತಂಡದಲ್ಲಿ ಇರುವ ವೇಗದ ಬೌಲರ್ ನವದೀಪ್ ಸೈನಿ ಮತ್ತು ಬೌಲಿಂಗ್ ಆಲ್‌ರೌಂಡರ್ ಜಯಂತ್ ಯಾದವ್ ಅವರನ್ನು ಬದಲಿ ಬದಲಿ ಆಟಗಾರರನ್ನಾಗಿ ಟೀಮ್ ಇಂಡಿಯಾ ಒಡಿಐ ಬಳಗಕ್ಕೆ ಸೇರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಒಡಿಐ ಸರಣಿಗೆ ಆಯ್ಕೆಯಾಗಿದ್ದ ಆಟಗಾರರು ಬುಧವಾರ ಮುಂಬೈನಿಂದ ದಕ್ಷಿಣ ಆಫ್ರಿಕಾಕ್ಕೆ ಚಾರ್ಟರ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉಳಿದುಕೊಂಡಿದ್ದ ವಾಷಿಂಗ್ಟನ್ ಸುಂದರ್ ಅವರಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಕಾರಣ ಅವರನ್ನು ಈ ಒಡಿಐ ಸರಣಿಯಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
‘ಶಿಸ್ತಿನ ಬ್ಯಾಟಿಂಗ್’, ಕೊಹ್ಲಿ ಆಟ ಕಂಡು ಕೋಚ್ ವಿಕ್ರಮ್ ರಾಠೋರ್ ಹೇಳಿದ್ದಿದು!
ಬೌಲಿಂಗ್ ಆಲ್‌ರೌಂಡರ್ ಜಯಂತ್ ಯಾದವ್ ಅವರನ್ನು ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ನಡುವೆ ಟೆಸ್ಟ್ ಸರಣಿಯಲ್ಲಿನ 2ನೇ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ತುತ್ತಾಗಿರುವ ಮೊಹಮ್ಮದ್ ಸಿರಾಜ್ ಸ್ಥಾನಕ್ಕೆ ವೇಗಿ ನವದೀಪ್ ಸೈನಿ ಅವರನ್ನು ಬ್ಯಾಕ್‌ಅಪ್ ಬೌಲರ್ ಆಗಿ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದೆ.
ಇನ್ನು ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಸ್ನಾಯು ಸೆಳೆತದ ಕಾರಣ ಭಾರತ ತಂಡ ಅನುಭವಿ ಓಪನರ್ ಹಾಗೂ ಒಡಿಐ ತಂಡದ ನೂತನ ನಾಯಕ ರೋಹಿತ್ ಶರ್ಮಾ ಅವರ ಸೇವೆಯನ್ನು ಕಳೆದುಕೊಂಡಿತ್ತು. ಇದೇ ಕಾರಣಕ್ಕೆ ಮುಂಬರುವ ಒಡಿಐ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್‌ಪ್ರೀತ್ ಬುಮ್ರಾಗೆ ಮೊದಲ ಬಾರಿ ಉಪನಾಯಕನ ಪಟ್ಟ ಸಿಕ್ಕಿದೆ.
79 ರನ್ ಗಳಿಸಿದ ಕೊಹ್ಲಿ, ಅಹಂಕಾರ ಬಿಟ್ಟು ಬ್ಯಾಟ್ ಮಾಡಿದ್ದಾರೆ: ಗಂಭೀರ್!
ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಗೆ ಟೀಮ್ ಇಂಡಿಯಾದ ಪರಿಷ್ಕೃತ ತಂಡ ಹೀಗಿದೆ
ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ ಅಶ್ವಿನ್, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.
ಏಕದಿನ ಕ್ರಿಕೆಟ್ ಸರಣಿ ವೇಳಾಪಟ್ಟಿ
- ಪ್ರಥಮ ಒಡಿಐ: ಜನವರಿ 19, ಪಾರ್ಲ್
- ದ್ವಿತೀಯ ಒಡಿಐ: ಜನವರಿ 21, ಪಾರ್ಲ್
- ತೃತೀಯ ಒಡಿಐ: ಜನವರಿ 23, ಕೇಪ್ ಟೌನ್
Read more
[wpas_products keywords=”deal of the day gym”]