Karnataka news paper

ಬಳ್ಳಾರಿ: ಶ್ರೀರಾಮುಲುಗೆ ಜಿಲ್ಲಾಉಸ್ತುವಾರಿ ಕೊಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಿ ಸೋಮಶೇಖರರೆಡ್ಡಿ


ಬಳ್ಳಾರಿ: ಸಚಿವ ಬಿ. ಶ್ರೀರಾಮುಲು ಅವರಿಗೆ ಜಿಲ್ಲಾಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜತೆ ಚರ್ಚಿಸಿ ಮನವರಿಕೆ ಮಾಡುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ಬಳ್ಳಾರಿ ನಗರದ ಕಲ್ಯಾಣಸ್ವಾಮಿ ಮಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡದಿದ್ದಲ್ಲಿ ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕೂರುವುದಾಗಿ ಎಚ್ಚರಿಸಿದರು.

ಬೆಳೆ ವಿಮೆ ಹಣ ಯಾವಾಗ?; ಹೆಕ್ಟೇರ್‌ಗೆ ಪರಿಹಾರದ ಹಣ ಕಡಿಮೆ, ಬಳ್ಳಾರಿ ಅನ್ನದಾತರಿಂದ ಹೆಚ್ಚಿದ ಆಕ್ಷೇಪ!

ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನ ಹಣೆಬರಹದಲ್ಲಿ ದೇವರು ಬರೆದಿದ್ದ್ದರೆ ಖಂಡಿತವಾಗಿ ಸಚಿವನಾಗುತ್ತೇನೆ. ಯಾರಲ್ಲೂ ಸಚಿವ ಸ್ಥಾನ ನನಗೂ ಕೊಡಿ ಎಂದು ಕೇಳುವುದಿಲ್ಲ, ಬೇಡುವುದಿಲ್ಲ, ಪಕ್ಷದ ವರಿಷ್ಠರೇ ಈ ಬಗ್ಗೆ ನಿರ್ಧರಿಸಲಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಅವರು ಸರ್ಧಿಸುವುದು ಖಚಿತವಾಗಿದ್ದು, ಬಿಜೆಪಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು.ಕಾಂಗ್ರೆಸ್‌ನವರು ಪ್ರತಿಯೊಂದಕ್ಕೂ ವಿರೋಧ ಮಾಡುವುದೇ ಅವರ ಕೆಲಸವಾಗಿದೆ.ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಮತಾಂತರ ಕಾಯಿದೆ ಜತೆಗೆ ಲವ್‌ ಜಿಹಾದ್‌ ಕಾಯಿದೆ ಜಾರಿಗೆ ತರಬೇಕು ಎಂದು ಶಾಸಕರು ಒತ್ತಾಯಿಸಿದರು.

ಈ ಸಾರಿ ಬಲದಂಡೆ ಕಾಲುವೆಗೆ ಹೆಚ್ಚುವರಿ ಮೂರು ತಿಂಗಳು ನೀರು ಹರಿಸಿ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮನವಿ ಮಾಡಿದರು.

ವಿಧಾನ ಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂ.ವೈ.ಸತೀಶ್‌ರೆಡ್ಡಿ, ಪಾಲಿಕೆ ಸದಸ್ಯರು ಹಾಗೂ ಇತರರಿದ್ದರು.

‘ದಿವ್ಯ ಕಾಶಿ, ಭವ್ಯ ಕಾಶಿ’ ನೇರಪ್ರಸಾರ ವೀಕ್ಷಣೆ

ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆಯ ನೇರಪ್ರಸಾರದ ಕಾರ್ಯಕ್ರಮವನ್ನು ನಗರದ ಮಿಲ್ಲರಪೇಟ್‌ಯ ಶ್ರೀಕಲ್ಯಾಣ ಸ್ವಾಮಿ ಮಠದ ಆವರಣದಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ, ಶ್ರೀಮಠದ ಕಲ್ಯಾಣಸ್ವಾಮಿ ಹಾಗೂ ಮುಖಂಡರ ಜತೆ ಸೋಮವಾರ ವೀಕ್ಷಿಸಿದರು.

ಬಳ್ಳಾರಿ: ಮೇಲ್ಮನೆಯಲ್ಲಿ ಯಾವ ಪಕ್ಷಕ್ಕೆ ಮೇಲುಗೈ

ದೇಶದ ಪುಣ್ಯಕ್ಷೇತ್ರಗಳಲ್ಲೊಂದಾದ ಕಾಶಿಯಲ್ಲಿ ವಿಶ್ವಕ್ಕೆ ಭಾರತದ ಶ್ರೇಷ್ಠತೆ, ಪ್ರಾಚೀನ ಸಂಸ್ಕೃತಿಯನ್ನು ಮರು ಸ್ಥಾಪನೆ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ದಿವ್ಯ ಕಾಶಿ, ಭವ್ಯ ಕಾಶಿ’ಯ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕಾಶಿ ವಿಶ್ವನಾಥದ ಅಭಿವೃದ್ಧಿ ಮತ್ತು ಸುಂದರೀಕರಣ ಹಾಗೂ ನವೀಕರಣಕೊಂಡ ನಗರವನ್ನು ವೀಕ್ಷಿಸಿದರು.

ಬಳಿಕ ಮಠದ ಸ್ವಾಮೀಜಿಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ಎಂಎಲ್ಸಿ ಅಭ್ಯರ್ಥಿ ವೈ.ಎಂ. ಸತೀಶ್‌, ಮುಖಂಡರಾದ ವೀರಶೇಖರೆಡ್ಡಿ, ಶ್ರೀನಿವಾಸ್‌ ಮೋತ್ಕರ್‌ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇದ್ದರು.



Read more