Karnataka news paper

ಕರ್ನಾಟಕದಲ್ಲಿ 21 ಸಾವಿರ ದಾಟಿದ ಹೊಸ ಕೊರೊನಾ ಕೇಸ್‌, 3 ಜಿಲ್ಲೆಗಳಲ್ಲಿ ತೀವ್ರ ಹೆಚ್ಚಳ


ಹೈಲೈಟ್ಸ್‌:

  • ಬುಧವಾರ ರಾಜ್ಯದಲ್ಲಿ 21,390 ಹೊಸ ಕೊರೊನಾ ಪ್ರಕರಣಗಳು ದೃಢ
  • 24 ಗಂಟೆಗಳ ಅಂತರದಲ್ಲಿ 10 ಮಂದಿ ಕೊರೊನಾದಿಂದ ನಿಧನ
  • ಪಾಸಿಟಿವಿಟಿ ದರ ಶೇ. 10.96ಕ್ಕೆ ಏರಿಕೆ
  • ಸಕ್ರಿಯ ಪ್ರಕರಣಗಳ ಸಂಖ್ಯೆ 93,099ಕ್ಕೆ ಹೆಚ್ಚಳ

ಬೆಂಗಳೂರು: ಕರ್ನಾಟಕದಲ್ಲಿ ಈಗ ಅಕ್ಷರಶಃ ಕೊರೊನಾ ಅಬ್ಬರಿಸಲು ಆರಂಭಿಸಿದೆ. ಬುಧವಾರ ಸುದೀರ್ಘ ಕಾಲದ ಬಳಿಕ ಹೊಸ ಕೋವಿಡ್‌-19 ಪ್ರಕರಣಗಳ ಸಂಖ್ಯೆ 20 ಸಾವಿರ ದಾಟಿದ್ದು 21,390 ಹೊಸ ಕೇಸ್‌ಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 30,99,519ಕ್ಕೆ ಏರಿಕೆಯಾಗಿದೆ. ಒಂದು ದಿನದ ಅವಧಿಯಲ್ಲಿ 1.95 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವಿಟಿ ದರವೂ ಶೇ. 10.96ಕ್ಕೆ ಏರಿಕೆಯಾಗಿದೆ.

24 ಗಂಟೆಗಳ ಅಂತರದಲ್ಲಿ ಕರ್ನಾಟಕದಲ್ಲಿ ಕೊರೊನಾದಿಂದ 10 ಮಂದಿ ಸಾವಿಗೀಡಾಗಿದ್ದು, ಇಲ್ಲಿಯವರೆಗೆ ಅಸುನೀಗಿದವರ ಸಂಖ್ಯೆ 38,389ಕ್ಕೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 6 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದರೆ, ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು, ಮೂರು ಜಿಲ್ಲೆಗಳಲ್ಲಿ ಸೋಂಕು ತೀವ್ರ ಹೆಚ್ಚಳ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 15,617 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದೀಗ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಮೂರು ಜಿಲ್ಲೆಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳು ವರದಿಯಾಗಿವೆ.

ಒಂದೇ ದಿನ ರಾಜ್ಯದಲ್ಲಿ 21,390 ಮಂದಿಗೆ ಕೋವಿಡ್‌ ಸೋಂಕು: ಇದರಲ್ಲಿ ಬೆಂಗಳೂರಿನ ಪಾಲು 15,617 !
ತುಮಕೂರಿನಲ್ಲಿ 594, ಮೈಸೂರಿನಲ್ಲಿ 524, ದಕ್ಷಿಣ ಕನ್ನಡದಲ್ಲಿ 519 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದರೆ, ಎರಡಂಕಿ ಪ್ರಕರಣಗಳು ಬೆಳಕಿಗೆ ಬಂದಿರುವ ಜಿಲ್ಲೆಗಳ ಸಂಖ್ಯೆ 10ಕ್ಕೆ ಇಳಿಕೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಒಂದಂಕಿಗಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದು ಸೋಂಕಿನ ತೀವ್ರತೆ ಹೆಚ್ಚುತ್ತಿರುವುದನ್ನು ಪುಷ್ಠೀಕರಿಸಿದೆ.

ಜಿಲ್ಲಾವಾರು ಪ್ರಕರಣಗಳು ಹೀಗಿವೆ, ಬಾಗಲಕೋಟೆ 13, ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೀದರ್ 111, ಚಾಮರಾಜನಗರ 106, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 87, ಚಿತ್ರದುರ್ಗ 86, ದಾವಣಗೆರೆ 137, ಧಾರವಾಡ 264, ಗದಗ 43, ಹಾಸನ 409, ಹಾವೇರಿ 14, ಕಲಬುರಗಿ 188, ಕೊಡಗು 69, ಕೋಲಾರ 282, ಕೊಪ್ಪಳ 47, ಮಂಡ್ಯ 319, ರಾಯಚೂರು 91, ರಾಮನಗರ 135, ಶಿವಮೊಗ್ಗ 201, ಉಡುಪಿ 361, ಉತ್ತರ ಕನ್ನಡ 199, ವಿಜಯಪುರ 64, ಯಾದಗಿರಿ 10.

ಕೊರೊನಾರ್ಭಟದ ನಡುವಲ್ಲೇ ಚಿತ್ರದುರ್ಗದಲ್ಲಿ ಸೋಂಕಿತರಿಗೆ ಆಕ್ಸಿಜನ್‌ ಕೊರತೆ..?
ಲಕ್ಷದತ್ತ ಸೋಂಕಿತರ ಸಂಖ್ಯೆ

ದಿನದಿಂದ ದನಕ್ಕೆ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದರೂ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಇನ್ನು ಸಾವಿರದ ಆಸುಪಾಸಿನಲ್ಲೇ ಇದೆ. ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ ರಾಕೆಟ್‌ ವೇಗದಲ್ಲಿ ಮೇಲೇರುತ್ತಿದೆ.

ರಾಜ್ಯದಲ್ಲಿ ಬುಧವಾರ 1,541 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಇಲ್ಲಿಯವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 29,68,002ಕ್ಕೆ ಏರಿಕೆಯಾಗಿದೆ.

ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಆಕ್ಟಿವ್‌ ಕೇಸ್‌ಗಳ ಸಂಖ್ಯೆ 93,099ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 73,654 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. ಮೈಸೂರಿನಲ್ಲಿ 2,277, ದಕ್ಷಿಣ ಕನ್ನಡದಲ್ಲಿ 2,253, ಉಡುಪಿಯಲ್ಲಿ 1,625, ತುಮಕೂರಿನಲ್ಲಿ 1,470, ಮಂಡ್ಯದಲ್ಲಿ 1,417, ಹಾಸನದಲ್ಲಿ 1,183 ಆಕ್ಟಿವ್‌ ಕೊರೊನಾ ಕೇಸ್‌ಗಳಿದ್ದು, ಉಳಿದೆಲ್ಲಾ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಸೋಂಕಿತರಿದ್ದಾರೆ.

ಇನ್ನು ಬುಧವಾರ ರಾಜ್ಯದಲ್ಲಿ 3.24 ಲಕ್ಷ ಮಂದಿ ಕೊರೊನಾ ವಿರೋಧಿ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟು ಇಲ್ಲಿಯವರೆಗೆ ರಾಜ್ಯದಲ್ಲಿ ನೀಡಲಾದ ಲಸಿಕೆ ಡೋಸ್‌ಗಳ ಸಂಖ್ಯೆ 9.07 ಕೋಟಿಗೆ ಏರಿಕೆಯಾಗಿದೆ.



Read more

[wpas_products keywords=”deal of the day sale today offer all”]