The New Indian Express
ಹಾಸನ: ಹಾಸನ ಜಿಲ್ಲೆಯ ನಾಲ್ವರು ಬಾಲಕಿಯರು ಸೇರಿದಂತೆ ಐವರು ಹಾಕಿ ಆಟಗಾರರು ಭಾರತೀಯ ಹಾಕಿ ತಂಡಗಳಿಗೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಇಬ್ಬರು ಆಟಗಾರರು ಭಾರತೀಯ ಹಿರಿಯರ ತಂಡದ ಪರವಾಗಿ ಆಡಲಿದ್ದು, ಮೂವರು ಕಿರಿಯರ ತಂಡದಲ್ಲಿ ಆಡಲಿದ್ದಾರೆ. ಐವರೂ ಗ್ರಾಮೀಣ ಮತ್ತು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

ಹಿರಿಯ ತಂಡಕ್ಕೆ ಹಾಸನದ ಬೀರನಹಳ್ಳಿ ಎಕ್ಸ್‌ಟೆನ್ಶನ್‌ನ ಮಹೇಶ್ ಮತ್ತು ಕಮಲಾ ದಂಪತಿಯ ಪುತ್ರ ಶೇಷೇಗೌಡ ಬಿಎಂ, ಹೊಳೆನರಸೀಪುರ ತಾಲೂಕಿನ ಆಲದಹಳ್ಳಿ ಗ್ರಾಮದ ಅಂಜಲಿ, ಅರಕಲಗೂಡು ತಾಲೂಕಿನ ಗಂಗೂರಿನ ಜಗದೀಶ್ ಹಾಗೂ ಸುಜಾತ ದಂಪತಿಯ ಪುತ್ರಿ ಚಂದನಾ, ಶಾಂತಿಗ್ರಾಮದ ಪ್ರಕಾಶ್ ಮತ್ತು ಸೌಭಾಗ್ಯ ದಂಪತಿಯ ಪುತ್ರಿ ಲಿಖಿತಾ ಎಸ್‌ಪಿ, ಹಾಸನ ತಾಲೂಕಿನ ಮಳಲಿ ಗ್ರಾಮದ ನಾಗರಾಜ್ ಅವರ ಪುತ್ರಿ ತೇಜಸ್ವಿನಿ ತಂಡಕ್ಕೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿದೆ.
ಹಾಸನದ ಕ್ರೀಡಾ ವಸತಿ ನಿಲಯದಲ್ಲಿ ಹಿರಿಯ ಹಾಕಿ ಕೋಚ್ ಆಗಿರುವ ಎಚ್.ಬಿ.ರವೀಶ್ ಅವರು ಬಾಲಕಿಯರಿಗೆ ತರಬೇತಿ ನೀಡಲಿದ್ದಾರೆ.
ಹಿರಿಯ ತಂಡಕ್ಕೆ ಆಯ್ಕೆಯಾಗಿರುವ ಶೇಷೇಗೌಡ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅಂಜಲಿ ಮೈಸೂರಿನಲ್ಲಿ ತರಬೇತಿ ಪಡೆದಿದ್ದಾರೆ. ಜನವರಿ 17 ರಿಂದ ಪ್ರಾರಂಭವಾಗುವ ತರಬೇತಿ ಶಿಬಿರದಲ್ಲಿ ಎಲ್ಲಾ ಆಟಗಾರರು ಭಾಗವಹಿಸಲಿದ್ದಾರೆ.
ಇವರೆಲ್ಲರೂ ಉತ್ತಮ ಆಟಗಾರರಾಗಿ ಹೊರಹೊಮ್ಮಲಿ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಎಚ್.ಆರ್.ಹರೀಶ್ ಹಾರೈಸಿದ್ದಾರೆ. ಇದರಂತೆ ಜಿಲ್ಲೆಯ ಹಿರಿಯ ಹಾಕಿ ಪಟುಗಳಾದ ಮೇಘರಾಜ್, ಪಾಲಾಕ್ಷ, ರವಿಕುಮಾರ್, ಮಧು, ಚಂದ್ರಶೇಖರ್, ಜಯಂತ್ ಅವರೂ ಕೂಡ ಆಟಗಾರರಿಗೆ ಶುಭ ಹಾರೈಸಿದ್ದಾರೆ.
Read more…
[wpas_products keywords=”deal of the day sports items”]