Karnataka news paper

ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಸ್ಪರ್ಧಿಯ ಮದುವೆಗೆ ಸಂಕಷ್ಟ ತಂದಿಟ್ಟ ಆ ಮಹಿಳೆ, ಯಾಕೆ?


ಹೈಲೈಟ್ಸ್‌:

  • ಬಿಗ್ ಬಾಸ್ 15 ಶೋ ಸ್ಪರ್ಧಿ ಅಫ್ಸಾನಾ ಖಾನ್
  • ಸಾಜ್ ಎಂಬುವವರ ಜೊತೆ ಅಫ್ಸಾನಾ ಖಾನ್ ನಿಶ್ಚಿತಾರ್ಥ ನಡೆದಿದೆ
  • ಮದುವೆ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದ ಅಫ್ಸಾನಾ ಖಾನ್
  • ಅಫ್ಸಾನಾ ಖಾನ್ ಮದುವೆಗೆ ಎದುರಾಯ್ತೊಂದು ಸಂಕಷ್ಟ

ಬಿಗ್ ಬಾಸ್ 15 ಶೋನಲ್ಲಿ ಕೂಗಾಟ, ಕಿರುಚಾಟ ಮಾಡಿಕೊಂಡು, ಚಾಕುವಿನಿಂದ ಪ್ರಾಣ ಹಾನಿಮಾಡಿಕೊಳ್ಳಲು ಹೊರಟಿದ್ದ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರ ಮದುವೆಗೆ ಈಗ ಸಂಕಷ್ಟ ಬಂದಿದೆ. ಶೋ ಒಳಗೆ ಹೋಗುವ ಮುನ್ನವೇ ತಾನು ಮದುವೆಯಾಗಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.

ಮೊಹಾಲಿ ಕೋರ್ಟ್‌ನಲ್ಲಿ ದೂರು ದಾಖಲು

ಸಾಜ್ ಶರ್ಮಾ ಜೊತೆ ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡಲು ಅಫ್ಸಾನಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಛತ್ತೀಸ್‌ಗಡದ ಅನುರಾಗ್ ರಂಜನ್ (ಅನು ಶರ್ಮಾ) ಎಂಬುವವರು ಸಾಜ್ ನನಗೆ ಮೋಸದಿಂದ ವಿಚ್ಛೇದನ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಮೊಹಾಲಿ ಕೋರ್ಟ್‌ನಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

“2014ರಲ್ಲಿ ನಾನು, ಸಾಜ್ ಪಾಲಕರ ಸಾಕ್ಷಿಯಾಗಿ ಮದುವೆಯಾದೆವು. ನಮಗೆ ಮಗಳಿದ್ದಾಳೆ. 2016ರ ಫೆಬ್ರವರಿಯಲ್ಲಿ ಮಗಳು ಹುಟ್ಟಿದ್ದಾಳೆ. ಮದುವೆ ನಂತರ ನಾವು ಝಿರಕ್‌ಪುರದಲ್ಲಿ ವಾಸವಿದ್ದೆವು. ವರದಕ್ಷಿಣ ಕೊಡು ಎಂದು ಒತ್ತಾಯ ಮಾಡಿದ್ದಕ್ಕೆ ತವರು ಮನೆ ರಾಯಪುರಕ್ಕೆ ಬರುವಂತಾಯ್ತು. ಕಳೆದ ವರ್ಷ ಅನು, ಸಾಜ್ ಮದುವೆ ಬಗ್ಗೆ ಗೊತ್ತಾಯ್ತು. ಎಷ್ಟೇ ಪ್ರಯತ್ನಪಟ್ಟರೂ ಕೂಡ ಸಾಜ್‌ರನ್ನು ಸಂಪರ್ಕ ಮಾಡಲು ಆಗಲಿಲ್ಲ. 2019ರಲ್ಲಿಯೇ ಸಾಜ್ ವಿಚ್ಛೇದನ ನೀಡಿದ್ದಾನೆ ಎಂದು ಅವನ ಕುಟುಂಬದಿಂದ ತಿಳಿಯಿತು. ನನ್ನ ವಿಳಾಸ ತಪ್ಪಾಗಿ ಕೊಟ್ಟು ನನಗೆ ವಿಚ್ಛೇದನದ ನೋಟಿಸ್ ತಲುಪದಿರುವ ಸಾಧ್ಯತೆ ಇದೆ” ಎಂದು ಅನು ಹೇಳಿಕೆ ನೀಡಿರುವುದು ದೂರಿನಲ್ಲಿ ದಾಖಲಾಗಿದೆ.

ಮಿತಿ ಮೀರಿದ ಮಾತು, ಕಹಿ ಘಟನೆಗೆ ಸಾಕ್ಷಿಯಾದ ಬಿಗ್ ಬಾಸ್ ಮನೆ; ಹೆದರಿದ ಸಹ ಸ್ಪರ್ಧಿಗಳು

ಅನು, ಸಾಜ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ?

ಕೆಲಸದ ಸಲುವಾಗಿ ರಾಯಪುರಕ್ಕೆ ಬಂದಿದ್ದ ಸಾಜ್, ಅನು ಪರಿಚಯವಾಗಿ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಆಗ ಒಡಿಶಾದ ಪವರ್ ಪ್ಲಾಂಟ್‌ನಲ್ಲಿ ಸಾಜ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಬಿಗ್ ಬಾಸ್ ಶೋಗಾಗಿ ಮದುವೆ ಮುಂದಕ್ಕೆ ಹಾಕಿದ್ದ ಅಫ್ಸಾನಾ ಖಾನ್

ಕಳೆದ ಫೆಬ್ರವರಿಯಲ್ಲಿ ಸಾಜ್ ಜೊತೆ ನಿಶ್ಚಿತಾರ್ಥ ಆಗಿರುವ ಫೋಟೋ, ವಿಡಿಯೋಗಳನ್ನು ಅಫ್ಸಾನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಿಗ್ ಬಾಸ್ 15 ವೇದಿಕೆಯಲ್ಲಿ ಅನೇಕ ಬಾರಿ ಸಾಜ್ ಬಗ್ಗೆ ಅಫ್ಸಾನಾ ಮಾತನಾಡಿದ್ದರು. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬೇಕು ಎಂದು ಮದುವೆ ಮುಂದಕ್ಕೆ ಹಾಕಿದ್ದೇನೆ ಎಂದು ಅಫ್ಸಾನಾ ಹೇಳಿಕೊಂಡಿದ್ದರು.

ಬಿಗ್ ಬಾಸ್ ಮನೆಗೆ ವಯಸ್ಸಾಗಿರೋರು ಹೋಗೋದು ತಪ್ಪಾ? ಮುದುಕರಾಗೋದು ಅಪರಾಧವೇ?

ಸಹಸ್ಪರ್ಧಿಗಳಿಗೂ ಹೆದರಿಕೆ ತಂದಿದ್ದ ಅಫ್ಸಾನಾ ನಡವಳಿಕೆ
ಸಹಸ್ಪರ್ಧಿಗಳ ಜೊತೆ ಮಾತು, ಜಗಳ ಮಿತಿ ಮೀರಿದಾಗ ಆಕ್ರೋಶಕ್ಕೊಳಗಾದ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರು ಚಾಕುವಿನಿಂದ ಕೈ ಕೊಯ್ದುಕೊಳ್ಳಲು ಪ್ರಯತ್ನಪಟ್ಟಿದ್ದಾರೆ, ತಾನು ಸಾಯ್ತೀನಿ ಅಂತ ಕೂಡ ಹೇಳಿದ್ದರು. ಅವರ ಈ ನಡವಳಿಕೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಿರೂಪಕ ಸಲ್ಮಾನ್ ಖಾನ್ ಕೂಡ ಅಫ್ಸಾನಾ ಅವರು ಮಾಡಿದ ಜಗಳಕ್ಕೆ ಪ್ರತಿಯಾಗಿ ತರಾಟೆಗೆ ತೆಗೆದುಕೊಂಡು, ಕಿವಿಮಾತು ಕೂಡ ಹೇಳಿದ್ದರು. ನೀರಿನ ಬಾಟಲಿ, ಕುರ್ಚಿ ಹೀಗೆ ಬಿಗ್ ಬಾಸ್ ಪ್ರಾಪರ್ಟಿಗಳನ್ನು ಅಫ್ಸಾನಾ ಎಸೆದಿದ್ದು ಕಂಡು ಸಹಸ್ಪರ್ಧಿಗಳು ಕೂಡ ಹೆದರಿ ಅವರನ್ನು ತಡೆದಿದ್ದಾರೆ.



Read more

[wpas_products keywords=”deal of the day party wear dress for women stylish indian”]