Source : The New Indian Express
ನವದೆಹಲಿ: ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಬುಧವಾರ ಆಯ್ಕೆ ಮಾಡಲಾಗಿತ್ತು. ಜನವರಿಯಿಂದ ಶುರುವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ರೋಹಿತ್ ಅವರು ವಿರಾಟ್ ಕೊಹ್ಲಿಯವರಿಂದ ಕಪ್ತಾನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಗೆ ಕೊಕ್: ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ: ಬಿಸಿಸಿಐ
ಈ ಬಗ್ಗೆ ತಾವು ಮತ್ತು ಆಯ್ಕೆ ತಂಡದ ಚೇರ್ ಮೆನ್ ಕೊಹ್ಲಿ ಅವರಲ್ಲಿ ಮಾತನಾಡಿದ್ದು, ಅವರ ಇದುವರೆಗಿನ ಕೊಡುಗೆಗೆ ತಾವು ಆಭಾರಿಯಾಗಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೇರಿದ ಆಶ್ವಿನ್, 11ನೇ ಸ್ಥಾನಕ್ಕೆ ಜಿಗಿದ ಅಗರ್ವಾಲ್
ನಾಯಕತ್ವ ಬದಲಾವಣೆ ವಿಚಾರವಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕವೇ ಈ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ಕ್ಯಾಪ್ಟನ್ ಅಗಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ: ಭಾರತ ವಿರುದ್ಧದ ಟೆಸ್ಟ್ ಸರಣಿ: 21 ಆಟಗಾರರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ; ಇಬ್ಬರು ಹೊಸ ಆಟಗಾರರಿಗೆ ಚಾನ್ಸ್!
ವಿರಾಟ್ ಕೊಹ್ಲಿಯವರನ್ನು ಟಿ20 ಕಪ್ತಾನರಾಗಿ ಮುಂದುವರಿಸುವ ಯೋಚನೆ ಬಿಸಿಸಿಐ ದಾಗಿತ್ತು. ಆದರೆ ಕೊಹ್ಲಿ ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ಆಯ್ಕೆ ಸಮಿತಿ ಕೂಡಾ ಏಕದಿನ ಪಂದ್ಯ ಹಾಗೂ ಟಿ20 ಫಾರ್ಮ್ಯಾಟ್ ಗಳಿಗೆ ಪ್ರತ್ಯೇಕ ಕ್ಯಾಪ್ಟನ್ ಇರುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾಗಿ ಸೌರವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೋತ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ: ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಎಜಾಜ್ ಪಟೇಲ್