Karnataka news paper

ಬಜೆಟ್‌ 2022-23: ಕೋವಿಡ್‌ನಿಂದ ಆತಿಥ್ಯ ವಲಯ ತತ್ತರ: ಹೋಟೆಲ್‌ ಉದ್ಯಮ ಉಳಿಸುವ ಬೇಡಿಕೆ


News

|

ಕೊರೊನಾವೈರಸ್‌ ಸೋಂಕಿನ ಹೊಸ ಅಲೆಯು ಆತಿಥ್ಯ ಕ್ಷೇತ್ರವನ್ನು ಮತ್ತೆ ಅನಿಶ್ಚಿತತೆಗೆ ದೂಡಿದೆ. ಈ ನಡುವೆ ಉದ್ಯಮ ಸಂಸ್ಥೆ ಎಚ್‌ಎಐ, “ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು ನೀಡುವುದು, ಸಾಲಗಳ ಮೇಲಿನ ನಿಷೇಧವನ್ನು ವಿಸ್ತರಿಸುವುದು ಮತ್ತು ತರ್ಕಬದ್ಧ ತೆರಿಗೆ ನೀತಿ ಪರಿಗಣಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತದೆ,” ಎಂದು ಹೇಳಿದೆ.

ಪೂರ್ವ-ಬಜೆಟ್ ಬೇಡಿಕೆಯಲ್ಲಿ ಹೋಟೆಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಚ್‌ಎಐ) ಈ ಹೋಟೆಲ್‌ ಲಯದ ಉಳಿವಿಗಾಗಿ ಮತ್ತು ಹೋಟೆಲ್‌ ವಲಯ ಆರಂಭಿಕ ಮತ್ತು ತ್ವರಿತವಾಗಿ ಸಹಜ ಸ್ಥಿತಿಗೆ ಮರಳಲು ನೀತಿ ರೂಪನೆ ಕಡ್ಡಾಯವಾಗಿದೆ ಎಂದು ಅಭಿಪ್ರಾಯಿಸಿದೆ.

ವಿಪ್ರೋ 3ನೇ ತ್ರೈಮಾಸಿಕ ವರದಿ: ನಿವ್ವಳ ಲಾಭ ಏರಿಕೆ

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಚ್‌ಎಐ, “ದೇಶೀಯ ಪ್ರವಾಸೋದ್ಯಮದ ಬಲದಿಂದಾಗಿ ಆತಿಥ್ಯ ಉದ್ಯಮವು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಆದರೆ ಈಗ ಓಮಿಕ್ರಾನ್‌ ಆತಂಕದ ಹಿನ್ನೆಲೆ ಮತ್ತೆ ಸಂಕಷ್ಟ ಉಂಟಾಗುತ್ತಿದೆ. ಈ ಅವಧಿಯಲ್ಲಿ ಉದ್ಯಮವನ್ನು ರಕ್ಷಣೆ ಮಾಡುವುದು ಅತೀ ಮುಖ್ಯವಾಗಿದೆ. ವ್ಯಾಪಾರದ ನಿರೀಕ್ಷೆಯು ವಿಫಲವಾಗಿದೆ,” ಎಂದು ಹೋಟೆಲ್‌ ವಲಯದ ಸಂಕಷ್ಟವನ್ನು ವಿವರಿಸಿದೆ.

ಬಜೆಟ್‌ 2022-23: ಕೋವಿಡ್‌ನಿಂದ ಆತಿಥ್ಯ ವಲಯ ತತ್ತರ: ಹೋಟೆಲ್‌ ಉದ್ಯಮ ಉಳಿಸುವ ಬೇಡಿಕೆ

ಈ ವಲಯದ ಪ್ರಮುಖ ಬೇಡಿಕೆಗಳು ಏನು?

ಈ ವಲಯದ ಪ್ರಮುಖ ಬೇಡಿಕೆಗಳ ಪೈಕಿ ಹೋಟೆಲ್‌ ಉದ್ಯಮವನ್ನು ಉಳಿಸುವುದು ಆಗಿದೆ. ‘ಮೂಲಸೌಕರ್ಯ’ ಸ್ಥಿತಿ ಅಧಿಕ ಮಾಡಬೇಕಾಗಿದ್ದು, ಇದು ಹೋಟೆಲ್‌ಗಳು ಮತ್ತು ಆತಿಥ್ಯ ವಲಯವು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಸಂಸ್ಥೆಯು ಉಲ್ಲೇಖ ಮಾಡಿದೆ. ಈ ಮೂಲಕ ಹೋಟೆಲ್‌ ಉದ್ಯಮದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸಹಾಯ ಮಾಡಬೇಕು ಎಂದು ಸಂಸ್ಥೆ ಆಗ್ರಹ ಮಾಡಿದೆ.

“ಸಾಲಗಳನ್ನು ಮರುಪಾವತಿಸಲು ದೀರ್ಘಾವಧಿಯ ಅವಕಾಶ ಮೊದಲಾದ ಕ್ರಮಗಳ ಮೂಲಕ ಹೋಟೆಲ್ ಹೂಡಿಕೆಗಳನ್ನು ಹೆಚ್ಚು ಆಕರ್ಷಕ ಮತ್ತು ಸಮರ್ಥನೀಯವನ್ನಾಗಿಸಬಹುದು. ಹೆಚ್ಚಿನ ಹೋಟೆಲ್‌ಗಳು ಇದ್ದರೆ ಹೆಚ್ಚಿನ ಉದ್ಯೋಗಗಳು, ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ,” ಎಂದು ಹೋಟೆಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಚ್‌ಎಐ) ಹೇಳಿದೆ. ಇನ್ನು ಆರ್ಥಿಕತೆಯ ಮೇಲೆ ಈ ಹೋಟೆಲ್‌ ಹಾಗೂ ಆತಿಥ್ಯ ವಲಯದ ಪರಿಣಾಮವು ಅಧಿಕವಾಗಿದೆ ಎಂದು ಒತ್ತಿ ಹೇಳುವ ಅಸೋಸಿಯೇಷನ್, “ಮೂಲಸೌಕರ್ಯ ಸ್ಥಿತಿಯು ಹೋಟೆಲ್‌ಗಳಿಗೆ ಕಡಿಮೆ ತೆರಿಗೆ, ಉಪಯುಕ್ತತೆ ಸುಂಕಗಳು ಮತ್ತು ಯೋಜನೆಗಳಿಗೆ ಸರಳೀಕೃತ ಅನುಮೋದನೆ ಪ್ರಕ್ರಿಯೆಯ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ,” ಎಂದು ಹೇಳಿದೆ.

ಕೇಂದ್ರ ಬಜೆಟ್‌: ಉದ್ಯೋಗಿಗಳಿಗೆ 100,000 ರೂ. ಸ್ಟಾಡರ್ಡ್ ಡಿಡಕ್ಷನ್‌ ನಿರೀಕ್ಷೆ

ಆತಿಥ್ಯ ಉದ್ಯಮವು ಭಾರತದ ಜಿಡಿಪಿಗೆ ಶೇಕಡಾ 9 ರಷ್ಟು ಕೊಡುಗೆ ನೀಡುತ್ತದೆ ಮತ್ತು ಸುಮಾರು 4.5 ಕೋಟಿ ಜನರಿಗೆ ಉದ್ಯೋಗ ನೀಡುತ್ತದೆ ಮತ್ತು ಸುಮಾರು 16 ಕೋಟಿ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ ಎಂದು ಹೋಟೆಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ಉಲ್ಲೇಖಿಸಿದೆ. “ಸಾಂಕ್ರಾಮಿಕ ರೋಗದಿಂದಾಗಿ, ಆತಿಥ್ಯ ಉದ್ಯಮದಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರ ಜೀವನೋಪಾಯಕ್ಕೆ ಅಗಾಧ ಏಟು ಬಿದ್ದಿದೆ. ಸಾಂಕ್ರಾಮಿಕ ನಂತರದ ಆರ್ಥಿಕ ಪುನರುಜ್ಜೀವನದಲ್ಲಿ ಭಾರತೀಯ ಆತಿಥ್ಯ ಕ್ಷೇತ್ರವು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಇದನ್ನು ಭಾರತದ ಆರ್ಥಿಕತಯ ನಾಲ್ಕನೇ ಸ್ತಂಭವೆಂದು ಘೋಷಿಸಲಾಗಿದೆ,” ಎಂದು ವಿವರಿಸಿದೆ.

English summary

Budget 2022-23: Covid Battered Hospitality Sector Demands Infra Status For Hotels

Budget 2022-23: Covid battered hospitality sector demands infra status for hotels. ಬಜೆಟ್ 2022-23

Story first published: Wednesday, January 12, 2022, 19:25 [IST]



Read more…

[wpas_products keywords=”deal of the day”]