Karnataka news paper

ಗಣಿದಣಿ ಜನಾರ್ಧನ ರೆಡ್ಡಿ ಹುಟ್ಟುಹಬ್ಬದಲ್ಲಿ ಕೊರೋನಾ ನಿಯಮ ಉಲ್ಲಂಘನೆ!


Online Desk

ಬಳ್ಳಾರಿ: ಜನವರಿ 11ರಂದು ಮಾಜಿ ಸಚಿವ, ಗಣಿದಣಿ ಜನಾರ್ದನ ರೆಡ್ಡಿ ಅವರು ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು ಬಳ್ಳಾರಿಯಲ್ಲಿ ಕುಟುಂಬಸ್ಥರೊಂದಿಗೆ ಸೇರಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಈ ವೇಳೆ ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಹುಟ್ಟುಹಬ್ಬ ಹಿನ್ನಲೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನಕ್ಕೆ ಜನಾರ್ದನ ರೆಡ್ಡಿ ಆಗಮಿಸಿದ್ದು, ಈ ವೇಳೆ ನೂಕು ನುಗ್ಗಲು ಕಂಡು ಬಂದಿತ್ತು. ಅಲ್ಲದೆ ಆಪ್ತ ಗೆಳೆಯನ ಹುಟ್ಟಹಬ್ಬಕ್ಕೆ ಸಚಿವ ಬಿ.ಶ್ರೀರಾಮುಲು ಕೂಡ ಮಾಸ್ಕ್ ಧರಿಸದೆ ದೇವಾಲಯಕ್ಕೆ ಆಗಮಿಸಿದ್ದಾರೆಂದ ಹೇಳಲಾಗುತ್ತಿದೆ. 

ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲು ಬಂದಿರುವ ಕೆಲ ಅಭಿಮಾನಿಗಳು ಕೂಡ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದ್ದಾರೆಂದು ತಿಳಿದುಬಂದಿದೆ.

ಅಭಿಮಾನಿಗಳು ಮಾಜಿ ಸಚಿವ ರೆಡ್ಡಿಗೆ 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯಗಳಿಂದ ತುಲಾಭಾರ ನೆರವೇರಿಸಿದರು.

ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಬಳ್ಳಾರಿಗೆ ತೆರಳಲು ಸರ್ವೋಚ್ಛ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.



Read more

[wpas_products keywords=”deal of the day”]