Karnataka news paper

ಶಾಲಾ ವಿದ್ಯಾರ್ಥಿಗಳ ಜೀವದ ಜೊತೆಗೆ ಚೆಲ್ಲಾಟವಾಡಬೇಡಿ: ಕಾಂಗ್ರೆಸ್ ನಾಯಕ ಎಚ್. ಕೆ. ಪಾಟೀಲ್ ಗರಂ


ಹೈಲೈಟ್ಸ್‌:

  • ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬೇಡಿ
  • ಜಿಲ್ಲಾಡಳಿತ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು
  • 450 ಹಾಸಿಗೆಗಳ ಆಸ್ಪತ್ರೆ ಶೀಘ್ರವೇ ಬಳಕೆಗೆ ಸಿಗಲಿ: ಎಚ್. ಕೆ. ಪಾಟೀಲ್

ಗದಗ: ಶಾಲೆಗಳ ಬಂದ್ ವಿಚಾರವಾಗಿ ಜಿಲ್ಲಾಡಳಿತ ತಜ್ಞರನ್ನು ಕರೆದು ಅವರ ಶಿಫಾರಸ್ಸಿನಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬಾರದು ಎಂದು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಶಾಸಕ ಎಚ್. ಕೆ. ಪಾಟೀಲ್ ಹೇಳಿದರು.

ಜಿಲ್ಲೆಯಲ್ಲಿ ಒಂದು ಓಮಿಕ್ರಾನ್ ಸಂಭವನೀಯ ಪ್ರಕರಣದ ಸುದ್ದಿ ಇದ್ದು, ಹದಿನೈದು ದಿನಗಳು ಕಳೆಯುತ್ತಾ ಬಂದರೂ ಖಚಿತವಾಗಿಲ್ಲ. ಅದ್ಯಾಕೆ ಆಗ್ತಿಲ್ಲ ಅಂತಾ ಗೊತ್ತಿಲ್ಲ. ಆದರೆ, ಜಿಲ್ಲಾಡಳಿತ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ, ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. 450 ಹಾಸಿಗೆಗಳ ಆಸ್ಪತ್ರೆ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಆಸ್ಪತ್ರೆಯ ಕಟ್ಟಡಕ್ಕೆ ಬಣ್ಣ ಹಚ್ಚುವ ಕಾರ್ಯ ಪ್ರಾರಂಭವಾಗಿದ್ದು, ಶೀಘ್ರವೇ ಆಸ್ಪತ್ರೆ ಜನಸೇವೆಗೆ ಲೋಕಾರ್ಪಣೆಗೊಳ್ಳಬೇಕು. ಇನ್ನೂ ಬಹಳಷ್ಟು ಕೆಲಸ ಬಾಕಿ ಇದ್ದು, ಮೂರನೇ ಅಲೆಯ ವೇಳೆ ಹೆಚ್ಚಿನ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ಆಸ್ಪತ್ರೆಯ ಸ್ವಲ್ಪ ಭಾಗವನ್ನಾದರೂ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಒಟ್ಟು 16 ಓಮಿಕ್ರಾನ್ ಕೇಸ್‌ಗಳಿವೆ: ಎಚ್. ಕೆ. ಪಾಟೀಲ್ ಸ್ಫೋಟಕ ಹೇಳಿಕೆ..!
ಇನ್ನು, ಲಾಕ್ ಡೌನ್ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ರಾಷ್ಟ್ರ ಮಟ್ಟದಲ್ಲಿಯೂ ಲಾಕ್ ಡೌನ್ ಚಿಂತನೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದರಿಂದ ಬಡವರ ಬದುಕು ಅಸಹನೀಯವಾಗುತ್ತದೆ. ಈ ವೇಳೆ ಬಡವರಿಗೆ ಅನುಕೂಲವಾಗುವಂತೆ ಲಾಕ್ ಡೌನ್ ಜೊತೆಗೆ ಪರಿಹಾರದ ಬಗ್ಗೆಯೂ ಮಾಡಬೇಕು ಎಂದರು.

ಮೇಕೆದಾಟು ಪಾದಯಾತ್ರೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಪಾದಯಾತ್ರೆ ಇವತ್ತು, ನಿನ್ನೆಯ ನಿರ್ಣಯ ಅಲ್ಲ. ತಿಂಗಳ ಹಿಂದೆಯೇ ನಿರ್ಧರಿಸಿತ್ತು. ಈ ವೇಳೆ ಸರ್ವ ಪಕ್ಷಗಳ ಸಭೆ ಕರೆಯಲಿಲ್ಲ. ಕೇಂದ್ರ ಸರ್ಕಾರ ಬಳಿ ನಿಯೋಗ ತೆಗೆದುಕೊಂಡು ಹೋಗಲಿಲ್ಲ. ಕೆಲಸ ಪ್ರಾರಂಭಿಸಲಿಲ್ಲ. ಏನಾಗಿದೆ ಎಂಬ ಬಗ್ಗೆ ಪಾರದರ್ಶಕವಾಗಿ ಹೇಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾದಯಾತ್ರೆ ಮಾಡಲಾಗುತ್ತಿದೆ. ಇವತ್ತಿನವರೆಗೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾದಯಾತ್ರೆ ವೇಳೆ ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತಿದ್ದಾರೆ. ಹೀಗಿದ್ದಾಗ್ಯೂ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್. ಕೆ. ಪಾಟೀಲ್ ಹೇಳಿದರು.

ಮೇಕೆದಾಟು ನಂತರ ಕೃಷ್ಣಾ, ಮಹದಾಯಿ ಹೋರಾಟ: ಎಚ್‌ಕೆ ಪಾಟೀಲ್‌

hk patil



Read more

[wpas_products keywords=”deal of the day sale today offer all”]