
ವಿಶ್ವಸಂಸ್ಥೆ/ಜಿನಿವಾ: ಸುಲ್ಲಿ ಡೀಲ್ಸ್‌ನಂತಹ ಗುಂಪಿನವರು ಭಾರತದಲ್ಲಿ ಮಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಿರುವುದನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
‘ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ. ಹರಾಜಿಗೆ ಇದ್ದಾರೆ ಎಂಬ ಒಕ್ಕಣಿ ಮೂಲಕ ಅವರ ಭಾವಚಿತ್ರಗಳನ್ನು ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದು ಖಂಡನೀಯ ಎಂದು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಡಾ.ಫರ್ನಾಂಡ್ ಡಿ.ವಾರೆನ್ನಸ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ತಕ್ಷಣ ಕ್ರಮಕೈಗೊಳ್ಳಬೇಕು. ಸುಲ್ಲಿ ಡೀಲ್ಸ್ ಆ್ಯಪ್ ದ್ವೇಷ ಭಾಷಣದ ಒಂದು ರೂಪವಾಗಿದೆ. ಇದನ್ನು ಖಂಡಿಸಬೇಕು. ಇಂತಹ ಕೃತ್ಯಗಳು ನಡೆದಾಗ ತಕ್ಷಣ ಕ್ರಮ ಜರುಗಿಸಬೇಕು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಕಳೆದ ವಾರ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಓಂಕಾರೇಶ್ವರ ಠಾಕೂರ್ ಅವರನ್ನು ಬಂಧಿಸಿದ್ದು ಈತ ಸುಲ್ಲಿ ಡೀಲ್ಸ್‌ನ ಸೃಷ್ಟಿಕರ್ತ ಎಂದು ಹೇಳಲಾಗಿದೆ.
ಸಾಮಾಜಿಕ ತಾಣ ಖಾತೆ ಡಿಲೀಟ್ ಮಾಡಿದ್ದ ‘ಸುಲ್ಲಿ ಡೀಲ್ಸ್‘ ಆ್ಯಪ್ ಸೃಷ್ಟಿಕರ್ತ
Read more from source
[wpas_products keywords=”deals of the day offer today electronic”]