Karnataka news paper

ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ಆದೇಶ ಪಾಲಿಸಲು ಸಿದ್ಧ: ಸಿದ್ದರಾಮಯ್ಯ


ರಾಮನಗರ: ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ನೀಡುವ ಸೂಚನೆಯನ್ನು‌ ಪಾಲಿಸಲು ನಾವು ಸಿದ್ಧರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಪಾದಯಾತ್ರೆ ಬಗ್ಗೆ ಹೈಕೋರ್ಟ್ ಚಾಟಿ ಬೀಸಿರುವ ಕುರಿತು ಅವರು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಹೈಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಗೊತ್ತಿಲ್ಲ. ಕಾನೂನು‌ ರೀತಿಯಲ್ಲೂ ಹೋರಾಟ ಮುಂದುವರಿಸುತ್ತೇವೆ. ಸದ್ಯಕ್ಕೆ ಪಾದಯಾತ್ರೆ ಮುಂದುವರಿಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ… ಕೆಪಿಸಿಸಿ ಪಾದಯಾತ್ರೆ: ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗ ತರಾಟೆ

ಮಾಜಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ನ್ಯಾಯಾಲಯದ ಬಗ್ಗೆ ನಮಗೆ ಗೌರವ ಇದೆ. ಅದರ ಆದೇಶಕ್ಕೆ ತಲೆಬಾಗುತ್ತೇವೆ ಎಂದರು.

ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಕೆ.ಪಿ. ದೊಡ್ಡಿ ಗ್ರಾಮದಲ್ಲಿ ಊಟದ ವಿರಾಮದ ವೇಳೆ ಕಾಂಗ್ರೆಸ್ ನಾಯಕರು ಸಭೆ ನಡೆಸಿದರು.

ಇದನ್ನೂ ಓದಿ… ಕಾಂಗ್ರೆಸ್‌ ಸೋಮಾರಿತನದಿಂದ ಮೇಕೆದಾಟು ಯೋಜನೆ ವಿಳಂಬ: ಸಾಹಿತಿ ದೊಡ್ಡರಂಗೇಗೌಡ



Read more from source

[wpas_products keywords=”deal of the day sale today kitchen”]