Karnataka news paper

ಮುಂದಿನ ದಿನಗಳಲ್ಲಿ ಸಿಎನ್‌ಜಿ ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ


ಮಂಗಳೂರು: ಮುಂಬರುವ ದಿನಗಳಲ್ಲಿ ಸಿಎನ್‌ಜಿ (ಕಂಪ್ರೆಸ್‌ಡ್‌ ನ್ಯಾಚುರಲ್‌ ಗ್ಯಾಸ್‌) ಇಂಧನ ಆಧಾರಿತ ವಾಹನಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಅದರ ಇಂಧನದ ಮಾರಾಟದ ಪ್ರಮಾಣವೂ ಅಧಿಕವಾಗುವ ಸಂಭವವಿರುವುದರಿಂದ ಸಿಎನ್‌ಜಿ ಇಂಧನದ ಬೆಲೆಯಲ್ಲಿಯೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆಶಯ ವ್ಯಕ್ತಪಡಿಸಿದರು.

ಅವರು ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನದ ಕೊರತೆ, ಬೇಡಿಕೆ, ಪೂರೈಕೆ ಹಾಗೂ ಬೆಲೆ ಏರಿಕೆಯ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಿ.ಎನ್‌.ಜಿ ಇಂಧನ ಪ್ರತಿ ಕೆ.ಜಿ.ಗೆ 63 ರೂ. ಇದೆ. ಅದನ್ನು ಕೆ.ಜಿಗೆ 57 ರೂಪಾಯಿಗೆ ಇಳಿಕೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಿ.ಎನ್‌.ಜಿ ಬಳಕೆದಾರರ ಸಂಘ ಹಾಗೂ ಮಂಗಳೂರು ನಾಗರಿಕ ಸಮಿತಿಯ ಸದಸ್ಯರು ಮನವಿ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಇಂಧನ ಬೆಲೆ ಕಡಿಮೆಯಾಗುವ ಭರವಸೆ ನೀಡಿದರು.

ಸಿಎನ್‌ಜಿ ಬಳಸಿ: ನಾಲ್ಕು ರಾಜ್ಯಗಳಿಗೆ ಸೂಚನೆ
ಜಿಲ್ಲೆಯಲ್ಲಿರುವ ಇತರ ಸಿ.ಎನ್‌.ಜಿ ಬಂಕ್‌ಗಳಲ್ಲಿ ಸಿಲಿಂಡರ್‌ ಮೂಲಕ ಇಂಧನವನ್ನು ಪೂರೈಕೆ ಮಾಡುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಯಾವುದೇ ಕೊರತೆಯುಂಟಾಗದಂತೆ ಬೇಡಿಕೆಯನುಸಾರವಾಗಿ ಹೆಚ್ಚಿನ ಸಿಲಿಂಡರ್‌ಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಗೇಲ್‌, ಬಿ.ಪಿ.ಸಿ.ಎಲ್‌., ಐ.ಒ.ಸಿ.ಎಲ್‌. ಹಾಗೂ ಎಂ.ಆರ್‌.ಪಿ.ಎಲ್‌.ನ ಮ್ಯಾನೇಜರ್‌ಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಹೊಸ ವ್ಯಾಗನ್‌ ಆರ್‌ ಸಿಎನ್‌ಜಿ ಎಂಜಿನ್‌ನಲ್ಲೂ ಲಭ್ಯ
ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್‌ ಎಂ ವರ್ಣೇಕರ್‌, ಒ.ಎನ್‌.ಜಿ.ಸಿ, ಬಿ.ಪಿ.ಸಿ.ಎಲ್‌., ಎಂ.ಆರ್‌.ಪಿ.ಎಲ್‌. ಸಂಸ್ಥೆಯ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಸಿಎನ್‌ಜಿ ಬಳಕೆದಾರರ ಸಂಘ ಹಾಗೂ ಮಂಗಳೂರು ನಾಗರಿಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.



Read more

[wpas_products keywords=”deal of the day sale today offer all”]