Karnataka news paper

ಟ್ರೈಲರ್‌ ನೋಡಿ: ಕಲ್ಯಾಣ್ ದೇವ್‌–ರಚಿತಾ ರಾಮ್‌ ಕೆಮಿಸ್ಟ್ರಿ ‘ಸೂಪರ್​ ಮಚ್ಚಿ’ 


ಕನ್ನಡತಿ ರಚಿತಾ ರಾಮ್ ಅಭಿನಯದ ತೆಲುಗಿನ ‘ಸೂಪರ್​ ಮಚ್ಚಿ’  ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಟ ಕಲ್ಯಾಣ್​ ದೇವ್​ ಜತೆ ತೆರೆ ಹಂಚಿಕೊಂಡಿರುವ ಅವರು ಮೊದಲ  ಸಲ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಕನ್ನಡದಲ್ಲಿ ಬೇಡಿಕೆ ಇದ್ದರೂ ರಚಿತಾ ಪರಭಾಷೆಯ ಚಿತ್ರರಂಗದತ್ತಲೂ ಕಣ್ಣಿಟ್ಟಿದ್ದಾರೆ

ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಟ್ರೇಲರ್​ ಲಕ್ಷಾಂತರ ವೀಕ್ಷಣೆ ಕಂಡಿದೆ. ಅಭಿಮಾನಿಗಳು ಕೂಡ ಉತ್ತಮ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. 

ಕೊರೊನಾ ನಡುವೆಯೂ  ‘ಸೂಪರ್​ ಮಚ್ಚಿ’ ಚಿತ್ರ ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಪುಲಿ ವಾಸು ನಿರ್ದೇಶನದ ಈ ಸಿನಿಮಾಗೆ ತಮನ್‌ ಸಂಗೀತ ನೀಡಿದ್ದಾರೆ. 

ಇತ್ತೀಚೆಗಷ್ಟೇ ರಚಿತಾ ನಟನೆಯ ಕನ್ನಡದ ‘ಲವ್​ ಯೂ ರಚ್ಚು’ ಸಿನಿಮಾ ತೆರೆಕಂಡು ಯಶಸ್ವಿಯಾಗಿದೆ. ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರದಲ್ಲೂ ರಚಿತಾ ಅಭಿನಯಿಸಿದ್ದು ಈ ಚಿತ್ರ ಬಿಡುಗಡೆ ಸಿದ್ಧವಾಗಿದೆ. 



Read More…Source link

[wpas_products keywords=”deal of the day party wear for men wedding shirt”]