Karnataka news paper

ಶಮಿಗೆ ಪದೇ-ಪದೆ ವಾರ್ನಿಂಗ್‌ ಕೊಡುತ್ತಿದ್ದ ಅಂಪೈರ್‌ ವಿರುದ್ಧ ಕೊಹ್ಲಿ ಗರಂ!


ಹೈಲೈಟ್ಸ್‌:

  • ಬೌಲಿಂಗ್‌ನಲ್ಲಿ ಮೊಹಮ್ಮದ್‌ ಶಮಿಗೆ ಪದೇ-ಪದೆ ವಾರ್ನಿಂಗ್‌ ಕೊಟ್ಟಿದ್ದ ಅಂಪೈರ್‌.
  • ಮೈದಾನದಲ್ಲಿ ಅಂಪೈರ್‌ ಮರೈಸ್‌ ಎರಾಸ್ಮಸ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ ಕೊಹ್ಲಿ.
  • ಮೂರನೇ ಟೆಸ್ಟ್‌ನಲ್ಲಿ ಮುಖಾಮುಖಿ ಸೆಣಸುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ.

ಕೇಪ್‌ ಟೌನ್‌:ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್‌ ಪಂದ್ಯದ ಎರಡನೇ ದಿನ ಬೌಲ್‌ ಮಾಡುತ್ತಿದ್ದ ಮೊಹಮ್ಮದ್‌ ಶಮಿಗೆ ಪದೇ-ಪದೆ ಎಚ್ಚರಿಕೆ ನೀಡುತ್ತಿದ್ದ ಆನ್‌ ಫೀಲ್ಡ್‌ ಅಂಪೈರ್‌ ಮರೈಸ್ ಎರಾಸ್ಮಸ್ ವಿರುದ್ಧ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಗರಂ ಆಗಿದ್ದ ಘಟನೆ ನಡೆಯಿತು.

ಬುಧವಾರ ಬೆಳಗ್ಗೆ ಇಲ್ಲಿನ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 17 ರನ್‌ಗಳಿಂದ ಎರಡನೇ ದಿನದಾಟ ಶುರು ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ತಲಾ ಒಂದೊಂದು ವಿಕೆಟ್‌ ಪಡೆಯುವ ಮೂಲಕ ಜಸ್‌ಪ್ರಿತ್‌ ಬುಮ್ರಾ ಹಾಗೂ ಉಮೇಶ್‌ ಯಾದವ್ ಆರಂಭಿಕ ಆಘಾತ ನೀಡಿದ್ದರು.

ವಿಕೆಟ್‌ ಪಡೆಯದೆ ಇದ್ದರೂ ಹಿರಿಯ ವೇಗಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್‌ ದಾಳಿ ನಡೆಸಿದರು. ಆ ಮೂಲಕ ಹಲವು ಬಾರಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಎಡ್ಜ್‌ ಮಾಡಿಸಿದ್ದರು. ಆದರೆ ಬೌಲಿಂಗ್‌ ಮುಗಿಸಿ ಫಾಲೋ ಅಪ್‌ ಮುಗಿಸುವ ವೇಳೆ ಶಮಿ ಪಿಚ್‌ನ ಅಪಾಯಕಾರಿ ಜಾಗವನ್ನು ತುಳಿಯುತ್ತಿದ್ದರು ಎಂದು ಆನ್‌ ಫೀಲ್ಡ್‌ ಅಂಪೈರ್‌ ಮರೈಸ್ ಎರಾಸ್ಮಸ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ ಸ್ಕೋರ್‌ಕಾರ್ಡ್

ಇದನ್ನು ಗಮನಿಸಿದ ಆನ್‌ ಫೀಲ್ಡ್ ಅಂಪೈರ್ ಎರಾಸ್ಮಸ್ ಪಿಚ್‌ನ ಅಪಾಯಕಾರಿ ಜಾಗವನ್ನು ತುಳಿಯದಂತೆ ಮೊಹಮ್ಮದ್‌ ಶಮಿಗೆ ಹಲವು ಬಾರಿ ವಾರ್ನಿಂಗ್‌ ಕೊಟ್ಟಿದ್ದರು. ಇದು ನಾಯಕ ವಿರಾಟ್‌ ಕೊಹ್ಲಿ ಬೇಸರಕ್ಕೆ ಕಾರಣವಾಯಿತು. ಈ ವೇಳೆ ಅಂಪೈರ್‌ ಬಳಿ ತೆರಳಿದ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಸ್‌ನ ಮುಂದಿನ ಜಾಗ ಅಥವಾ ಅಪಾಯಕಾರಿ ಜಾಗದಿಂದ ಹೊರಗುಳಿಯುವಂತೆ ಬೌಲರ್‌ಗಳಿಗೆ ಎಚ್ಚರಿಕೆ ನೀಡುವ ಹಕ್ಕು ಆನ್‌ ಫೀಲ್ಡ್‌ ಅಂಪೈರ್‌ಗಳಿಗಿದೆ. ಹಾಗಾಗಿ ಬೌಲರ್‌ಗಳು ಅದರಲ್ಲೂ ವಿಶೇಷವಾಗಿ ವೇಗಿಗಳು ಬೌಲ್‌ ಮಾಡಿ ಫಾಲೋ ಅಪ್‌ ಮುಗಿಸುವ ವೇಳೆ ಪಿಚ್‌ನ ಅಪಾಯಕಾರಿ ಜಾಗದಿಂದ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

IND vs SA 3rd Test Live: 3 ವಿಕೆಟ್‌ ಕಳೆದುಕೊಂಡ ಆಫ್ರಿಕಾಗೆ ಪೀಟರ್ಸನ್‌ ಆಸರೆ!

ಅಂದಹಾಗೆ, ಆರಂಭಿಕ ಸ್ಪೆಲ್‌ನಲ್ಲಿ ಅಂಪೈರ್‌ಗೆ ಕ್ಲೋಸ್‌ ಆಗಿ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಬೌಲ್‌ ಮಾಡಿದರೂ ಮೊಹಮ್ಮದ್‌ ಶಮಿ ಫಾಲೋ-ಅಪ್‌ ಮುಗಿಸುವ ವೇಳೆ ಪಿಚ್‌ನ ಅಪಾಯಕಾರಿ ಜಾಗದಿಂದ ದೂರ ಉಳಿಯುತ್ತಿರುವುದು ವಿಡಿಯೋ ರೀಪ್ಲೆನಲ್ಲಿ ಸ್ಪಷ್ಟವಾಗಿತ್ತು.

ಶಮಿ ಹಾಗೂ ಬುಮ್ರಾ ಇಬ್ಬರೂ ಆರಂಭಿಕ ಸ್ಪೆಲ್‌ನಲ್ಲಿ ತಲಾ 5 ಓವರ್‌ ಬೌಲ್‌ ಮಾಡಿದ್ದರು. ಇದರಲ್ಲಿ ಜಸ್‌ಪ್ರಿತ್‌ ಬುಮ್ರಾ, ಏಡೆನ್‌ ಮಾರ್ಕ್ರಮ್ ಅವರನ್ನು ಅದ್ಭುತವಾಗಿ ಕ್ಲೀನ್ ಬೌಲ್ಡ್ ಮಾಡಿದ್ದರು. ಆದರೆ, ಮೊಹಮ್ಮದ್‌ ಶಮಿ ತಮ್ಮ ಮಾರಕ ದಾಳಿಯಿಂದ ಕೀಗನ್‌ ಪೀಟರ್ಸನ್‌ ಹಾಗೂ ಕೇಶವ್‌ ಮಹಾರಾಜ್‌ ಅವರನ್ನು ನಿಯಮಿತವಾಗಿ ಬೀಟ್‌ ಮಾಡುತ್ತಿದ್ದರು. ಆದರೆ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

ನಂತರ ಬೌಲಿಂಗ್‌ಗೆ ಇಳಿದ ಉಮೇಶ್‌ ಯಾದವ್‌ ಮೊದಲನೇ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ಆಗಿ ಬಂದಿದ್ದ ಕೇಶವ್‌ ಮಹಾರಾಜ್‌(25) ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದರು. ಇನ್ನು ಎರಡನೇ ದಿನದಾಟ ಭೋಜನ ವಿರಾಮದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 35 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿದ್ದು, ಇನ್ನೂ 123 ರನ್‌ ಹಿಂದಿದೆ.



Read more

[wpas_products keywords=”deal of the day gym”]