ಹೈಲೈಟ್ಸ್:
- ನೆಲ ಬಾಂಬ್ ಪತ್ತೆ ಹಚ್ಚಿ ಸಾವಿರಾರು ಮಂದಿಯ ಜೀವ ಉಳಿಸಿದ್ದ ಮೂಷಿಕ
- 8ನೇ ವಯಸ್ಸಿನಲ್ಲಿ ಮೃತ ಪಟ್ಟ ಹಿರೋ ರ‍್ಯಾಟ್ ಮಗಾವ
- ಕ್ಯಾಂಬೋಡಿಯಾದ ಸೂಪರ್ ಹೀರೋ ಆಗಿದ್ದ ಮಗಾವ ಇಲಿ
ನೆಲ ಬಾಂಬ್ ಹಾಗೂ ಸ್ಫೋಟಕಗಳನ್ನು ಪತ್ತೆ ಹಚ್ಚುವಲ್ಲಿ ಪರಿಣಿತಿ ಹೊಂದಿದ್ದ ಈ ಇಲಿ, ಇದೀಗ ಸಾವಿರಾರು ಮಂದಿಯ ಜೀವ ಉಳಿಸಿದ ಧನ್ಯತೆಯೊಂದಿಗೆ ಉಸಿರು ಚೆಲ್ಲಿದೆ.
ದಶಕಗಳ ಕಾಲ ನಾಗರೀಕ ಯುದ್ಧಕ್ಕೆ ತುತ್ತಾಗಿ ಹಿಂಡಿ ಹಿಪ್ಪೆಯಾಗಿದ್ದ ಕಾಂಬೋಡಿಯಾದಲ್ಲಿ ನೆಲ ಬಾಂಬ್ ದಾಳಿಗೆ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ನೆಲ ಬಾಂಬ್ ದಾಳಿಗೊಳಗಾದ ರಾಷ್ಟ್ರಗಳಲ್ಲಿ ಕಾಂಬೋಡಿಯಾವೂ ಒಂದಾಗಿದ್ದು, ನೆಲ ಬಾಂಬ್ ದಾಳಿಗೆ ಅಲ್ಲಿನ ಜನ ಹೈರಾಣಾಗಿದ್ದಾರೆ.
ದಿನ ಬೆಳಗಾದರೆ ಸ್ಫೋಟಕಗಳ ಸದ್ದಿನೊಂದಿಗೆ ಎಚ್ಚರಗೊಳ್ಳುವ ಅಲ್ಲಿನ ಜನರ ಪ್ರೀತಿ ‘ಹೀರೋ ರ‍್ಯಾಟ್’ ಆಗಿದ್ದ ಮಗಾವ ತನ್ನ ಭೂಲೋಕದ ಪ್ರಯಾಣ ಮುಗಿಸಿದೆ. ಮಗಾವ ಸಾವಿಗೆ ಹಲವು ಮಂದಿ ಕಂಬನಿ ಮಿಡಿದಿದ್ದಾರೆ.
ಅಂತಾರಾಷ್ಟ್ರೀಯ ದತ್ತಿ ಸಂಸ್ಥೆ ಅಪೋಪೊ (APOPO) ಸುಪರ್ದಿಯಲ್ಲಿದ್ದ ಈ ಇಲಿ ವಯೋಸಹವಾಗಿ ಮೃತ ಪಟ್ಟಿದೆ ಎಂದು ಸಂಸ್ಥೆ ಹೇಳಿದೆ. ಒಟ್ಟು 5 ವರ್ಷ ನೆಲಬಾಂಬ್ ಪತ್ತೆದಾರಿಯಾಗಿ ಮಗಾವ ಕಾರ್ಯ ನಿರ್ವಹಿಸಿತ್ತು.
‘ಕಳೆದ ವಾರ ಆರೋಗ್ಯವಾಗಿಯೇ ಇದ್ದ ಮಗಾವ ಉತ್ಸಾಹದಿಂದಲೇ ಆಟವಾಡುತ್ತಿದ್ದ. ಆದರೆ ವಾರಾಂತ್ಯದ ವೇಳೆಗೆ ಸೊರಗಿ ಆತ, ಊಟ ಮಾಡುವುದನ್ನು ಕಡಿಮೆ ಮಾಡಿದ್ದ. ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಂಡಿದ್ದ’ ಎಂದು ಅಪೋಪೋ ಪತ್ರಿಕಾ ಬಿಡುಗಡೆಯಲ್ಲಿ ಹೇಳಿದೆ.
ಮಗಾವನಿಂದಾಗಿ ಕಾಂಬೋಡಿಯಾದ ಜನರು ಹೆಚ್ಚು ಸುರಕ್ಷಿತವಾಗಿ ಜೀವನ ನಡೆಸಲು, ಕೆಲಸಕ್ಕೆ ಹೋಗಲು ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿತ್ತು. ಆತನ ಪತ್ತೆದಾರಿ ಕೆಲಸದಿಂದಾಗಿ ಭಾರೀ ದೊಡ್ಡದಾಗಿ ನಡೆಯಬೇಕಿದ್ದ ಅನಾಹುತಗಳು ತಪ್ಪವೆ. ಕಾಂಬೋಡಿಯಾದ ಜನರನ್ನು ಕ್ಷೇಮವಾಗಿಡಲು ಆತನ ಪಾತ್ರ ದೊಡ್ಡದು ಎಂದು ಮಗಾವನ ಕುರಿತಾಗಿ ಅಪೋಪೊ ಹೇಳಿದೆ.
ಆಫ್ರಿಕನ್ ಮೂಲದವನಾಗಿದ್ದ ಮಗಾವಗೆ 2020ರಲ್ಲಿ ಬ್ರಿಟನ್‌ನ ಪ್ರಾಣಿ ಸಂಕಕ್ಷಣಾ ಸಂಸ್ಥೆಯೊಂದು ಜೀವ ಉಳಿಸುವ ಶೌರ್ಯ ಮತ್ತು ಕರ್ತವ್ಯಕ್ಕೆ ಪ್ರಜ್ಞೆಗೆ ಚಿನ್ನದ ಪದಕ ನೀಡಿ ಗೌರವಿಸಿತ್ತು.
ನಾಗರಿಕ ಯುದ್ಧದಿಂದ ಅಲ್ಲಿ ನೆಲಬಾಂಬ್‌ಗಳ ಸ್ಫೋಟ ಸಾಮಾನ್ಯವಾಗಿದ್ದು, ವಿಶ್ವದಲ್ಲಿ ಪ್ರತೀ ಸಾವಿರ ಜನಸಂಖ್ಯೆಗೆ ಅತೀ ಹೆಚ್ಚು ವಿಕಲಾಂಗರು ಇರುವ ದೇಶ ಎನ್ನುವ ಅಪಖ್ಯಾತಿ ಕಾಂಬೋಡಿಯದ್ದು. ಸುಮಾರು 40,000 ಸಾವಿರ ಮಂದಿ ಇಂಥ ಸ್ಪೋಟದಿಂದಾಗಿ ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ.
Read more
[wpas_products keywords=”deal of the day sale today offer all”]