
ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೇನು?
ಯಾವುದೇ ಆದಾಯ ತೆರಿಗೆ ಕಡಿತವು ಮೂಲತಃ ತೆರಿಗೆ ಇಲಾಖೆಯು ಆದಾಯವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಆಧಾರದ ಮೇಲೆ ತೆರಿಗೆದಾರರಿಂದ ಪರಿಹಾರವನ್ನು ಪಡೆಯಲು ನೀಡುವ ಪ್ರೋತ್ಸಾಹವಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ವೈದ್ಯಕೀಯ ಮತ್ತು ಸಾರಿಗೆ ವೆಚ್ಚಗಳನ್ನು ಅನುಮತಿಸುವ ಸಂಬಳದ ಆದಾಯದಿಂದ ಮಾಡಲಾಗುವ ಕಡಿತವಾಗಿದೆ. ಇದನ್ನು ಉದ್ಯೋಗಿಗಳ ಒಟ್ಟು ಸಂಬಳದಿಂದ ಕಡಿತ ಮಾಡಲಾಗುತ್ತದೆ. ಹಾಗೆಯೇ ವೆಚ್ಚಗಳ ಯಾವುದೇ ಪುರಾವೆ ಇಲ್ಲದೆಯೇ ಈ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ಉದ್ಯೋಗಿಗಳಿಗೆ ತೆರಿಗೆ ಹೊರೆಯನ್ನು ಕಡಿತ ಮಾಡಲು ಸಹಾಯಕವಾಗಿದೆ.
2018-19ನೇ ಸಾಲಿನವರೆಗೆ, ಅಂದರೆ ಸ್ಟಾಡರ್ಡ್ ಡಿಡಕ್ಷನ್ ಆರಂಭ ಆಗುವುದಕ್ಕೂ ಮುನ್ನ ಸಾರಿಗೆ ಭತ್ಯೆ ಮತ್ತು ವೈದ್ಯಕೀಯ ಭತ್ಯೆ ರೂ 19,200 ಮತ್ತು ರೂ 15,000 ವೇತನದಾರರಿಗೆ ತಮ್ಮ ತೆರಿಗೆಯ ಆದಾಯದಿಂದ ಪರಿಹಾರವನ್ನು ಪಡೆಯಲು ಸಾಧ್ಯವಿತ್ತು. ಟ್ಟಾರೆಯಾಗಿ, ಇದರರ್ಥ 34,200 ರೂ ಕಡಿತಗೊಳಿಸಲಾಗುತ್ತಿತ್ತು. ಇದನ್ನು ಬಳಿಕ ಸ್ಟ್ಯಾಂಡರ್ಡ್ ಡಿಡಕ್ಷನ್ ಮೂಲಕ ರೂ 50,000 ಕ್ಕೆ ಹೆಚ್ಚಿಸಲಾಯಿತು. ಪ್ರಮುಖವಾಗಿ ಈ ಸ್ಟಾಡರ್ಡ್ ಡಿಡಕ್ಷನ್ ಸಂಬಳದ ಹೊರೆಯನ್ನು ಕಡಿಮೆ ಮಾಡುತ್ತದೆ.

ಕೇಂದ್ರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಏಕೆ ಹೆಚ್ಚಳ ಸಾಧ್ಯತೆ?
ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಹೆಚ್ಚಿದ ವೈದ್ಯಕೀಯ ಬಿಲ್‌ಗಳು ಮತ್ತು ಮನೆಯಿಂದ ಕೆಲಸ ಮಾಡುವುದರಿಂದ ಹೆಚ್ಚಿದ ವೆಚ್ಚಗಳಿಂದಾಗಿ ಉದ್ಯೋಗಿಗಳು ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ಉದ್ಯೋಗಿಗಳು ತಮ್ಮ ಕಛೇರಿಯ ಕೆಲಸವನ್ನು ಮಾಡಲು ತಾವಾಗಿಯೇ ಖರ್ಚು ಮಾಡಬೇಕಾಗಿ ಬರುತ್ತಿದೆ. ಅಲ್ಲದೆ, ಮನೆಯಿಂದಲೇ ಕೆಲಸ ಮಾಡುವುದು ವಿದ್ಯುತ್ ಮತ್ತು ಇಂಟರ್ನೆಟ್ ಬಿಲ್‌ಗಳನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಕೆಲಸ ಮಾಡುವ ಮಾಡಬೇಕಾದ ಖರ್ಚು ಅಧಿಕವಾಗಿದೆ. ಆದ್ದರಿಂದ ಸಂಬಳ ಪಡೆಯುವ ಉದ್ಯೋಗಿಗಳು, ಇತರ ದೇಶಗಳು ನೀಡಿದ ರೀತಿಯಲ್ಲಿ ಸರ್ಕಾರದಿಂದ ಪ್ರಮಾಣಿತ ಕಡಿತದ ರೂಪದಲ್ಲಿ ಸ್ವಲ್ಪ ಪರಿಹಾರವನ್ನು ನಿರೀಕ್ಷಿಸುತ್ತಾರೆ.

ಖರ್ಚು ಹೆಚ್ಚಿಸಿದ ವರ್ಕ್ ಫ್ರಮ್ ಹೋ
ಡೆಲಾಯ್ಟ್ ಇಂಡಿಯಾದ ಪೂರ್ವ-ಬಜೆಟ್ ನಿರೀಕ್ಷೆಗಳು 2022ರ ಪ್ರಕಾರ “ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು ‘ವರ್ಕ್ ಫ್ರಮ್ ಹೋಮ್’ಗಾಗಿ ಅಧಿಕ ಖರ್ಚು ಮಾಡುತ್ತಿದ್ದಾರೆ. ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ವಿದ್ಯುತ್, ಪೀಠೋಪಕರಣಗಳು ಇತ್ಯಾದಿಗಳಿಗೆ ಅಧಿಕ ಖರ್ಚನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಆದ್ದರಿಂದ, ಈ ವೆಚ್ಚಗಳನ್ನು ಪೂರೈಸಲು ಉದ್ಯೋಗದಾತರು ಭತ್ಯೆಗಳನ್ನು ಒದಗಿಸಬೇಕಾಗುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ 50,0000 ರೂ.ಗಳ ಹೆಚ್ಚುವರಿ ‘ವರ್ಕ್ ಫ್ರಮ್ ಹೋಮ್’ ಪ್ರಮಾಣಿತ ಕಡಿತವನ್ನು ಶಿಫಾರಸು ಮಾಡಲಾಗುತ್ತದೆ.

100,000 ರೂಪಾಯಿಗಳ ಪ್ರಮಾಣಿತ ಕಡಿತ
Deloitte ನಂತೆ, ICAI ಸಹ ಸಂಬಳದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗಾಗಿ ಆಗುವ ಖರ್ಚಿಗಾಗಿ 100,000 ರೂಪಾಯಿಗಳ ಪ್ರಮಾಣಿತ ಕಡಿತವನ್ನು ಸೂಚಿಸುತ್ತದೆ. “ಈ ಹಣದುಬ್ಬರದ ಸಂದರ್ಭದಲ್ಲಿ ಉದ್ಯೋಗಿಗಳ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯೋಗಿಗಳ ಮಾಣಿತ ಕಡಿತವನ್ನು ಕನಿಷ್ಠ ರೂ. 100,000ಕ್ಕೆ ಹೆಚ್ಚಳ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ,” ಎಂದು ಐಸಿಎಐ ಹೇಳಿದೆ.
Read more…
[wpas_products keywords=”deal of the day”]