Karnataka news paper

ಟಿ-ಸೆಲ್ ಶೀಲ್ಡ್: ಶೀತ, ಕೆಮ್ಮು ಬಂದರೆ ಓಮಿಕ್ರಾನ್ ಎಂಬ ಭಯ ಪಡಬೇಡಿ: ಕೋವಿಡ್-19 ವಿರುದ್ಧ ಹೋರಾಡಲು ಅವೇ ನಿಮಗೆ ಆಯುಧವಾಗಬಹುದು!


Online Desk

ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಅಟ್ಟಹಾಸ ಮರೆಯುತ್ತಿರುವಂತೆಯೇ ಇಲ್ಲೊಂದು ಅಚ್ಚರಿ ಮತ್ತು ನೆಮ್ಮದಿಯ ಸುದ್ದಿ ಹೊರಬಿದಿದ್ದು, ಸಾಮಾನ್ಯ ಶೀತ ಮತ್ತು ಕೆಮ್ಮು ಸಮಸ್ಯೆಗಳು ಕೋವಿಡ್-19 ವಿರುದ್ಧ ಹೋರಾಡುವ ಬಲ ನೀಡಲಿದೆ ಎಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಕೊರೋನಾ ಬರದಂತೆ ತಡೆಯುವುದು ಹೇಗೆ? ಆರೋಗ್ಯ ಸೂತ್ರಗಳು ಮತ್ತು ಸುರಕ್ಷತೆ!

ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕು ವ್ಯಾಪಕವಾದಿ ಪ್ರಸರಣವಾಗುತ್ತಿದ್ದು, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ನಂತರ ದೈತ್ಯ ದೇಶಗಳೇ ಸೋಂಕು ನಿಯಂತ್ರಿಸಲು ಪರದಾಡುತ್ತಿವೆ. ಪ್ರಮುಖವಾಗಿ ಜಗತ್ತಿನ ಸರ್ವಶ್ರೇಷ್ಛ ವೈದ್ಯಕೀಯ ಮೂಲಸೌಕರ್ಯ ಹೊಂದಿರುವ ಅಮೆರಿಕದಲ್ಲೇ ನಿತ್ಯ 11ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. 

ಇದನ್ನೂ ಓದಿ: ಓಮಿಕ್ರಾನ್’ಗೆ ಮೊನೊಕ್ಲೋನಲ್ ಅ್ಯಂಟಿಬಾಡಿ ಥೆರಪಿ: ಏನಿದು ಚಿಕಿತ್ಸೆ, ಹೇಗೆ ಪರಿಣಾಮಕಾರಿ? ತಿಳಿದುಕೊಳ್ಳಬೇಕಾದ ಅಂಶಗಳು!

ಹೀಗಾಗಿ ಎಲ್ಲೆಡೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿದ್ದು,  ಇದರ ನಡುವೆಯೇ ಇತ್ತೀಚೆಗೆ ನಡೆಸಲಾಗಿರುವ ಅಧ್ಯಯನವೊಂದು ಶೀತದಿಂದ (Common Coughs) ಕೊರೊನಾ -19ರ ವಿರುದ್ಧ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: ಓಮಿಕ್ರಾನ್ ಲಕ್ಷಣಗಳು ಏನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ?

ಕೊರೊನಾ ವಿರುದ್ಧ ಶೀತ ಕೆಮ್ಮಿನಿಂದ ‘ರಕ್ಷಣಾತ್ಮಕ ಗುರಾಣಿ’
ನ್ಯೂಸ್ ಮೆಡಿಕಲ್ ಲೈಫ್ ಸೈನ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಕೆಮ್ಮು ಮತ್ತು ಶೀತವು ಟಿ-ಕೋಶಗಳನ್ನು ಉತ್ತೇಜಿಸುತ್ತವೆ ಎನ್ನಲಾಗಿದೆ. ಅಂದರೆ ರಕ್ತ ಕಣಗಳು ವೈರಸ್‌ಗಳನ್ನು ಪತ್ತೆಹಚ್ಚುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಇದಲ್ಲದೆ, ಕೋವಿಡ್‌ನಲ್ಲಿ ವಾಸನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯು ಬಲಗೊಳ್ಳುವಂತೆ ಮಾಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ? 

ನಾವು ವೈರಸ್ ಸೋಂಕಿಗೆ ಒಳಗಾದಾಗ, ದೇಹದಲ್ಲಿ ಟಿ-ಕೋಶಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಇವುಗಳ ಮೂಲಕ ನಾವು ಕೋವಿಡ್‌ನ ಯಾವುದೇ ಸೋಂಕಿನಿಂದ ರಕ್ಷಿಸಲು ಸಿದ್ಧರಾಗುತ್ತೇವೆ ಎಂದು ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿ ಡಾ ರಿಯಾ ಕುಂದು ಹೇಳಿದ್ದಾರೆ. 

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳ

ಇದು ಒಂದು ಪ್ರಮುಖ ಆವಿಷ್ಕಾರವಾಗಿದ್ದು, ಆದರೆ ಇದು ಕೇವಲ ಒಂದು ರಕ್ಷಣೆಯ ವಿಧಾನವಾಗಿದೆ. ಅದರ ಮೇಲೆಯೇ ಮಾತ್ರ ಅವಲಂಬಿಸಬಾರದು. ಸೋಂಕಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬೇಕು ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್‌-19 ಚೇತರಿಕೆಯ ನಂತರ ಹೃದಯಾಘಾತದ ಅಪಾಯದ ಬಗ್ಗೆ ಇರಲಿ ಎಚ್ಚರ!

ಕೊರೋನಾ ಸೋಂಕಿತರೊಂದಿಗೆ ವಾಸಿಸುತ್ತಿದ್ದ 52 ಜನರ ಗುಂಪಿನ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. ಆದರೆ ಇವರಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಸೋಂಕು ತಗುಲಿದೆ. ಸೋಂಕಿಗೆ ಬಲಿಯಾಗದ 26 ಜನರು ಈ ಹಿಂದೆ ಮತ್ತೊಂದು ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದರಿಂದ ಹೆಚ್ಚಿನ ಟಿ-ಸೆಲ್ ಮಟ್ಟವನ್ನು ಹೊಂದಿದ್ದಾರೆ ಎಂದು ರಕ್ತ ಪರೀಕ್ಷೆಗಳು ತೋರಿಸಿವೆ.

ಲಸಿಕೆ ಪರಿಣಾಮಕಾರಿ
ಕನಿಷ್ಠ 4 ಇತರ ರೀತಿಯ ಕೊರೋನಾ ವೈರಸ್‌ಗಳು ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಸೋಂಕು ತರುತ್ತವೆ. ಇಂತಹ ವೈರಸ್ ಸೋಂಕಿಗೆ ಒಳಗಾದ ಪ್ರತಿ ಐವರಲ್ಲಿ ಒಬ್ಬರು ಶೀತವನ್ನು ಹೊಂದಿದ್ದಾರೆ. ತಮ್ಮ ದೇಹದಲ್ಲಿ T-ಸೆಲ್ ಗಳನ್ನು ಹೊಂದಿರುವವರು ಎಲ್ಲಾ ಕೊರೊನಾವೈರಸ್‌ಗಳ ವಿರುದ್ಧ ಒಂದೇ ಪ್ರಭಾವ ತೋರಿಸಿದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಇತರ ವೈರಸ್‌ಗಳ ವಿರುದ್ಧ ಬಗ್ ರೀತಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಕೊರೋನಾ ವೈರಸ್ ಅನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆ ಮತ್ತು ಪ್ರತಿಯೊಬ್ಬರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ, ಜೊತೆಗೆ ಬೂಸ್ಟರ್ ಡೋಸ್ ಅನ್ನು ಸಹ ಅವರು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
 



Read more

[wpas_products keywords=”deal of the day”]