Karnataka news paper

ಡೆಲ್ಟಾ ಪ್ರಕರಣಗಳನ್ನು ಓಮಿಕ್ರಾನ್ ಶೀಘ್ರ ಓವರ್ ಟೇಕ್ ಮಾಡಲಿದೆ, ಆಸ್ಪತ್ರೆ ದಾಖಲಾತಿಗಳು ಹೆಚ್ಚಲಿವೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ


The New Indian Express

ಜಿನೇವಾ: ಓಮಿಕ್ರಾನ್ ಕೊರೊನಾ ವೈರಾಣು ಶೀಘ್ರದಲ್ಲೇ ಡೆಲ್ಟಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 4,868ಕ್ಕೆ ಏರಿಕೆ

ಓಮಿಕ್ರಾನ್ ವೈರಾಣು ಸುಲಭವಾಗಿ ಜನರ ರೋಗ ನಿರೋಧಕ ಕವಚವನ್ನು ಭೇದಿಸಿ ಸೋಂಕು ಹರಡಬಲ್ಲುದಾದರೂ ಅದರ ಗಂಭೀರತೆ ಹಾಗೂ ಅದು ತಂದೊಡ್ಡುವ ಸಮಸ್ಯೆಗಳು ಮಿಕ್ಕ ವೈರಾಣು ತಳಿಗಳಿಗೆ ಹೋಲಿಸಿದರೆ ಕಡಿಮೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಓಮಿಕ್ರಾನ್ ಸೋಂಕಿನ ತೀವ್ರತೆ ಕಡಿಮೆ ಇದ್ದರೂ, ಅಂಗಾಂಗಳಿಗೆ ಅಪಾಯಕಾರಿ!

ಓಮಿಕ್ರಾನ್ ಜಗತ್ತಿನ ಎಲ್ಲಾ ದೇಶದೊಳಕ್ಕೂ ಲಗ್ಗೆಯಿಟ್ಟಿದ್ದು ತನ್ನ ಜಾಲವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ. ಕಳೆದ ವಾರ ಒಮಿಕ್ರಾನ್ ಸೋಂಕಿಗೆ ವಿಶ್ವಾದ್ಯಂತ 43,000 ಮಂದಿ ಮೃತಪಟ್ಟಿದ್ದಾರೆ. 

ಇದನ್ನೂ ಓದಿ: ಓಮಿಕ್ರಾನ್ ಏರಿಕೆ: ಸಕ್ರಿಯ ಪ್ರಕರಣಗಳ ಪೈಕಿ ಶೇ.5-10 ಕ್ಕೆ ಆಸ್ಪತ್ರೆಗಳ ಅಗತ್ಯವಿತ್ತು, ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗಬಹುದು- ಕೇಂದ್ರ

ಅತಿ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಅಮೆರಿಕಾದಲ್ಲಿ ಪತ್ತೆಯಾಗಿದೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್, ಬ್ರಿಟನ್, ಇಟಲಿ ಮತ್ತು ಭಾರತ ಸ್ಥಾನ ಪಡೆದಿವೆ.

ಇದನ್ನೂ ಓದಿ: ‘ಕಡಿಮೆ ತೀವ್ರತೆಯ ಓಮಿಕ್ರಾನ್’ ಎಂಬುದು ತಪ್ಪು; ಮುಂದಿನ ರೂಪಾಂತರಿ ಹೆಚ್ಚು ಮಾರಣಾಂತಿಕವಾಗಿರಬಹುದು: ಭಾರತ ಮೂಲದ ಬ್ರಿಟನ್ ತಜ್ಞ



Read more

[wpas_products keywords=”deal of the day”]