Karnataka news paper

ಕೆ.ಎಲ್‌ ರಾಹುಲ್‌ರ ಈ ಗುಣ ನನಗೆ ಇಷ್ಟವಾಗುವುದಿಲ್ಲವೆಂದ ಮಯಾಂಕ್!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ಕೆ.ಎಲ್‌ ರಾಹುಲ್‌ ಅವರಲ್ಲಿನ ಅತಿಯಾದ ಶಾಂತ ಸ್ವಭಾವ ನನಗೆ ಇಷ್ಟವಿಲ್ಲ: ಮಯಾಂಕ್‌
  • ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಇಂಗಿತ ವ್ಯಕ್ತಪಡಿಸಿದ ಆರಂಭಿಕ.

ಕೇಪ್‌ ಟೌನ್‌: ಟೀಮ್‌ ಇಂಡಿಯಾದ ಸಹ ಆರಂಭಿಕ ಕೆ.ಎಲ್‌ ರಾಹುಲ್‌ ಅವರಲ್ಲಿನ ಅತಿಯಾದ ಶಾಂತ ಸ್ವಭಾವ ನನಗೆ ಇಷ್ಟವಾಗುವುದಿಲ್ಲ ಎಂದು ಮಯಾಂಕ್‌ ಅಗರ್ವಾಲ್ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸ್ಪೋರ್ಡ್ಸ್‌ಕೀಡಾದ ಕ್ವಿಕ್‌ ಸಿಂಗಲ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಮಯಾಂಕ್ ಅಗರ್ವಾಲ್‌ಗೆ ಜೀವನ ಶೈಲಿ ಹಾಗೂ ವೃತ್ತಿ ಬದುಕಿನ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಕೆ.ಎಲ್‌ ರಾಹುಲ್‌ ಅವರಲ್ಲಿ ನಿಮಗೆ ಇಷ್ಟವಾಗುವ ಗುಣ ಯಾವುದು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮಯಾಂಕ್‌, ‘ಶಾಂತ ಸ್ವಭಾವ’ ಎಂದು ಹೇಳಿದರು.

ಇದಾದ ಬೆನ್ನಲ್ಲೆ ಕೆ.ಎಲ್‌ ರಾಹುಲ್‌ ಅವರಲ್ಲಿ ನೀವು ಇಷ್ಟಪಡದೆ ಇರುವ ಗುಣ ಯಾವುದು ಎಂದು ಕೇಳಲಾಯಿತು. ಇದಕ್ಕೆ ಕೆಲ ಸೆಕೆಂಡುಗಳ ಕಾಲ ಯೋಚಿಸಿದ ಮಯಾಂಕ್‌ ಅಗರ್ವಾಲ್‌, ‘ಕೆಲವೊಮ್ಮೆ ಅವರ ಅತಿಯಾದ ಶಾಂತ ಸ್ವಭಾವ ‘ ಎಂದು ನಗುಮೊಗದಲ್ಲಿ ತಿಳಿಸಿದರು.

ಹೋರಾಟದ 79 ರನ್‌ ಗಳಿಸಿ ದ್ರಾವಿಡ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಅಂದಹಾಗೆ ಕೆ.ಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಇಬ್ಬರೂ ಕರ್ನಾಟಕದ ಆಟಗಾರರಾಗಿದ್ದು, ಬೆಂಗಳೂರಿನಲ್ಲಿ ಕ್ಲಬ್‌ ಹಂತದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಜೊತೆಯಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ. ಟೀಮ್‌ ಇಂಡಿಯಾದ ಆರಂಭಿಕರಲ್ಲದೆ, ಇವರಿಬ್ಬರೂ ಒಳ್ಳೆಯ ಸ್ನೇಹಿತರೂ ಕೂಡ ಆಗಿದ್ದಾರೆ.

ಇದೇ ವೇಳೆ ನೀವು ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಇಲ್ಲವಾದರೆ, ಬೇರೆ ಯಾವ ಪ್ರಾಂಚೈಸಿ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಬಯಸುತ್ತೀರಿ? ಎಂದು ಕೇಳಲಾಯಿತು. ಇದಕ್ಕೆ ಅವರು, ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಪರ ಆಡಲು ಇಷ್ಟಪಡುತ್ತೇನೆಂದು ತಿಳಿಸಿದರು. 2022ರ ಐಪಿಎಲ್‌ ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌ ಪಂಜಾಬ್ ಕಿಂಗ್ಸ್‌ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ.

‘ಶಿಸ್ತಿನ ಬ್ಯಾಟಿಂಗ್‌’, ಕೊಹ್ಲಿ ಆಟ ಕಂಡು ಕೋಚ್‌ ವಿಕ್ರಮ್‌ ರಾಠೋರ್‌ ಹೇಳಿದ್ದಿದು!

ಈ ಹಿಂದಿನ ಬೌಲರ್‌ಗಳ ಪೈಕಿ ಯಾವ ಬೌಲರ್‌ ಅನ್ನು ಎದುರಿಸಲು ನೀವು ಇಷ್ಟಪಡುತ್ತೀರಿ? ಎಂಬ ಮತ್ತೊಂದು ಪ್ರಶ್ನೆಗೆ ಮಯಾಂಕ್ ಅಗರ್ವಾಲ್‌, ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್ ಎಂದು ಹೇಳಿದರು. ಅಂದಹಾಗೆ ವಾರ್ನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಎರಡನೇ ಬೌಲರ್‌ ಆಗಿದ್ದಾರೆ.

ಇನ್ನು ಕೇಪ್‌ ಟೌನ್‌ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಹಾಗೂ ಕೆ.ಎಲ್‌ ರಾಹುಲ್‌ ಆಡುತ್ತಿದ್ದಾರೆ. ಪ್ರಥಮ ಇನಿಂಗ್ಸ್‌ ಓಪನಿಂಗ್‌ಗೆ ಬಂದಿದ್ದ ರಾಹುಲ್ ಹಾಗೂ ಮಯಾಂಕ್‌ ಕ್ರಮವಾಗಿ 12 ಮತ್ತು 15 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು.

ಕೊಹ್ಲಿ ವಿಕೆಟ್‌ ಎತ್ತಲು ರೂಪಿಸಿದ್ದ ರಣತಂತ್ರ ರಿವೀಲ್‌ ಮಾಡಿದ ರಬಾಡ!

ನಾಯಕ ವಿರಾಟ್‌ ಕೊಹ್ಲಿ(79) ಅರ್ಧಶತಕದ ಹೊರತಾಗಿಯೂ ಭಾರತ ತಂಡ ಕಗಿಸೊ ರಬಾಡ ಹಾಗೂ ಮಾರ್ಕೊ ಯೆನ್ಸನ್‌ ಮಾರಕ ಬೌಲಿಂಗ್ ದಾಳಿಗೆ ನಲುಗಿ 223 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಶುರು ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 17 ರನ್‌ ಗಳಿಸಿತ್ತು.



Read more

[wpas_products keywords=”deal of the day gym”]