Karnataka news paper

IND vs SA 3rd Test Live: ಹರಿಣಗಳನ್ನು ಆಲ್‌ಔಟ್‌ ಮಾಡುವತ್ತ ಭಾರತ ಚಿತ್ತ!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಕೇಪ್‌ ಟೌನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಸೆಣಸುತ್ತಿರುವ ತಂಡಗಳು.
  • ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 223ಕ್ಕೆ ಆಲ್‌ಔಟ್‌.

ಕೇಪ್‌ ಟೌನ್‌: ನಾಯಕ ವಿರಾಟ್‌ ಕೊಹ್ಲಿ(79) ಅರ್ಧಶತಕದ ಹೊರತಾಗಿಯೂ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿ 223 ರನ್‌ಗಳಿಗೆ ಆಲ್ಔಟ್‌ ಆಗಿದ್ದ ಭಾರತ ತಂಡಕ್ಕೆ ಎರಡನೇ ದಿನದಾಟದಲ್ಲಿ ಕಠಿಣ ಸವಾಲು ಎದುರಾಗಲಿದೆ.

ಒಂದು ವಿಕೆಟ್‌ ನಷ್ಟಕ್ಕೆ 17 ರನ್‌ಗಳಿಗೆ ಎರಡನೇ ದಿನದಾಟ ಶುರು ಮಾಡುವ ದಕ್ಷಿಣ ಆಫ್ರಿಕಾ ತಂಡದ ಇನ್ನುಳಿದ 9 ವಿಕೆಟ್‌ಗಳನ್ನು ಭಾರತ ಆದಷ್ಟು ಬೇಗ ಕಬಳಿಸಬೇಕು. ಇಲ್ಲವಾದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆಯಾಗುವ ಸಂಭವವಿದೆ. ಮೊದಲನೇ ದಿನ ಕೊನೆಯ ಸೆಷನ್‌ನಲ್ಲಿ ಅಪಾಯಕಾರಿ ಡೀನ್ ಎಲ್ಗರ್‌ ವಿಕೆಟ್‌ ಕಬಳಿಸಿದ್ದ ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ ಅವರನ್ನೊಳಗೊಂಡ ಟೀಮ್‌ ಇಂಡಿಯಾ ಬೌಲಿಂಗ್‌ ವಿಭಾಗದ ಮೇಲೆ ಇಂದು ಹೆಚ್ಚಿನ ಜವಾಬ್ದಾರಿ ಇದೆ.

ಮಂಗಳವಾರ ಕೇಪ್‌ಟೌನ್‌ನ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಕಗಿಸೊ ರಬಾಡ(66 ಕ್ಕೆ 4) ಹಾಗೂ ಮಾರ್ಕೊ ಯೆನ್ಸನ್‌(51ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ತಂಡ ಮೂರನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 77.3 ಓವರ್‌ಗಳಿಗೆ 223 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ ಸ್ಕೋರ್‌ಕಾರ್ಡ್

ವಿರಾಟ್‌ ಕೊಹ್ಲಿ ಅರ್ಧಶತಕ: ಮೊದಲನೇ ಒಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 201 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಒಂದು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 79 ರನ್‌ ಗಳಿಸಿದ್ದರು. ಒಂದು ತುದಿಯಲ್ಲಿ ನಿಯಮಿತವಾಗಿ ವಿಕೆಟ್‌ ಉರುಳುತ್ತಿದ್ದರಿಂದ ರನ್‌ ಏರಿಸುವ ಭರದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದ ಕೊಹ್ಲಿ, ಕಗಿಸೊ ರಬಾಡ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು ಹಾಗೂ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ತೆರಳಿದರು. ಒಂದು ವೇಳೆ ಮತ್ತೊಂದು ತುದಿಯಲ್ಲಿ ಯಾರಾದರೂ ಕೊಹ್ಲಿಗೆ ಸಾಥ್‌ ನೀಡಿದ್ದರೆ ಬಹುಶಃ ಅವರು 71ನೇ ಶತಕ ಪೂರೈಸುತ್ತಿದ್ದರು. ಆದರೆ ಇದಕ್ಕೆ ಎದುರಾಳಿ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ.

ಎದುರಾಳಿ ತಂಡದ ಪರ ಅತ್ಯುತ್ತಮ ಬೌಲ್‌ ಮಾಡಿದ ಕಗಿಸೊ ರಬಾಡ 4 ವಿಕೆಟ್‌ ಪಡೆದರೆ, ಮಾರ್ಕೊ ಯೆನ್ಸನ್‌ 3 ವಿಕೆಟ್‌ ತಮ್ಮ ಖಾತೆಗೆ ಹಾಕಿಕೊಂಡರು.

ಡೀನ್‌ ಎಲ್ಗರ್‌ ವಿಕೆಟ್‌ ಕಳೆದುಕೊಂಡ ಆತಿಥೇಯರು: ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 8 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 17 ರನ್‌ ಗಳಿಸಿದ್ದು, ಇನ್ನು 206 ರನ್‌ ಹಿನ್ನಡೆಯಲ್ಲಿದೆ. ಎರಡನೇ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ 96 ರನ್‌ ಗಳಿಸಿದ್ದ ಹರಿಣಗಳ ನಾಯಕ ಡೀನ್‌ ಎಲ್ಗರ್‌(3), ಜಸ್‌ಪ್ರಿತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಏಡೆನ್‌ ಮಾರ್ಕ್ರಮ್‌(8*) ಹಾಗೂ ಕೇಶವ್ ಮಹಾರಾಜ್‌(6*) ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌(ಮೊದಲನೇ ದಿನದಾಟದ ಅಂತ್ಯಕ್ಕೆ)
ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 77.3 ಓವರ್‌ಗಳಿಗೆ 223/10 (ವಿರಾಟ್ ಕೊಹ್ಲಿ 79, ಚೇತೇಶ್ವರ್‌ ಪೂಜಾರ 43, ರಿಷಭ್‌ ಪಂತ್‌ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್‌ 55 ಕ್ಕೆ 3, ಡುವಾನ್‌ ಒಲಿವಿಯರ್‌ 42 ಕ್ಕೆ 1, ಕೇಶವ್ ಮಹಾರಾಜ್‌ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1)

ದಕ್ಷಿಣ ಆಫ್ರಿಕಾ: ಪ್ರ
ಥಮ ಇನಿಂಗ್ಸ್‌ 8 ಓವರ್‌ಗಳಿಗೆ 17/1 (ಏಡೆನ್‌ ಮಾರ್ಕ್ರಮ್‌ 8*, ಕೇಶವ್‌ ಮಹಾರಾಜ್‌ 6*; ಜಸ್‌ಪ್ರಿತ್‌ ಬುಮ್ರಾ 4 ಕ್ಕೆ 1)

‘ಭಾರತ ತಂಡವನ್ನು ಮಣಿಸುವುದು ನನ್ನ ವೃತ್ತಿ ಜೀವನದ ದೊಡ್ಡ ಗೆಲುವು’ ಎಲ್ಗರ್‌!

ಉಭಯ ತಂಡಗಳ ಪ್ಲೇಯಿಂಗ್‌ ಇಲೆವೆನ್‌

ಭಾರತ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್(ಪ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್(ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ತೆಂಬಾ ಬವೂಮ, ಕೈಲ್‌ ವೆರಿನೆ (ವಿಕೆಟ್‌ ಕೀಪರ್‌), ಮಾರ್ಕೊ ಯೆನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್‌ ಒಲಿವಿಯರ್, ಲುಂಗಿ ಎನ್ಗಿಡಿ.



Read more

[wpas_products keywords=”deal of the day gym”]