ಬೆಂಗಳೂರು: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ‘ಮರಕ್ಕಾರ್-ಅರಬ್ಬಿಕಡಲಿಂಡೆ ಸಿಂಹಂ’ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ.
ಡಿಸೆಂಬರ್ 17ರಂದು ಪ್ರೈಮ್‌ನಲ್ಲಿ ಪ್ರೀಮಿಯರ್ ಶೋ ಇರಲಿದೆ ಎಂದು ಚಿತ್ರತಂಡ ಹೇಳಿದೆ.
ಮರಕ್ಕಾರ್ ಚಿತ್ರ ಈಗಾಗಲೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿಯೂ ತೆರೆಕಾಣುತ್ತಿದೆ.
ಪ್ರಿಯದರ್ಶನ್ ನಿರ್ದೇಶನದ ಸಿನಿಮಾ ಇದಾಗಿದ್ದು, ಆಶೀರ್ವಾದ್ ಸಿನೆಮಾಸ್‌ನ ಆ್ಯಂಟನಿ ಪೆರುಂಬಾವೂರ್ ನಿರ್ಮಾಪಕರಾಗಿದ್ದಾರೆ.
ಡಿ.17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರ ನಟನೆಯ ‘ಕನ್ನಡಿಗ’
ಮೋಹನ್‌ಲಾಲ್ ಜತೆಗೆ, ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಮಂಜು ವಾರಿಯರ್, ಕೀರ್ತಿ ಸುರೇಶ್ ‘ಮರಕ್ಕಾರ್’ ಚಿತ್ರದಲ್ಲಿ ನಟಿಸಿದ್ದಾರೆ.
777 ಚಾರ್ಲಿ: ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ