Karnataka news paper

ಬೆಂಗಳೂರಿನಲ್ಲಿ ಕೊರೊನಾಘಾತ; 10 ಸಾವಿರ ಗಡಿ ದಾಟಿದ ಸೋಂಕಿತ ಪ್ರಕರಣ; ಕಂಟೈನ್ಮೆಂಟ್ ವಲಯಗಳ ಸಂಖ್ಯೆ 479ಕ್ಕೆ ಏರಿಕೆ!


ಹೈಲೈಟ್ಸ್‌:

  • ಕೋವಿಡ್‌ ಪರೀಕ್ಷೆಗೆ ಒಳಪಟ್ಟ 100 ಜನರಲ್ಲಿ 10-15 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ
  • ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕದಲ್ಲೇ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ
  • ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 6255 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ

ಬೆಂಗಳೂರು: ನಗರದಲ್ಲಿ ಕೊರೊನಾ ಮೂರನೇ ಅಲೆಯು ಶರವೇಗದಲ್ಲಿ ಹರಡುತ್ತಿದ್ದು, ಎಲ್ಲೆಡೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಪರಿಣಾಮ, ಕೇವಲ 10 ದಿನಗಳಲ್ಲಿ 54,912 ಮಂದಿ ಸೋಂಕು ಬಾಧಿತರಾಗಿದ್ದಾರೆ.

ಕೋವಿಡ್‌ ಪರೀಕ್ಷೆಗೆ ಒಳಪಟ್ಟ 100 ಜನರಲ್ಲಿ 10-15 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಕೆಲವೆಡೆ 100 ಮಂದಿಯಲ್ಲಿ 40-50 ಮಂದಿ ಸೋಂಕಿಗೆ ತೆರೆದುಕೊಂಡಿರುವುದು ಕಂಡುಬರುತ್ತಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಕೊರೊನಾಘಾತದಿಂದ ನಗರದ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.

ಪಾಲಿಕೆಯ ಹೊರವಲಯದಲ್ಲಿರುವ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕದಲ್ಲೇ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ. ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲಿ ನೆಲೆಸಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಳ್ಳಂದೂರು ವಾರ್ಡ್‌ನಲ್ಲಿ ಕಳೆದ 7 ದಿನಗಳಿಂದ ನಿತ್ಯ ಸರಾಸರಿ 252 ಪ್ರಕರಣಗಳು ಪತ್ತೆಯಾಗುತ್ತಿವೆ. ಬೇಗೂರು ವಾರ್ಡ್‌ನಲ್ಲಿ 125, ಹಗದೂರು 121, ದೊಡ್ಡನೆಕ್ಕುಂದಿ 100, ವರ್ತೂರು 99, ಎಚ್‌ಎಸ್‌ಆರ್‌ ಲೇಔಟ್‌ 95, ಹೊರಮಾವು 91, ನ್ಯೂ ತಿಪ್ಪಸಂದ್ರ 89, ಕೋರಮಂಗಲ 82 ಹಾಗೂ ರಾಜರಾಜೇಶ್ವರಿನಗರ ವಾರ್ಡ್‌ನಲ್ಲಿ 77 ಪ್ರಕರಣಗಳು ಕಂಡುಬರುತ್ತಿವೆ. ಇದರಿಂದಾಗಿ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 479ಕ್ಕೆ ಜಿಗಿದಿದೆ.
ಬೆಂಗಳೂರು: ಶೇ 5.31ಕ್ಕೇರಿದ ಕೊರೊನಾ ಪಾಸಿಟಿವಿಟಿ ದರ
ಮುನೇಶ್ವರನಗರ ವಾರ್ಡ್‌ನಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ. ಡಿ.ಜೆ.ಹಳ್ಳಿ ವಾರ್ಡ್‌ನಲ್ಲಿ ಪ್ರತಿದಿನ ಕೇವಲ ಒಂದು ಪ್ರಕರಣ, ಲಕ್ಷ್ಮಿದೇವಿನಗರ, ಛಲವಾದಿಪಾಳ್ಯ, ನೀಲಸಂದ್ರ, ಕುಶಾಲನಗರ, ಜೆ.ಜೆ.ನಗರ, ಪಾದರಾಯನಪುರ ವಾರ್ಡ್‌ನಲ್ಲಿ ತಲಾ 2 ಪ್ರಕರಣಗಳು ವರದಿಯಾಗುತ್ತಿವೆ. ಈ ವಾರ್ಡ್‌ಗಳಲ್ಲಿ ಕೊಳೆಗೇರಿ ಪ್ರದೇಶಗಳೇ ಹೆಚ್ಚಿದ್ದು, ಮೊದಲ ಅಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು. ಕೊರೊನಾ 3ನೇ ಅಲೆಯು ಈ ಪ್ರದೇಶಗಳಲ್ಲಿ ಕಾಣಿಸಿಕೊಂಡಿಲ್ಲ.

ಶೇ 8.66ಕ್ಕೇರಿದ ಸೋಂಕು ಪತ್ತೆ ಪ್ರಮಾಣ
ಕಳೆದ ನ. 16 ರಿಂದ ಡಿ. 27ರವರೆಗೆ ಸೋಂಕು ಪತ್ತೆ ಪ್ರಮಾಣವು ಸರಾಸರಿ ಶೇ 0.50ರಷ್ಟಿತ್ತು. ಡಿ. 21 ರಿಂದ ಡಿ. 27ರ ಅವಧಿಯಲ್ಲಿ ಶೇ 0.59ರಷ್ಟಿದ್ದದ್ದು, ಜ. 3ರ ವೇಳೆಗೆ ಶೇ 1.83ಕ್ಕೆ ಏರಿಕೆಯಾಯಿತು. ಜ. 4 ರಿಂದ ಜ. 10ರ ಅವಧಿಯಲ್ಲಿ ಸೋಂಕು ಪತ್ತೆ ದರವು ಶೇ 8.66ಕ್ಕೆ ಏರಿದೆ. ಮರಣ ದರವು ಶೇ 0.03ಕ್ಕೆ ಕುಸಿದಿದೆ.

ಖಾಲಿ ಬಿದ್ದಿರುವ 5909 ಹಾಸಿಗೆಗಳು
ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 6255 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 333 ಹಾಸಿಗೆಗಳಷ್ಟೇ ಭರ್ತಿಯಾಗಿದ್ದು, 13 ಹಾಸಿಗೆಗಳನ್ನು ಬ್ಲಾಕ್‌ ಮಾಡಲಾಗಿದೆ. ಉಳಿದ 5909 ಹಾಸಿಗೆಗಳು ಖಾಲಿ ಬಿದ್ದಿವೆ.
ವಾರ್ಡ್‌ ಮಟ್ಟದಲ್ಲೇ ಟ್ರಯಾಜಿಂಗ್‌ ವ್ಯವಸ್ಥೆ: ಬಿಬಿಎಂಪಿ ಮುಖ್ಯ ಆಯುಕ್ತ
ಸಾಮಾನ್ಯ ಹಾಸಿಗೆಗಳಲ್ಲಿ 194 ಮಂದಿ, ಎಚ್‌ಡಿಯು 93, ಐಸಿಯು 35, ಐಸಿಯು ವೆಂಟಿಲೇಟರ್‌ನಲ್ಲಿ 11 ಮಂದಿಯಷ್ಟೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕು ದೃಢಪಟ್ಟವರ ಪೈಕಿ ಬೆರಳೆಣಿಕೆಯಷ್ಟು ಮಂದಿಯಷ್ಟೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜ. 10ರಂದು ಕೇವಲ 52 ಮಂದಿಯಷ್ಟೇ ಆಸ್ಪತ್ರೆ ಸೇರಿದ್ದಾರೆ. ಶೇ 95ರಷ್ಟು ಮಂದಿ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದಾರೆ.
ಬೆಂಗಳೂರು: ಒಂದೇ ದಿನ 9020 ಸೋಂಕಿತರು ಪತ್ತೆ
ಕಳೆದ 10 ದಿನಗಳಲ್ಲಿ ಪತ್ತೆಯಾದ ಪ್ರಕರಣಗಳು
ದಿನಾಂಕ ಪ್ರಕರಣಗಳ ಸಂಖ್ಯೆ

  • ಜ. 2 -923
  • ಜ. 3- 1041
  • ಜ. 4-2053
  • ಜ. 5-3605
  • ಜ. 6 -4324
  • ಜ. 7- 6812
  • ಜ. 8 -7113
  • ಜ. 9-9020
  • ಜ. 10- 9221
  • ಜ. 11 -10800

ವಲಯವಾರು 7 ದಿನಗಳಲ್ಲಿ ಕಂಡುಬಂದ ಪ್ರಕರಣಗಳು
ವಲಯ- ಪ್ರಕರಣಗಳ ಸಂಖ್ಯೆ

  • ಪೂರ್ವ 13217
  • ದಕ್ಷಿಣ -12844
  • ಮಹದೇವಪುರ- 15675
  • ಆರ್‌.ಆರ್‌.ನಗರ -6845
  • ದಾಸರಹಳ್ಳಿ- 1872
  • ಪಶ್ಚಿಮ- 12719
  • ಯಲಹಂಕ- 7443
  • ಬೊಮ್ಮನಹಳ್ಳಿ -13369

ಕೊರೊನಾ ಮೀಟರ್‌…
ಒಟ್ಟು ಸೋಂಕಿತ ಪ್ರಕರಣಗಳು- 13,19,340

  • ಗುಣಮುಖ- 12,43,995
  • ಸಕ್ರಿಯ -58,917
  • ಮೃತಪಟ್ಟವರು- 16,427

ಜ.11ರ ಕೊರೊನಾ ಮೀಟರ್‌

  • ಸೋಂಕಿತ ಪ್ರಕರಣಗಳು- 10800
  • ಗುಣಮುಖ- 840
  • ಮೃತಪಟ್ಟವರು -03



Read more

[wpas_products keywords=”deal of the day sale today offer all”]