ಹೈಲೈಟ್ಸ್:
- ದೇಶದ ಪ್ರತಿಯೊಬ್ಬರಿಗೂ ಓಮಿಕ್ರಾನ್ ಸೋಂಕು ತಗುಲುವುದು ಖಚಿತ
- ಬೂಸ್ಟರ್ ಡೋಸ್ ಲಸಿಕೆಯಿಂದ ಸೋಂಕಿನ ವೇಗ ತಡೆಯಲು ಸಾಧ್ಯವಿಲ್ಲ
- ದೇಶದ ಶೇ 80ಕ್ಕಿಂತ ಹೆಚ್ಚು ಜನರಿಗೆ ಈಗಾಗಲೇ ಸೋಂಕು ತಗುಲಿರಬಹುದು
- ಭಾರತೀಯರಲ್ಲಿ ಪ್ರತಿರಕ್ಷಣಾ ಶಕ್ತಿ ಹೆಚ್ಚಿರುವುದರಿಂದ ಅಧಿಕ ಹಾನಿ ಉಂಟಾಗಿಲ್ಲ
- ಕೋವಿಡ್ ಭೀತಿ ಮೂಡಿಸುವ ಕಾಯಿಲೆಯಾಗಿಲ್ಲ, ಅದೀಗ ಸೌಮ್ಯವಾಗಿದೆ
ಕೋವಿಡ್ ಈಗ ಭೀತಿ ಮೂಡಿಸುವ ಕಾಯಿಲೆಯಾಗಿ ಉಳಿದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಹೊಸ ತಳಿ ತೀವ್ರ ಸೌಮ್ಯವಾಗಿದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಬಹಳ ಕಡಿಮೆ ಇದೆ. ಈ ಕಾಯಿಲೆಯನ್ನು ನಾವು ಎದುರಿಸಬಹುದು. ನಾವು ಈಗ ಕೊಂಚ ವಿಭಿನ್ನ ವೈರಸ್ ಅನ್ನು ನೋಡುತ್ತಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ ಇದು ಡೆಲ್ಟಾಗಿಂತ ಸೌಮ್ಯ ಸ್ವಭಾವದ್ದು. ಅಷ್ಟೇ ಅಲ್ಲ, ಅದನ್ನು ವಾಸ್ತವವಾಗಿ ತಡೆಯಲು ಸಾಧ್ಯವಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ರಾಷ್ಟ್ರೀಯ ಸೋಂಕುಶಾಸ್ತ್ರ ಸಂಸ್ಥೆಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಸಾಂಕ್ರಾಮಿಕ ರೋಗ ತಜ್ಞ ಡಾ. ಜಯಪ್ರಕಾಶ್ ಮುಲಿಯಿಲ್ ತಿಳಿಸಿದ್ದಾರೆ.
ಓಮಿಕ್ರಾನ್ ತಳಿ ವೈರಸ್ ಈಗ ಶೀತದಂತೆಯೇ ಅಸ್ತಿತ್ವದಲ್ಲಿದೆ. ಸ್ವಾಭಾವಿಕ ಪ್ರತಿರಕ್ಷಣೆಯು ಜೀವಮಾನಪರ್ಯಂತ ಇರಬಹುದು. ಇದರಿಂದಾಗಿಯೇ ಇತರೆ ಅನೇಕ ದೇಶಗಳಲ್ಲಿ ಆಗಿರುವಂತೆ ಭಾರತವು ಅಷ್ಟು ಅಪಾಯಕಾರಿ ಮಟ್ಟದಲ್ಲಿ ತೊಂದರೆಗೆ ಒಳಗಾಗಿಲ್ಲ. ದೇಶದಲ್ಲಿ ಕೋವಿಡ್ ಲಸಿಕೆಗಳು ಬಳಕೆಗೆ ಬರುವ ಮುನ್ನವೇ ದೇಶದ ಶೇ 85ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಮೊದಲ ಡೋಸ್ ಲಸಿಕೆಯೇ ಭಾರತೀಯರಿಗೆ ಬೂಸ್ಟರ್ ಡೋಸ್‌ನಂತೆ ಕೆಲಸ ಮಾಡಿರುತ್ತದೆ. ‘ನೈಸರ್ಗಿಕ ಸೋಂಕು ಯಾವುದೇ ಪ್ರತಿರಕ್ಷಣೆಯನ್ನು ಉಳಿಸುವುದಿಲ್ಲ ಎಂಬ ತತ್ವಶಾಸ್ತ್ರವೊಂದು ಜಗತ್ತಿನಾದ್ಯಂತ ಇದೆ. ಆದರೆ ಈ ತತ್ವಶಾಸ್ತ್ರ ಸುಳ್ಳು ಎಂದು ನನ್ನ ಭಾವನೆ’ ಎಂದು ಹೇಳಿದ್ದಾರೆ.
ಯಾವುದೇ ವೈದ್ಯಕೀಯ ಸಂಸ್ಥೆಗಳು ಬೂಸ್ಟರ್ ಡೋಸ್ ಬಗ್ಗೆ ಸಲಹೆ ನೀಡಿಲ್ಲ. ಇದು ಸಾಂಕ್ರಾಮಿಕದ ಸ್ವಾಭಾವಿಕ ಬೆಳವಣಿಗೆಯನ್ನು ತಡೆಯಲಾರದು. ಇದು ಕೋವಿಡ್ ರೋಗಿಗಳ ನಿಕಟ ಸಂಪರ್ಕಿತ, ರೋಗಲಕ್ಷಣಗಳಿಲ್ಲದವರನ್ನು ಪರೀಕ್ಷೆಗೆ ಒಳಪಡಿಸುವುದಕ್ಕೂ ಸಂಬಂಧಿಸಿದೆ. ಕೇವಲ ಎರಡು ದಿನಗಳಲ್ಲಿ ವೈರಸ್ ಸೋಂಕನ್ನು ದುಪ್ಪಟ್ಟು ಮಾಡುತ್ತದೆ. ಪರೀಕ್ಷೆಯು ಅದರ ಹಾಜರಾತಿಯನ್ನು ಕಂಡುಹಿಡಿಯುವ ಮುನ್ನವೇ ಸೋಂಕಿತ ವ್ಯಕ್ತಿ ಬಹುದೊಡ್ಡ ಸಂಖ್ಯೆಯ ಜನರಿಗೆ ಹರಡಿರುತ್ತಾನೆ. ಹೀಗಾಗಿ ನೀವು ಪರೀಕ್ಷೆ ಮಾಡುವಾಗ ಬಹಳ ಬಹಳ ಹಿಂದೆಯೇ ಉಳಿದಿರುತ್ತೀರಿ. ಇದು ಸಾಂಕ್ರಾಮಿಕದ ಉಗಮದಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುತ್ತದೆ ಎನ್ನಲಾಗದು ಎಂದಿದ್ದಾರೆ.
ಸರ್ಕಾರದ ಯಾವುದೇ ಸಂಸ್ಥೆಯಿಂದ ನಾವು ಬೂಸ್ಟರ್ ಡೋಸ್ ಲಸಿಕೆಯ ಶಿಫಾರಸು ಮಾಡಿಲ್ಲ. ನನಗೆ ತಿಳಿದಿರುವಂತೆ, ಮುಂಜಾಗ್ರತಾ ಡೋಸ್ ಬಗ್ಗೆ ಸಲಹೆ ನೀಡಲಾಗಿತ್ತು. ಏಕೆಂದರೆ ಕೆಲವು ಜನರು, ಮುಖ್ಯವಾಗಿ 60 ವರ್ಷ ಮೇಲಿನ ವಯೋಮಾನದ ಗುಂಪಿನವರು ಎರಡು ಡೋಸ್‌ಗಳಿಗೆ ಸ್ಪಂದಿಸಿರಲಿಲ್ಲ ಎಂದು ವರದಿಗಳು ಬಂದಿದ್ದವು ಎಂದು ತಿಳಿಸಿದ್ದಾರೆ.
‘ನಮ್ಮಲ್ಲಿ ಬಹುತೇಕರು ಸೋಂಕಿಗೆ ಒಳಗಾಗಿದ್ದೇವೆ. ಬಹುಶಃ ಶೇ 80ಕ್ಕಿಂತಲೂ ಹೆಚ್ಚು. ಆದರೆ ನಮಗೆ ಅದು ಯಾವಾಗ ತಗುಲಿದೆ ಎನ್ನುವುದು ನಮಗೆ ತಿಳಿದೇ ಇರುವುದಿಲ್ಲ’ ಎಂದು ಹೇಳಿದ್ದಾರೆ.
Read more
[wpas_products keywords=”deal of the day sale today offer all”]