ಹೈಲೈಟ್ಸ್:
- ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 5-20 ರೂ. ಇಳಿಕೆ
- ಬೆಲೆ ಇಳಿಕೆ ಮಾಡಿದ ಪ್ರಮುಖ ಖಾದ್ಯ ತೈಲ ಕಂಪನಿಗಳು
- ಆದರೆ, ಒಂದು ವರ್ಷದ ಅವಧಿಗೆ ಹೋಲಿಸಿದರೆ ತೈಲ ಬೆಲೆಯಲ್ಲಿ ಏರಿಕೆ
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಮಂಗಳವಾರದ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ
- ಶೇಂಗಾ ಎಣ್ಣೆ ಕೆಜಿಗೆ 180 ರೂ.
- ಸಾಸಿವೆ ಎಣ್ಣೆ ಕೆಜಿಗೆ 184.59 ರೂ.
- ಸೋಯಾ ಎಣ್ಣೆ ಕೆಜಿಗೆ 148.85 ರೂ.
- ಸೂರ್ಯಕಾಂತಿ ಎಣ್ಣೆ ಕೆಜಿಗೆ 162.4 ರೂ. ಮತ್ತು ತಾಳೆ ಎಣ್ಣೆ ಪ್ರತಿ ಕೆ.ಜಿ.ಗೆ 128.5. ರೂಪಾಯಿ ಇದೆ.
2021ರ ಅಕ್ಟೋಬರ್ 1ರಂದು ಇದ್ದ ಬೆಲೆಗಳಿಗೆ ಹೋಲಿಸಿದರೆ ಕಡಲೆಕಾಯಿ ಮತ್ತು ಸಾಸಿವೆ ಎಣ್ಣೆಯ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 1.50-3 ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ. ಆದರೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಪ್ರತಿ ಕೆಜಿಗೆ 7 ರಿಂದ 8 ರೂಪಾಯಿ ಇಳಿಕೆಯಾಗಿದೆ. ಸಚಿವಾಲಯದ ಪ್ರಕಾರ, ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 15ರಿಂದ 20 ರೂಪಾಯಿ ಇಳಿಕೆ ಮಾಡಿವೆ.
ಜೆಮಿನಿ ಎಡಿಬಲ್ಸ್ & ಫ್ಯಾಟ್ಸ್ ಇಂಡಿಯಾ, ಹೈದರಾಬಾದ್, ಮೋದಿ ನ್ಯಾಚುರಲ್ಸ್, ದೆಹಲಿ, ಗೋಕುಲ್ ರೀ-ಫಾಯಿಲ್ ಮತ್ತು ಸಾಲ್ವೆಂಟ್, ವಿಜಯ್ ಸಾಲ್ವೆಕ್ಸ್, ಗೋಕುಲ್ ಆಗ್ರೋ ರಿಸೋರ್ಸಸ್ ಮತ್ತು ಎನ್‌ಕೆ ಪ್ರೊಟೀನ್‌ಗಳು ಖಾದ್ಯ ತೈಲಗಳ ಬೆಲೆಯನ್ನು ಕಡಿಮೆ ಮಾಡಿದ ಇತರ ಕಂಪನಿಗಳು.
ಅಂತಾರಾಷ್ಟ್ರೀಯ ಸರಕುಗಳ ಬೆಲೆ ಹೆಚ್ಚಿದ್ದರೂ, ರಾಜ್ಯ ಸರ್ಕಾರಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯು ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಖಾದ್ಯ ತೈಲದ ಬೆಲೆ ಹೆಚ್ಚಾಗಿದೆ. ಆದರೆ, ಅಕ್ಟೋಬರ್‌ನಿಂದೀಚೆಗೆ ಇಳಿಕೆಯಾಗುತ್ತಿದೆ ಎಂದು ಸರಕಾರ ತಿಳಿಸಿದೆ.
ಆಮದು ಸುಂಕ ಕಡಿತ ಮತ್ತು ಸಂಗ್ರಹಣೆಯನ್ನು ತಡೆಯಲು ಸ್ಟಾಕ್ ಮಿತಿ ವಿಧಿಸುವುದು ಎಲ್ಲ ಖಾದ್ಯ ತೈಲಗಳ ದೇಶೀಯ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ಗ್ರಾಹಕರಿಗೆ ಸಮಾಧಾನ ತಂದಿದೆ ಎಂದು ಅದು ಹೇಳಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಭಾರೀ ಅವಲಂಬನೆಯಿಂದಾಗಿ, ದೇಶೀಯ ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡುವುದು ಮುಖ್ಯವಾಗಿದೆ.
ದೇಶೀಯ ಉತ್ಪಾದನೆಯು ತನ್ನ ದೇಶೀಯ ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಭಾರತವು ಖಾದ್ಯ ತೈಲಗಳ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ. ದೇಶದಲ್ಲಿ ಖಾದ್ಯ ತೈಲಗಳ ಬಳಕೆಯ ಶೇಕಡಾ 56-60 ರಷ್ಟನ್ನು ಆಮದು ಮೂಲಕ ಪೂರೈಸಲಾಗುತ್ತದೆ. ಜಾಗತಿಕ ಉತ್ಪಾದನೆಯಲ್ಲಿನ ಕಡಿತ ಮತ್ತು ರಫ್ತು ಮಾಡುವ ದೇಶಗಳಿಂದ ರಫ್ತು ತೆರಿಗೆ / ಲೆವಿ ಹೆಚ್ಚಳದಿಂದಾಗಿ ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳು ಒತ್ತಡದಲ್ಲಿವೆ ಎಂದು ಸಚಿವಾಲಯ ಹೇಳಿದೆ. ಆದ್ದರಿಂದ, ಖಾದ್ಯ ತೈಲಗಳ ದೇಶೀಯ ಬೆಲೆಗಳನ್ನು ಆಮದು ಮಾಡಿದ ತೈಲಗಳ ಬೆಲೆಗಳಿಂದ ನಿರ್ಧರಿಸಲಾಗುತ್ತದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
Read more…
[wpas_products keywords=”deal of the day”]