Karnataka news paper

ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನಟ ಸಿದ್ದಾರ್ಥ್ ಬ್ಲಾಕ್ ಮಾಡುವಂತೆ ಟ್ವೀಟರ್ ಗೆ ಮಹಿಳಾ ಆಯೋಗ ಸೂಚನೆ


Online Desk

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಟ ಸಿದ್ಧಾರ್ಥ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ಟ್ವಿಟ್ ವಾರ್ ನಡುವೆ ಮಧ್ಯೆ ಪ್ರವೇಶಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ನಟ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸಿದ್ಧಾರ್ಥ ಟ್ವೀಟನ್ನು ತೆಗೆದು ಹಾಕುವಂತೆ ಹಾಗೂ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಿಳಾ ಆಯೋಗ ಟ್ವಿಟ್ಟರ್ ಗೆ ಸೂಚಿಸಿದೆ. ಅಲ್ಲದೆ, ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಹಾರಾಷ್ಟ್ರ ಡಿಜಿಪಿಗೆ ಹೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ನಟನ ಟ್ವೀಟ್ ಖಾತೆಯನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಆಯೋಗವು ಈ ವಿಷಯದಲ್ಲಿ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ ಕುರಿತಂತೆ ಟ್ವೀಟ್ ನಲ್ಲಿ ಖಂಡನೆ ವ್ಯಕ್ತಪಡಿಸಿದ್ದ ಸೈನ್, “ಪ್ರಧಾನಿಯ ಭದ್ರತೆಗೆ ಧಕ್ಕೆಯುಂಟಾದರೆ, ಆ ದೇಶವು ತನ್ನನ್ನು ತಾನು ಸುರಕ್ಷಿತ ಎಂದು ಕರೆಯಲು ಸಾಧ್ಯವಿಲ್ಲ. ಪಂಜಾಬ್‌ನಲ್ಲಿ ನಡೆದ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು. ಸೈನಾ ನೆಹ್ವಾಲ್ ಅವರ ಈ ಟ್ವೀಟ್‌ಗೆ ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು. ಅವರು ಡಬಲ್ ಮೀನಿಂಗ್ ಪದ ಬಳಸಿದ್ದಲ್ಲದೆ, ನಿಮಗೆ ಶೇಮ್ ಆನ್ ಯು ರಿಹಾನ್ನಾ ಎಂದು ಬರೆದಿದ್ದಾರೆ. (ರಿಹಾನ್ನಾ ಅನ್ನೋದು ಅಂತಾರಾಷ್ಟ್ರೀಯ ಪಾಪ್ ತಾರೆಯ ಹೆಸರು. ಕೃಷಿ ಮಸೂದೆಯಲ್ಲಿ ರೈತರ ಬೆಂಬಲಕ್ಕೆ ನಿಂತಿದ್ದರು) ಇದಾದ ಬಳಿಕ ಈ ವಿಚಾರವಾಗಿ ವಿವಾದ ಉಂಟಾಗಿತ್ತು. ನಟ ಸಿದ್ಧಾರ್ಥ್ ಅವರ ಈ ಟ್ವೀಟ್‌ಗೆ ಜನರು ಆಕ್ಷೇಪ ವ್ಯಕ್ತಪಡಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಸೈನಾ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ಅರಿತ ನಟ ಸಿದ್ಧಾರ್ಥ, ತಮ್ಮ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಯಾರನ್ನೂ ಅವಮಾನಿಸುವ ಪ್ರಯತ್ನ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

2020ರಲ್ಲಿ ಬಿಜೆಪಿ ಸೇರಿದ್ದ ನೆಹ್ವಾಲ್
2012ರ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಮತ್ತು 2017ರಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈ ಮಧ್ಯೆ, 2020ರಲ್ಲಿ ಸೈನಾ ನೆಹ್ವಾಲ್ ಬಿಜೆಪಿಗೆ ಸೇರಿದ್ದರು. ಇದೇ ಸಂದರ್ಭದಲ್ಲಿ ಸಿದ್ಧಾರ್ಥ್ ದಕ್ಷಿಣ ಚಲನಚಿತ್ರಗಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್ ನ ಹಿಟ್ ಚಿತ್ರವಾದ ‘ರಂಗ್ ದೇ ಬಸಂತಿ’ಯಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದರು.





Read more

[wpas_products keywords=”deal of the day”]