ಹೈಲೈಟ್ಸ್:
- ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿ.
- ಕೇಪ್ ಟೌನ್ ಟೆಸ್ಟ್‌ನಲ್ಲಿ ಹೋರಾಟಯುತ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ.
- ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸಂಜಯ್ ಮಾಂಜ್ರೇಕರ್.
ಆದರೆ, 2019ರ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪರಾಕ್ರಮ ಗಣನೀಯ ರೀತಿಯಲ್ಲಿ ಕುಸಿದಿದೆ. ಅಂದಿನಿಂದ ಇಂದಿನವರೆಗೂ ಕೊಹ್ಲಿ ಒಂದು ಶತಕವನ್ನೂ ಬಾರಿಸಿಲ್ಲ ಎಂಬುದು ಅಚ್ಚರಿಯ ಸಂಗತಿ. ಪ್ರಸಕ್ತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಹಣಾಹಣಿಯ ಮೊದಲ ಇನಿಂಗ್ಸ್‌ನಲ್ಲಿ 79 ರನ್ ಗಳಿಸಿರುವುದು ಕಳದ 23 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.
ಕೊಹ್ಲಿ ಲಯ ಕಳೆದುಕೊಂಡಿರುವ ಬಗ್ಗೆ ಮಾತನಾಡಿರುವ ಭಾರತ ತಂಡ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೇಕರ್, ವಿರಾಟ್ ಅವರಲ್ಲಿನ ಆತ್ಮವಿಶ್ವಾಸ ಕುಸಿಯುತ್ತಿದೆ. ಅದಕ್ಕೆ ಅವರ ಬ್ಯಾಟ್ ಮೂಲಕ ರನ್ ಬರುತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಕೊಹ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬುದನ್ನು ತಾವು ಕಲ್ಪನೆ ಕೂಡ ಮಾಡಿರಲಿಲ್ಲ ಎಂದಿದ್ದಾರೆ.
ಹೋರಾಟದ 79 ರನ್ ಗಳಿಸಿ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಕೇಪ್ ಟೌನ್ ಟೆಸ್ಟ್‌ನಲ್ಲಿ ತಮ್ಮ ಶತಕದ ಬರ ನೀಗಿಸಿಕೊಳ್ಳವ ರೀತಿ ಬ್ಯಾಟ್ ಮಾಡಿದ ವಿರಾಟ್ ಅತ್ಯಂತ ಎಚ್ಚರಿಕೆಯಿಂದ ರನ್ ಹೆಕ್ಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿ ತಂಡದ ಪರ ರನ್ ಹೆಕ್ಕಿದ ಕಿಂಗ್ ಕೊಹ್ಲಿ ಬರೋಬ್ಬರಿ 201 ಎಸೆತಗಳನ್ನು ಎದುರಿಸಿ 12 ಫೋರ್ ಮತ್ತೊಂದು ಸಿಕ್ಸರ್ ಒಳಗೊಂಡಂತೆ 79 ರನ್ ಗಳಿಸಿ ಔಟ್ ಆದರು.
“ವಿರಾಟ್ ಕೊಹ್ಲಿ ಅಮೋಘ ಬ್ಯಾಟ್ಸ್‌ಮನ್. ಆದರೆ ಸದ್ಯಕ್ಕೆ ಅವರು ಲಯ ಕಳೆದುಕೊಂಡಿದ್ದಾರೆ. ಇದೇ ಮೊದಲ ಬಾರಿ ವಿರಾಟ್ ರನ್ ಗಳಿಸಲು ಇಷ್ಟು ಕಷ್ಟ ಪಡುತ್ತಿರುವುದನ್ನು ನಾನು ನೋಡಿರುವುದು. ಐಪಿಎಲ್‌ನಲ್ಲೂ ಕಂಡಿದ್ದೇವೆ. ಅಂದಹಾಗೆ ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಅಷ್ಟೆ. ಇನ್ನು ಅವರು ಆತ್ಮವಿಶ್ವಾಸ ಕಳೆದುಕೊಳ್ಳುವ ದಿನ ಬರುವುದೇ ಇಲ್ಲ ಎಂದು ಅಂದುಕೊಂಡಿದ್ದೆ. ಆದರೆ, ಯಾವುದೂ ಶಾಶ್ವತವಲ್ಲ ಎಂಬ ಮಾತಿದೆ. ಆತ್ಮ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಅವರು ರನ್ ಬರ ಎದುರಿಸಿದ್ದಾರೆ,” ಎಂದು ಮಾಂಜ್ರೇಕರ್ ಹೇಳಿದ್ದಾರೆ.
ವೈಫಲ್ಯದಲ್ಲಿ ಮುಳುಗಿರುವ ಪೂಜಾರ-ರಹಾನೆಗೆ ಕೊಹ್ಲಿ ಪೂರ್ಣ ಬೆಂಬಲ!
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ 35 ಮತ್ತು 18 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಬೆನ್ನು ನೋವಿನ ಸಮಸ್ಯೆ ಕಾರಣ ಎರಡನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಇದೀಗ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮನಮೋಹಕ ಅರ್ಧಶತಕ ಬಾರಿಸಿದ್ದಾರೆ. ಈ ವರ್ಷವಾದರೂ ಕೊಹ್ಲಿ ತಮ್ಮ ಶತಕಗಳ ಬರಕ್ಕೆ ಅಂತ್ಯ ಹಾಡುತ್ತಾರೆಯೇ? ಎಂಬುದನ್ನು ಕಾದು ನೋಡಬೇಕು.
“ವಿರಾಟ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್. ಖಂಡಿತಾ ಅವರು ತಮ್ಮ ಶ್ರೇಷ್ಠ ಲಯಕ್ಕೆ ಮರಳಲಿದ್ದಾರೆ. ಅವರಿಂದ ಮತ್ತೆ ಸ್ಥಿರವಾಗಿ ರನ್ ಗಳಿಸಲು ಖಂಡಿತಾ ಸಾಧ್ಯವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಖಂಡಿತಾ ಕಮ್‌ಬ್ಯಾಕ್ ಮಾಡಲಿದ್ದಾರೆ,” ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಮಾಂಜ್ರೇಕರ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಕೇಪ್ ಟೌನ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 12, ಮಯಾಂಕ್ ಅಗರ್ವಾಲ್ 15, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55ಕ್ಕೆ 3, ಡುವಾನ್ ಓಲಿವಿಯರ್ 42ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1).
Read more
[wpas_products keywords=”deal of the day gym”]