ಹೈಲೈಟ್ಸ್:
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 73,260
- ಚಿಕಿತ್ಸೆ ಫಲಿಸದೇ ರಾಜ್ಯದಲ್ಲಿ ಮಂಗಳವಾರ ಕೂಡಾ 5 ಸೋಂಕಿತರ ಸಾವು
- ಬೆಂಗಳೂರು ನಗರವೊಂದರಲ್ಲೇ ಮೂವರು ಮೃತಪಟ್ಟಿದ್ದಾರೆ
ಕರ್ನಾಟಕ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 30,78,129ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಕೂಡಾ 1,356 ಕೋವಿಡ್ ಸೋಂಕಿತರು ಗುಣಮುಖರಾಗಿ ರಾಜ್ಯಾದ್ಯಂತ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 29,66,461ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 73,260ಕ್ಕೆ ಏರಿಕೆ ಕಂಡಿದೆ. ಚಿಕಿತ್ಸೆ ಫಲಿಸದೇ ರಾಜ್ಯದಲ್ಲಿ ಮಂಗಳವಾರ ಕೂಡಾ 5 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ ಮೂವರು ಮೃತಪಟ್ಟಿದ್ದಾರೆ. ಇನ್ನು ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,379ಕ್ಕೆ ಏರಿಕೆ ಕಂಡಿದೆ.
ಜಿಲ್ಲಾವಾರು ಲೆಕ್ಕಾಚಾರ: ಬಾಗಲಕೋಟೆ 09, ಬಳ್ಳಾರಿ 101, ಬೆಳಗಾವಿ 79, ಬೆಂಗಳೂರು ಗ್ರಾಮಾಂತರ 160, ಬೀದರ್ 43, ಚಾಮರಾಜ ನಗರ 86, ಚಿಕ್ಕಬಳ್ಳಾಪುರ 91, ಚಿಕ್ಕಮಗಳೂರು 41, ಚಿತ್ರದುರ್ಗ 47, ದಕ್ಷಿಣ ಕನ್ನಡ 583, ದಾವಣಗೆರೆ 56, ಧಾರವಾಡ 178, ಗದಗ 21, ಹಾಸನ 121, ಹಾವೇರಿ 08, ಕಲಬುರಗಿ 109, ಕೊಡಗು 29, ಕೋಲಾರ 139, ಕೊಪ್ಪಳ 02, ಮಂಡ್ಯ 263, ಮೈಸೂರು 562, ರಾಯಚೂರು 29, ರಾಮನಗರ 59, ಶಿವಮೊಗ್ಗ 136, ತುಮಕೂರು 332, ಉಡುಪಿ 250, ಉತ್ತರ ಕನ್ನಡ 106, ವಿಜಯಪುರ 20 ಹಾಗೂ ಯಾದಗಿರಿಯಲ್ಲಿ 13 ಮಂದಿ ಕೊರೊನಾ ಸೋಂಕಿತರು ಮಂಗಳವಾರ ಸೃಷ್ಟಿಯಾಗಿದ್ದಾರೆ.
Read more
[wpas_products keywords=”deal of the day sale today offer all”]