Karnataka news paper

ಪಂಜಾಬ್‌ ಚುನಾವಣೆಗೂ ಮುನ್ನ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ: ಗೇಮ್ ಚೇಂಜರ್ ಎಂದ ‘ಸಿಧು’


Online Desk

ನವದೆಹಲಿ: ನಟ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್‌ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ.

ಕೊರೊನಾ ವೈರಸ್‌ ಸಂದರ್ಭದಲ್ಲಿ ತಾನು ಮಾಡಿದ ಸಮಾಜ ಸೇವೆ ಮೂಲಕವೇ ಹೆಸರುವಾಸಿಯಾದ ನಟ ಸೋನು ಸೂದ್‌, ತಮ್ಮ ಸಹೋದರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಇನ್ನು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಚುನಾವಣೆಗೆ ಮುಂಚಿತವಾಗಿ ನಡೆದ ಈ ಬೆಳವಣಿಗೆಯನ್ನು “ಗೇಮ್ ಚೇಂಜರ್” ಎಂದು ಬಣ್ಣಿಸಿದ್ದಾರೆ.  ತಾನು ಕಾಂಗ್ರೆಸ್‌ ಸೇರ್ಪಡೆ ಆಗಿರುವ ಬಗ್ಗೆ ಮಾತನಾಡಿದ ಮಾಳವಿಕಾ ಸೂದ್, “ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ,” ಎಂದು ತಿಳಿಸಿದ್ದಾರೆ.

ಮಾಳವಿಕಾ ಸೂದ್ ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. 

ಇದನ್ನೂ ಓದಿ: ಪಂಜಾಬ್ ‘ಸ್ಟೇಟ್ ಐಕಾನ್’ ಹುದ್ದೆಗೆ ಬಾಲಿವುಡ್ ನಟ ಸೋನು ಸೂದ್‌ ಗುಡ್ ಬೈ: ಕಾರಣ ಏನು?

ಸೋನು ಸೂದ್ ಮಾನವೀಯತೆ ಮತ್ತು ದಯೆಯಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಇಂದು ಆ ಕುಟುಂಬದ ಸದಸ್ಯರೊಬ್ಬರು ನಮ್ಮೊಂದಿಗೆ ಸೇರುತ್ತಿದ್ದಾರೆ. ಆಕೆ ವಿದ್ಯಾವಂತ ಮಹಿಳೆ,” ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.



Read more

[wpas_products keywords=”deal of the day”]