ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯ.
- ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳಿಗೆ ಟೀಮ್ ಇಂಡಿಯಾ ಆಲ್‌ಔಟ್, ಕೊಹ್ಲಿ 79 ರನ್.
ಅತ್ತ ಕಗಿಸೊ ರಬಾಡ (73ಕ್ಕೆ 3) ಮತ್ತು ಮಾರ್ಕೊ ಯೆನ್ಸನ್ (55ಕ್ಕೆ 3) ಮಾರಕ ಬೌಲಿಂಗ್ ದಾಳಿ ಸಂಘಟಿಸಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡುತ್ತಿದ್ದರೆ, ಇತ್ತ ತಾಳ್ಮೆಯ ಮೂರ್ತಿಯಂತೆ ನಿಂತು ಏಕಾಂಗಿ ಹೋರಾಟ ನಡೆಸಿದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನಲ್ಲಿ ತಮ್ಮ ಎರಡನೇ ಅತ್ಯಂತ ಮಂದಗತಿಯ ಅರ್ಧಶತಕ ಬಾರಿಸಿದರು.
ಬರೋಬ್ಬರಿ 201 ಎಸೆತಗಳಲ್ಲಿ 12 ಫೋರ್ ಮತ್ತು 1 ಸಿಕ್ಸರ್ ಒಳಗೊಂಡ 79 ರನ್ ಗಳಿಸಿದ ವಿರಾಟ್ ಕೊಹ್ಲಿ, ತಮ್ಮ ಈ ಮ್ಯಾರಥಾನ್ ಹೋರಾಟದ ಇನಿಂಗ್ಸ್ ವೇಳೆ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆ ಒಂದನ್ನು ಮುರಿದಿದ್ದಾರೆ.
ಟೀಮ್ ಇಂಡಿಯಾದ ಬೆಸ್ಟ್ ಬ್ಯಾಟ್ಸ್‌ಮನ್-ಬೌಲರ್ ಹೆಸರಿಸಿದ ಲಾಬುಶೇನ್!
ಸತತ ವೈಫಲ್ಯಗಳ ಬಳಿಕ ಕೊನೆಗೂ ಲಯ ಕಂಡುಕೊಂಡ ಕೊಹ್ಲಿ ಶತಕವನ್ನು ಎದುರು ನೋಡುತ್ತಿದ್ದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದೇ ಹೋಯಿತು. ಆದರೂ, ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್‌ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಸಂಪಾದಿಸಿ ರಾಹುಲ್ ದ್ರಾವಿಡ್‌ಗೆ ಸಡ್ಡು ಹೊಡೆದಿದ್ದಾರೆ.
ಮಂಗಳವಾರ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ದ್ರಾವಿಡ್ ಹರಿಣಗಳ ನಾಡಲ್ಲಿ ಟೀಮ್ ಇಂಡಿಯಾ ಪರ 624 ರನ್‌ಗಳನ್ನು ಬಾರಿಸಿದ್ದಾರೆ. ಈಗ ದ್ರಾವಿಡ್ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಎರಡನೇ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಕೊಹ್ಲಿ ಹೊರಹೊಮ್ಮಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 1992-2011ರವರೆಗೆ ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 1161 ರನ್‌ಗಳನ್ನು ಬಾರಿಸಿದ್ದಾರೆ.
ವೈಫಲ್ಯದಲ್ಲಿ ಮುಳುಗಿರುವ ಪೂಜಾರ-ರಹಾನೆಗೆ ಕೊಹ್ಲಿ ಪೂರ್ಣ ಬೆಂಬಲ!
ಮಂದಗತಿಯ ಹಾಫ್ ಸೆಂಚುರಿ!
ರನ್ ಗಳಿಸುವ ಹಠದಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ, ಅರ್ಧಶತಕ ಬಾರಿಸುವ ಸಲುವಾಗಿ ಬರೋಬ್ಬರಿ 159 ಎಸೆತಗಳನ್ನು ತೆಗೆದುಕೊಂಡರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಬಾರಿಸಿದ ಎರಡನೇ ಅತ್ಯಂತ ನಿಧಾನ ಗತಿಯ ಹಾಫ್ ಸೆಂಚುರಿ ಆಗಿದೆ. ಇದಕ್ಕೂ ಮುನ್ನ 2012ರಲ್ಲಿ ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಫಿಫ್ಟಿ ಸಲುವಾಗಿ 171 ಎಸೆತಗಳನ್ನು ತೆಗೆದುಕೊಂಡಿದ್ದರು.
ಕೊಹ್ಲಿ ಇದೇ ವೇಳೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಒಟ್ಟಾರೆ 99ನೇ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಬರೆದಿದ್ದಾರೆ. ಇದು ಅವರ ವೃತ್ತಿಬದುಕಿನ 99ನೇ ಟೆಸ್ಟ್ ಪಂದ್ಯ ಎಂಬುದು ಕೂಡ ವಿಶೇಷ.
ಕೇಪ್ ಟೌನ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 12, ಮಯಾಂಕ್ ಅಗರ್ವಾಲ್ 15, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55ಕ್ಕೆ 3, ಡುವಾನ್ ಓಲಿವಿಯರ್ 42ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1).
Read more
[wpas_products keywords=”deal of the day sale today offer all”]