Karnataka news paper

Pushpa: ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸಿನೆಸ್ ಮಾಡಿದ ಪುಷ್ಪ!


ಹೈಲೈಟ್ಸ್‌:

  • ಇದೇ ತಿಂಗಳು ಬಿಡುಗಡೆಯಾಗಲಿದೆ ‘ಪುಷ್ಪ’ ಸಿನಿಮಾ
  • ರಿಲೀಸ್‌ಗೂ ಮುನ್ನವೇ ಕೋಟ್ಯಂತರ ರೂಪಾಯಿ ಬಿಸಿನೆಸ್ ಮಾಡಿದೆ ‘ಪುಷ್ಪ’ ಚಿತ್ರ
  • ಬಿಡುಗಡೆಗೂ ಮುನ್ನ 250 ಕೋಟಿ ರೂಪಾಯಿ ಬಿಸಿನೆಸ್ ಮಾಡಿದ ‘ಪುಷ್ಪ’

‘ಅಲಾ ವೈಕುಂಠಪುರಮುಲೋ’ ಸಿನಿಮಾದ ಬಳಿಕ ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟಿಸಿರುವ ಚಿತ್ರವೇ ‘ಪುಷ್ಪ’. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಪುಷ್ಪ’ (Pushpa: The Rise – Part 1) ಚಿತ್ರದ ಮೊದಲನೇ ಭಾಗ ಡಿಸೆಂಬರ್ 17 ರಂದು ಬಿಡುಗಡೆಯಾಗಲಿದೆ.

‘ಆರ್ಯ’ ಹಾಗೂ ‘ಆರ್ಯ 2’ ಸಿನಿಮಾದ ಬಳಿಕ ನಿರ್ದೇಶಕ ಸುಕುಮಾರ್ (Sukumar) ಹಾಗೂ ಅಲ್ಲು ಅರ್ಜುನ್ ಒಂದಾಗಿರುವುದು ‘ಪುಷ್ಪ’ ಚಿತ್ರಕ್ಕಾಗಿಯೇ. ಹೀಗಾಗಿ, ‘ಪುಷ್ಪ’ ಸಿನಿಮಾದ ಮೇಲೆ ಸಿನಿ ಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಬೆಟ್ಟದಷ್ಟಿದೆ. ಬಹು ನಿರೀಕ್ಷೆ ಹುಟ್ಟಿಸಿರುವ ‘ಪುಷ್ಪ’ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿ ಬಿಸಿನೆಸ್ ಮಾಡಿದೆ.

‘ಪುಷ್ಪ’ ಸಿನಿಮಾದ ಅಲ್ಲು ಅರ್ಜುನ್‌ರ ಪಾತ್ರವು ಕಾಡುಗಳ್ಳ ವೀರಪ್ಪನ್‌ರಿಂದ ಪ್ರೇರಣೆ ಪಡೆದಿದೆಯೇ?
‘ಪುಷ್ಪ’ ಚಿತ್ರದ ಪ್ರೀ-ರಿಲೀಸ್ ಬಿಸಿನೆಸ್
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ರಿಲೀಸ್‌ಗೂ ಮುನ್ನವೇ ‘ಪುಷ್ಪ’ ಸಿನಿಮಾ 250 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಎಲ್ಲಾ ಭಾಷೆಗಳ ಥಿಯೇಟ್ರಿಕಲ್ ರೈಟ್ಸ್ 250 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ.

ಹಾಗ್ನೋಡಿದ್ರೆ, ‘ಪುಷ್ಪ’ ಸಿನಿಮಾ ತಯಾರಾಗಿರುವುದೇ 250 ಕೋಟಿ ರೂಪಾಯಿ ಬಜೆಟ್‌ನಲ್ಲಿ. ಅಲ್ಲಿಗೆ, ಬಿಡುಗಡೆಗೂ ಮುನ್ನವೇ ‘ಪುಷ್ಪ’ ಚಿತ್ರದ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್ ಬಂದಂತಾಗಿದೆ.

‘ಪುಷ್ಪ’ ಚಿತ್ರದ ಐಟಂ ಸಾಂಗ್ ಮೂಲಕ ಸದ್ದು ಮಾಡಿದ ಗಾಯಕಿ ಮಂಗ್ಲಿ ಸಹೋದರಿ ಇಂದ್ರವತಿ!
‘ಪುಷ್ಪ’ ಕಥಾಹಂದರವೇನು?
ರಾಯಲಸೀಮದ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಕುರಿತಾದ ಕಥಾಹಂದರವನ್ನು ‘ಪುಷ್ಪ’ ಸಿನಿಮಾ ಹೊಂದಿದೆ. ‘ಪುಷ್ಪ’ ಚಿತ್ರದಲ್ಲಿ ಟ್ರಕ್ ಡ್ರೈವರ್ ಪುಷ್ಪ ರಾಜ್ ಆಗಿ ಅಲ್ಲು ಅರ್ಜುನ್ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಉಳಿದಂತೆ ಫಹಾದ್ ಫಾಸಿಲ್ (Fahadh Fasil), ಜಗಪತಿ ಬಾಬು (Jagapathi Babu), ಪ್ರಕಾಶ್ ರಾಜ್ (Prakash Raj), ಧನಂಜಯ, ಸುನೀಲ್, ಅನಸೂಯ ಭಾರದ್ವಾಜ್, ವೆನ್ನೆಲ್ಲಾ ಕಿಶೋರ್ ತಾರಾಬಳಗದಲ್ಲಿದ್ದಾರೆ.

ಟ್ವಿಟರ್‌ನಲ್ಲಿ ದಾಖಲೆ ಬರೆದ ‘ಬೀಸ್ಟ್’ ಪೋಸ್ಟರ್‌; ‘ಪುಷ್ಪ’ ತಂಡಕ್ಕೆ ದುಬಾರಿ ಗಿಫ್ಟ್ ನೀಡಿದ ‘ಐಕಾನ್ ಸ್ಟಾರ್’!
ಐಟಂ ಸಾಂಗ್‌ನಲ್ಲಿ ಸಮಂತಾ
ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿರುವುದು ‘ಪುಷ್ಪ’ ಚಿತ್ರಕ್ಕಾಗಿ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ‘ಊ ಅಂಟಾವಾ ಮಾವ..’ ಹಾಡಿನಲ್ಲಿ ನಟಿ ಸಮಂತಾ ಸೊಂಟ ಬಳುಕಿಸಿದ್ದಾರೆ. ಈಗಾಗಲೇ ಈ ಹಾಡಿನ ತುಣುಕು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ, ಹಾಗೇ ಸಂಕಷ್ಟಕ್ಕೂ ಸಿಲುಕಿದೆ.

‘ಊ ಅಂಟಾವಾ’ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳಲ್ಲಿ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪುರುಷರ ಸಂಘವೊಂದು ದೂರು ನೀಡಿದೆ. ‘ಊ ಅಂಟಾವಾ’ ಹಾಡನ್ನು ಬ್ಯಾನ್ ಮಾಡಬೇಕೆಂದು ಪುರುಷರ ಸಂಘವೊಂದು ಆಗ್ರಹಿಸಿದೆ ಎಂದು ವರದಿಯಾಗಿದೆ.



Read more