Karnataka news paper

ಅಹ್ಮದಾಬಾದ್‌ ಮತ್ತು ಲಖನೌ ತಂಡಗಳಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಬಿಸಿಸಿಐ!


ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ.
  • ಲೀಗ್‌ಗೆ ಅಹ್ಮದಾಬಾದ್‌ ಮತ್ತು ಲಖನೌ ತಂಡಗಳು ಆಗಮನವಾಗಿದೆ.
  • ಹೊಸ ಫ್ರಾಂಚೈಸಿಗಳಿಗೆ ಮಂಗಳವಾರ ಹಸಿರು ನಿಶಾನೆ ತೋರಿದ ಬಿಸಿಸಿಐ.

ಮುಂಬೈ: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹೊಸ ಫ್ರಾಂಚೈಸಿಗಳಾದ ಅಹ್ಮದಾಬಾದ್‌ ಮತ್ತು ಲಖನೌ ತಂಡಗಳು ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಹಸಿರು ನಿಶಾನೆ ತೋರಿದೆ.

ಕ್ರಿಕೆಟ್‌ ಜಗತ್ತಿನ ಐಶಾರಾಮಿ ಟೂರ್ನಿ ಆಗಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಎರಡು ಹೊಸ ತಂಡಗಳನ್ನು ಕಂಪನಿ ಪಿಟಿಇ ಲಿಮಿಟೆಡ್‌ (ಸಿವಿಸಿ ಕ್ಯಾಪಿಟಲ್‌) ಮತ್ತು ಆರ್‌ಪಿ ಸಂಜೀವ್‌ ಗೋಯೆಂಕ ಗ್ರೂಪ್ಸ್‌ ಒಟ್ಟಾರೆ 12,715 ಕೋಟಿ ರೂ.ಗಳ ಹಣದ ಹೊಳೆ ಹರಿಸುವ ಮೂಲಕ ಖರೀದಿ ಮಾಡಿದ್ದವು.

ಬಿಸಿಸಿಐ ಮಂಗಳವಾರ ತನ್ನ ಆಡಳಿತ ಮಂಡಳಿ ಸಭೆ ನಡೆಸುವ ಮೂಲಕ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಸಭೆಯಲ್ಲಿ ಆರ್‌ಪಿಎಸ್‌ಜಿ ಗ್ರೂಪ್ಸ್‌ ಮಾಲೀಕತ್ವದ ಲಖನೌ ಮತ್ತು ಸಿವಿಸಿ ಕ್ಯಾಪಿಟಲ್ಸ್‌ ಮಾಲೀಕತ್ವದ ಅಹ್ಮದಾಬಾದ್‌ ತಂಡಗಳಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ.

‘ವೀವೊಗೆ ಕೊಕ್‌’, ಟೈಟಲ್‌ ಸ್ಪಾನ್ಸರ್‌ ರೇಸ್‌ನಲ್ಲಿ ಟಾಟಾ ಮುಂದು!

ಈ ಬಗ್ಗೆ ಮಾತನಾಡಿರುವ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌, ಎರಡು ಹೊಸ ತಂಡಗಳಿಗೆ ತಮ್ಮ ಮೂರು ಆಟಗಾರರ ಹೆಸರನ್ನು ಪ್ರಕಟ ಮಾಡಲು 2 ವಾರಗಳ ಕಾಲಾವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ. ಫೆ.12-13ರಂದು ಬೆಂಗಳೂರಿನಲ್ಲಿ ಐಪಿಎಲ್‌ 2022 ಟೂರ್ನಿ ಸಲುವಾಗಿ ಮೆಗಾ ಆಕ್ಷನ್‌ (ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ) ನಡೆಯಲಿದ್ದು, ಇದಕ್ಕೂ ಮುನ್ನ ಹೊಸ ತಂಡಗಳು ತಲಾ ಮೂರು ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

“ಲಖನೌ ಮತ್ತು ಅಹ್ಮದಾಬಾದ್‌ ತಂಡಗಳಿಗೆ ಅಧಿಕೃತವಾಗಿ ಕ್ಲೀನ್‌ ಚಿಟ್‌ ನೀಡಲಾಗಿದೆ. ಈಗ ಹರಾಜು ಪ್ರಕ್ರಿಯೆಗೂ ಮುನ್ನ ತಮ್ಮ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು 2 ವಾರಗಳ ಕಾಲಾವಕಾಶವನ್ನು ಈ ತಂಡಗಳಿಗೆ ನೀಡಲಾಗಿದೆ,” ಎಂದು ಪಟೇಲ್‌ ಎಎನ್‌ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಫೆ.12-13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಖಾತ್ರಿ ಪಡಿಸಿದ್ದಾರೆ.

ಐಪಿಎಲ್‌ 2022: ಅಹ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್‌!

ಟಾಟಾ ನೂತನ ಟೈಟಲ್‌ ಸ್ಪಾನ್ಸರ್ಸ್‌
ಇದಕ್ಕೂ ಮುನ್ನ ಐಪಿಎಲ್‌ನ ಟೈಟಲ್‌ ಸ್ಪಾನ್ಸರ್‌ಷಿಪ್‌ನಿಂದ ಚೀನಾದ ಮೊಬೈಲ್‌ ಫೋನ್‌ ತಯಾರಿಕಾ ಸಂಸ್ಥೆ ವೀವೊ ಹಿಂದೆ ಸರಿದಿದೆ. 2018ರಲ್ಲಿ 442 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ 2023ರವರೆಗೆ ಐಪಿಎಲ್‌ ಟೈಟಲ್‌ ಸ್ಪಾನ್ಸರ್‌ಷಿಪ್‌ ತನ್ನದಾಗಿಸಿಕೊಂಡಿತ್ತು. ಈಗ ಅವಧಿಗೂ ಮೊದಲೇ ಈ ಒಪ್ಪಂದವನ್ನು ವೀವೊ ಕಡಿದುಕೊಂಡಿದೆ.

ಈಗ ಐಪಿಎಲ್‌ 2022 ಮತ್ತು 2023ರ ಸಾಲಿನ ಟೂರ್ನಿಗಳ ಟೈಟಲ್‌ ಸ್ಪಾನ್ಸರ್‌ಷಿಪ್‌ ಸಲುವಾಗಿ ಟಾಟಾ ಗ್ರೂಪ್ಸ್‌ ಬರೋಬ್ಬರಿ 670 ಕೋಟಿ ರೂ. ಪಾವತಿ ಮಾಡಿದೆ ಎಂದು ವರದಿಗಳಾಗಿವೆ.

“ಬಿಸಿಸಿಐ ಮತ್ತು ಐಪಿಎಲ್‌ಗೆ ಇದು ಅತ್ಯಂತ ಮಹತ್ವದ ಸಂಗತಿ. ಭಾರತದ ಟಾಟಾ ಗ್ರೂಪ್ಸ್‌ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬೆಳೆದಿರುವ, 100 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಹಾಗೂ 100ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಬೇರೂರಿರುವ ಸಂಸ್ಥೆ ಆಗಿದೆ. ಈ ಸಂಸ್ಥೆಯೊಂದಿಗಿನ ಒಪ್ಪಂದ ಅತ್ಯಂತ ಭಾವನಾತ್ಮಕವಾದದ್ದು,” ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.

ವಿದೇಶದಲ್ಲಿ ಐಪಿಎಲ್‌ 2022

ಭಾರತದಲ್ಲೇ ಐಪಿಎಲ್‌ 2022 ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಭಾರತದಲ್ಲಿ ಕೊರೊನಾ ವೈರಸ್‌ನ ಮೂರನೇ ಅಲೆಯ ಆರ್ಭಟ ಆರಂಭವಾಗಿದ್ದು, ಈಗಾಗಲೇ ಕೆಲ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಯಾವುದೇ ಅಡೆ ತಡೆಗಳು ಇಲ್ಲದಂತೆ ಟೂರ್ನಿ ಆಯೋಜಿಸುವ ಸಲುವಾಗಿ ಬಿಸಿಸಿಐ ವಿದೇಶದ (ಯುಎಇ) ಆಲೋಚಿಸುತ್ತಿದೆ.

ಐಪಿಎಲ್‌ 2021 ಟೂರ್ನಿಯನ್ನು ಕೋವಿಡ್‌-19 2ನೇ ಅಲೆಯ ಮಧ್ಯದಲ್ಲಿ ಭಾರತದಲ್ಲೇ ಆಯೋಜಿಸಿ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿಯನ್ನು ಬಿಸಿಸಿಐ ಎದುರಿಸಿತ್ತು. ಈ ಬಾರಿ ಈ ರೀತಿಯ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ಬಿಸಿಸಿಐ ಲೆಕ್ಕಾಚಾರವಾಗಿದೆ.



Read more

[wpas_products keywords=”deal of the day gym”]