Karnataka news paper

ಪಂಜಾಬ್‌ ಸಿಎಂ ಯಾರು ಎಂದು ನಿರ್ಧರಿಸಲು ಅವರ್ಯಾರು?: ಕಾಂಗ್ರೆಸ್ ಹೈ ಕಮಾಂಡ್‌ಗೆ ಸಿಧು ಪರೋಕ್ಷ ಎಚ್ಚರಿಕೆ


ಹೊಸ ದಿಲ್ಲಿ: ಪಂಜಾಬ್‌ ವಿಧಾನಸಭೆ ಚುನಾವಣೆಗೆ ದಿನಗಣನೆ ಇರುವಾಗಲೇ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ಕಾಂಗ್ರೆಸ್ ಹೈ ಕಮಾಂಡ್‌ಗೆ ಮತ್ತೊಂದು ಸಂದೇಶ ರವಾನೆ ಮಾಡಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುವುದು, ಪಂಜಾಬ್‌ನ ಜನರೇ ಹೊರೆತು, ಹೈ ಕಮಾಂಡ್‌ ಅಲ್ಲ ಎಂದು ಹೇಳುವ ಮೂಲಕ ಮತ್ತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದು ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

ಈ ಹಿಂದೆ ಕೂಡ ಸಿಧು ಹಲವು ಬಾರಿ, ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧನ ವ್ಯಕ್ತ ಪಡಿಸಿದ್ದರು. ಇದೀಗ ಸಿಎಂ ಆಯ್ಕೆ ನಿಮ್ಮ ಕೈಯಲ್ಲಿ ಇಲ್ಲ ಎಂದು ಹೈ ಕಮಾಂಡ್‌ಗೆ ಪರೋಕ್ಷವಾಗಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಯಾರು? ಅವರಿಗೆ ಯಾವ ಅಧಿಕಾರವಿದೆ?: ಪಂಜಾಬ್ ಸಿಎಂ ವಿರುದ್ಧ ಬಿಜೆಪಿ ಕಿಡಿ
ಮಂಗಳವಾರ ಮಾಧ್ಯಮಗೋಷ್ಠಿಯೊಂದರಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಪಂಜಾಬ್‌ನ ಜನ ತೀರ್ಮಾನಿಸುತ್ತಾರೆಯೇ ಹೊರೆತು ಹೈ ಕಮಾಂಡ್‌ ಅಲ್ಲ ಎಂದು ಹೇಳಿದ್ದಾರೆ.

‘ತಲೆಯಲ್ಲಿ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ. ಪಂಜಾಬ್‌ನ ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಹೈ ಕಮಾಂಡ್‌ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಎಂದು ನಿಮಗೆ ಹೇಳಿದವರು ಯಾರು? ತಮ್ಮ ಶಾಸಕ ಯಾರಾಗಬೇಕು ಎಂದು ಆಯ್ಕೆ ಮಾಡುವ ಜನರೇ ಅವರ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುನ್ನೂ ಆಯ್ಕೆ ಮಾಡುತ್ತಾರೆ’ ಎಂದು ಸಿದ್ದು ಎಂದಿನ ಶೈಲಿಯಲ್ಲಿ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಯಾರಗಬೇಕು ಎನ್ನುವುದ್ನು ಹೈ ಕಮಾಂಡ್‌ ನಿರ್ಧರಿಸುತ್ತದೆ. ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್‌ ಚುನಾವಣೆ ಎದುರಿಸಲಿದೆ ಎಂದು ಪಂಜಾಬ್‌ ಕಾಂಗ್ರೆಸ್‌ನ ಹಿರಿಯ ನಾಯಕ ಸುನೀಲ್‌ ಜಾಕರ್ ಅವರ ಹೇಳಿಕೆ ನೀಡಿದ ಮಾರನೇ ದಿನವೇ, ಸಿದ್ದು ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಭದ್ರತಾ ವೈಫಲ್ಯ ನಡೆದು 18 ಗಂಟೆಗಳ ಬಳಿಕ ಎಫ್‌ಐಆರ್ ದಾಖಲು: ಪ್ರಧಾನಿ ಮೋದಿ ಉಲ್ಲೇಖವೇ ಇಲ್ಲ!
ಸಿಧು ಅವರ ಈ ಹೇಳಿಕೆ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಮತ್ತೆ ನಿರೂಪಿಸಿದೆ.

ಈ ಹಿಂದೆ ರಾಜ್ಯ ಪೊಲೀಸ್‌ ಮಾಹಾ ನಿರ್ದೇಶಕ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಸಿಧು, ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.



Read more

[wpas_products keywords=”deal of the day sale today offer all”]