Karnataka news paper

ಬಾಲಿವುಡ್‌ ನಟ, ನಟಿಯರಿಗೆ ಪುಸ್ತಕ ಪ್ರೇಮ; ಯಾರು ಯಾರು ಏನೇನು ಬರೆದಿದ್ದಾರೆ?


ಹೈಲೈಟ್ಸ್‌:

  • ಸಿನಿಮಾ ಕೆಲಸದ ನಡುವೆ ಪುಸ್ತಕ ಬರೆಯುತ್ತಿರುವ ಬಾಲಿವುಡ್ ಸೆಲೆಬ್ರಿಟಿಗಳು
  • ಪುಸ್ತಕದಲ್ಲಿ ಅವರ ಜೀವನದಲ್ಲಿ ನಡೆದಿರುವ ಘಟನೆ ಹೇಳಿದ ಸೆಲೆಬ್ರಿಟಿಗಳು
  • ಯಾರು ಯಾರು ಪುಸ್ತಕ ಬರೆದಿದ್ದಾರೆ?

ಸದಾ ಶೂಟಿಂಗ್‍ನಲ್ಲಿರುವ ಸೆಲೆಬ್ರಿಟಿಗಳಿಗೆ ಓದುವ ಅಭ್ಯಾಸ ಸಾಕಷ್ಟು ಇದೆ. ಶೂಟಿಂಗ್ ನಡುವೆಯೋ ಅಥವಾ ಪ್ರಯಾಣದ ನಡುವೆ ಓದುತ್ತಾರೆ. ಕೇವಲ ಓದುವುದಷ್ಟೇ ಅಲ್ಲ, ಬರೆಯುವ ಹವ್ಯಾಸ ಕೂಡ ಹಲವರಿಗೆ ಇದೆ. ಕೆಲವು ಸಿಲೆಬ್ರಿಟಿಗಳ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತವೆ. ಈ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೆಲವು ತಾರೆಯರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳೂ ಸದಾ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತವೆ. ಅಂತಹ ಕೆಲವು ಬಾಲಿವುಡ್ ಮಂದಿಯ ವಿವರ ಇಲ್ಲಿದೆ.

ತುಷಾರ್ ಕಪೂರ್ ( Bachelor Dad )
`ಬ್ಯಾಚೆಲರ್ ಡ್ಯಾಡ್’ ಪುಸ್ತಕ ಕುತೂಹಲಕಾರಿಯಾಗಿದೆ. ಸರೋಗಸಿ ಮೂಲಕ ಮಗುವನ್ನು ಪಡೆದಿರುವ ಇವರು ತಮ್ಮ ಏಕ ಪೋಷಕತ್ವದ ಬಗ್ಗೆ ಬರೆದಿರುವ ಪುಸ್ತಕ ಇದು. ಹಲವು ಕುತೂಹಲಗಳನ್ನು ಅಡಗಿಸಿಕೊಂಡ ಪುಸ್ತಕ ಗಮನ ಸೆಳೆದಿದೆ.

ಪ್ರಿಯಾಂಕಾ ಚೋಪ್ರಾ (
Unfinished: A Memoir )
ಇವರ `ಅನ್ ಫಿನಿಷ್ಡ್’ ಪುಸ್ತಕ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿದ್ದು, ಭಾರತ ಹಾಗೂ ಅಮೆರಿಕ ಎರಡೂ ಕಡೆ ಬೇಡಿಕೆ ಸೃಷ್ಟಿಸಿಕೊಂಡ ಪುಸ್ತಕವೆನಿಸಿಕೊಂಡಿದೆ.

ಗೌರಿ ಖಾನ್ ( My Life In Design )
`ಮೈ ಲೈಫ್ ಇನ್ ಡಿಸೈನ್’ ಇಂಟೀರಿಯರ್ ಡಿಸೈನರ್ ಆಗಿ ಇವರ ಅನುಭವ ಹಾಗೂ ಮಾಹಿತಿ ಒಳಗೊಂಡ ಕಾಫಿ ಟೇಬಲ್ ಬುಕ್ ಅವರೊಳಗಿನ ಕಲೆಯ ಸೂಕ್ಷ್ಮತೆಯನ್ನು ಹಿಡಿದಿಡುತ್ತದೆ. ಕಲಾತ್ಮಕ ಸಂವೇದನೆ ಎದ್ದು ಕಾಣುವ ಈ ಪುಸ್ತಕ ಸದಾ ಪ್ರಸ್ತುತ.

ತೂಕ ಇಳಿಸಿಕೊಳ್ಳಲು 15 ದಿನ ಉಪವಾಸ ಇದ್ದೆ ಎಂದ ನಟ ಆಮೀರ್ ಖಾನ್ ಮಗಳು ಇರಾ ಖಾನ್

ಕರೀನಾ ಕಪೂರ್ ( The Pregnancy Bible )
`ಪ್ರೆಗ್ನೆನ್ಸಿ ಬೈಬಲ್’ ಪುಸ್ತಕದ ಮೂಲಕ ಗರ್ಭಾವಸ್ಥೆ ಹಾಗೂ ಅದರ ಸುತ್ತ ಸುತ್ತುವ ಇವರ ಪುಸ್ತಕ ಹೆಣ್ಣುಮಕ್ಕಳ ಆಪ್ತ ಸಂಗಾತಿ.

ಟಿಸ್ಕಾ ಚೋಪ್ರಾ: ( what’s up with me )
`ವಾಟ್ಸ್ ಅಪ್ ವಿಥ್ ಮಿ’ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತದ ಭಾವನೆ, ತಳಮಳ ಸೇರಿದಂತೆ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ ಇದು. ಹರೆಯದ ಮನಸ್ಸುಗಳನ್ನು ತಟ್ಟುವ ಪುಸ್ತಕ ಇದು.

ಇಮ್ರಾನ್ ಹಷ್ಮಿ: (
the kiss of life )
`ದಿ ಕಿಸ್ ಆಫ್ ಲೈಫ್’ ಈ ಆತ್ಮಕಥೆಯು ನಟನ ಹಿಂದೆ ಇರುವ ವೈಯಕ್ತಿಕ ಬದುಕನ್ನು ಬಹಿರಂಗಪಡಿಸುತ್ತದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗನನ್ನು ಬೆಂಬಲಿಸಿದ ತಂದೆಯ ಪ್ರಯಾಣ ಇದನ್ನೋದುವ ಪೋಷಕರ ಮನವನ್ನೂ ಕಲಕುತ್ತದೆ.

ನಟಿ ಸಮಂತಾ ಲಾಕ್‌ವುಡ್ ಜೊತೆ ಲವ್‌ನಲ್ಲಿ ಬಿದ್ರಾ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್‌?

ಸೋನಾಲಿ ಬೇಂದ್ರೆ: ( The Modern Gurukul: My Experiments with Parenting )
`ದಿ ಮಾಡರ್ನ್ ಗುರುಕುಲ ಮೈ ಎಕ್ಸ್‍ಪೆರಿಮೆಂಟ್ಸ್ ವಿತ್ ಪೇರೆಂಟಿಂಗ್’ ಪುಸ್ತಕವು ಉತ್ತಮ ಪಾಲನೆಯ ತತ್ವಗಳನ್ನು ಹೊಂದಿದೆ. ಪೋಷಕರ ಸಾಂಪ್ರದಾಯಿಕ ಮತ್ತು ಆಧುನಿಕ ಪಾಲನೆಯ ಸಮತೋಲನ ಕಾದುಕೊಂಡ ಪುಸ್ತಕವಿದು.

ಶಿಲ್ಪಾ ಶೆಟ್ಟಿ ಕುಂದ್ರಾ (
the diary of a domestic diva )
ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿದ್ದ ಕೃತಿ ಶಿಲ್ಪಾ ಶೆಟ್ಟಿ ಅವರ `ದಿ ಡೈರಿ ಆಫ್ ಎ ಡೊಮೆಸ್ಟಿಕ್ ದಿವಾ’. ಆರೋಗ್ಯಕರವಾದ ದಿಢೀರ್ ಆಹಾರ ರೆಸಿಪಿಗಳನ್ನು ಒಳಗೊಂಡ ಇವರ ಬರಹಗಳನ್ನು ಓದುವುದೇ ಖುಷಿಯ ಸಂಗತಿ.



Read more

[wpas_products keywords=”deal of the day party wear dress for women stylish indian”]