The New Indian Express
ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಅಭಿನಯದ O2 ಚಿತ್ರೀಕರಣ ಜನವರಿ 22 ರಂದು ಪುನರಾರಂಭವಾಗಲಿದೆ.
ಇದು ಪುನೀತ್ ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್ ನ ಆರನೇ ಸಿನಿಮಾವಾಗಿದೆ, ಅವರು ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
O2 ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಅವರ ಚೊಚ್ಚಲ ಚಿತ್ರವಾಗಿದೆ, O2 ಸಿನಿಮಾವನ್ನು ಅಕ್ಟೋಬರ್ 8 ರಂದು ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಧಿಕೃತವಾಗಿ ಪ್ರಾರಂಭಿಸಿದ್ದರು.
ನವೆಂಬರ್‌ನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲು ಚಿತ್ರತಂಡ ಬಯಸಿತ್ತು ಆದರೆ ಪವರ್‌ಸ್ಟಾರ್ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಶೂಟಿಂಗ್ ತಡವಾಯಿತು.
ಇದನ್ನೂ ಓದಿ: ಉಜ್ವಲ ಭವಿಷ್ಯ ರೂಪಿಸಲು ಪ್ರಯಾಣ ಪುನರಾರಂಭಿಸುತ್ತೇವೆ, ಸಹಕಾರ ನೀಡಿ: ಪಿಆರ್ ಕೆ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನವಿ
ಚಿತ್ರದಲ್ಲಿ ನಟ-ರೇಡಿಯೋ ಜಾಕಿ ಸಿರಿ ರವಿಕುಮಾರ್, ಯೂಟ್ಯೂಬರ್ ಪುನೀತ್ ಬಿ ಎ ಮತ್ತು ರಂಗಭೂಮಿ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಮಾರ್ಜುನ ಮತ್ತು ಬುದ್ಧಿವಂತ 2 ಚಿತ್ರಗಳಲ್ಲಿ ಕೆಲಸ ಮಾಡಿರುವ ಡಿಒಪಿ ನವೀನ್ ಅವರು O2 ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ. ಚಿತ್ರ ತಂಡ ಸಂಗೀತ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ.
Read more…
[wpas_products keywords=”party wear dress for women stylish indian”]