ಈಗಾಗಲೇ ಯಶ್, ಪ್ರಭಾಸ್, ನಿರ್ದೇಶಕ ರಾಜಮೌಳಿ ಅವರಿಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಯಶ್ ಕಾಲ್‌ಶೀಟ್‌ಗಾಗಿ ಅನೇಕರು ಕಾದಿದ್ದರೆ, ರಾಜಮೌಳಿ ಜೊತೆಗೆ ಸಿನಿಮಾ ಮಾಡಲು ಅನೇಕ ಪ್ರೊಡಕ್ಷನ್ ಹೌಸ್‌ಗಳು ರೆಡಿ ಇದ್ದಾವೆ. ಈ ಮಧ್ಯೆ ಮತ್ತೊಂದಿಷ್ಟು ಸೌತ್ ಇಂಡಿಯಾದ ಪ್ರತಿಭೆಗಳು ಬಾಲಿವುಡ್‌ನಲ್ಲಿ ಹವಾ ಕ್ರಿಯೆಟ್ ಮಾಡಲು ಮುಂದಾಗಿದ್ದಾರೆ. ಹೌದು, 2022ರಲ್ಲಿ ಒಂದಷ್ಟು ಸ್ಟಾರ್ ಕಲಾವಿದರು ಮುಂಬೈ ಕಡೆಗೆ ಹೊರಟಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.
ಸ್ತ್ರೀ ಪ್ರಧಾನ ಸಿನಿಮಾದಲ್ಲಿ ಸಮಂತಾ

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ನಟಿ ಸಮಂತಾ ಅವರು ಸಿನಿಮಾರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಈಚೆಗಷ್ಟೇ ‘ಪುಷ್ಪ’ ಚಿತ್ರದ ಅವರ ಐಟಂ ಸಾಂಗ್ ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಅದು ಬಾಲಿವುಡ್ ಮಂದಿಗೂ ಇಷ್ಟವಾಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್‌ನಲ್ಲಿ ಸಮಂತಾ ನಟನೆ ನೋಡಿ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ. ಇದೀಗ ಪೂರ್ಣಪ್ರಮಾಣದ ಹಿಂದಿ ಸಿನಿಮಾ ಮಾಡೋಕೆ ಸಮಂತಾ ರೆಡಿ ಆಗಿದ್ದಾರೆ. ಹೌದು, ನಟಿ ತಾಪ್ಸೀ ಪನ್ನು ನಿರ್ಮಾಣ ಮಾಡಲಿರುವ ಸ್ತ್ರೀ ಪ್ರಧಾನ ಸಿನಿಮಾವೊಂದರಲ್ಲಿ ಸಮಂತಾ ನಾಯಕಿಯಾಗಿ ಮಿಂಚಲಿದ್ದಾರೆ. ಇದೊಂದು ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದೆ.
ಗೆಳತಿಯರೊಂದಿಗೆ ವರ್ಷಾಂತ್ಯದಲ್ಲಿ ನಟಿ ಸಮಂತಾ ಗೋವಾ ಟ್ರಿಪ್; ಇಲ್ಲಿವೆ ನೋಡಿ ಫೋಟೋಗಳು
ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ವಿಜಯ್ ದೇವರಕೊಂಡ

‘ಅರ್ಜುನ್ ರೆಡ್ಡಿ’ ಹಿಟ್ ಆಗುತ್ತಿದ್ದಂತೆಯೇ, ನಟ ವಿಜಯ್ ದೇವರಕೊಂಡಗೆ ಭಾರಿ ಬೇಡಿಕೆ ಬಂದಿತ್ತು. ಅವರು ಅತೀ ಶೀಘ್ರದಲ್ಲೇ ಬಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರೆ ಎಂಬ ಟಾಕ್ ಇಂಡಸ್ಟ್ರೀಯಲ್ಲಿ ಕೇಳಿಬಂದಿತ್ತು. ಅಲ್ಲದೆ, ಹಿಂದಿ ಚಿತ್ರರಂಗಕ್ಕೂ ವಿಜಯ್ ನಟನೆ ಇಷ್ಟವಾಗಿತ್ತು. ಇದೀಗ ಅದು ‘ಲೈಗರ್’ ಮೂಲಕ ಸಾಧ್ಯವಾಗುತ್ತಿದೆ. ಕರಣ್ ಜೋಹರ್, ಚಾರ್ಮಿ ಕೌರ್ ನಿರ್ಮಾಣದ, ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಹೀರೋ. ಹಿಂದಿ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅನನ್ಯಾ ಪಾಂಡೆ ಈ ಸಿನಿಮಾದ ನಾಯಕಿ. ಮೈಕ್ ಟೈಸನ್ ಕೂಡ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್ ಕದ ತಟ್ಟಿದ ರಶ್ಮಿಕಾ ಮಂದಣ್ಣ

‘ಗೀತ ಗೋವಿಂದಂ’, ‘ಸರಿಲೇರು ನೀಕೆವ್ವರು’, ‘ಪುಷ್ಪ’ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಶ್ಮಿಕಾ, ಈಗ ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಒಂದೇ ಏಟಿಗೆ ಎರಡೆರಡು ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ‘ಮಿಷನ್ ಮಜ್ನು’ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಅದೇ ರೀತಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’ ಸಿನಿಮಾದಲ್ಲೂ ರಶ್ಮಿಕಾ ನಟಿಸಿದ್ದಾರೆ. ಅದು ಕೂಡ ಈ ವರ್ಷವೇ ರಿಲೀಸ್ ಆಗಲಿದೆ.
ಆಮಿರ್ ಖಾನ್ ಜೊತೆಗೆ ಚೈತನ್ಯ

ಒಂದು ಕಡೆ ಮಾಜಿ ಪತ್ನಿ ಸಮಂತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರೆ, ಮತ್ತೊಂದೆಡೆ ನಾಗ ಚೈತನ್ಯ ಕೂಡ ಹಿಂದಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಹೌದು, ಆಮಿರ್ ಖಾನ್ ನಿರ್ಮಿಸಿ, ನಟಿಸಿರುವ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಕೂಡ ನಟಿಸಿದ್ದಾರೆ. ಅದು ಚಿತ್ರಕ್ಕೆ ಬಹುಮುಖ್ಯವಾದ ಪಾತ್ರವಂತೆ. ಬಾಲ ಎಂಬ ಈ ಪಾತ್ರದ ಚಿತ್ರೀಕರಣ ಕಳೆದ ವರ್ಷ ನಡೆದಿತ್ತು. ಈ ವರ್ಷ ಏಪ್ರಿಲ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
Samantha: ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಸಮಂತಾ!
ಹಿಂದಿ ಚಿತ್ರರಂಗಕ್ಕೆ ವಿಜಯ್ ಸೇತುಪತಿ

ದಕ್ಷಿಣ ಭಾರತದಲ್ಲೇ ಈಗಾಗಲೇ ದೊಡ್ಡ ಹವಾ ಸೃಷ್ಟಿಸಿರುವ ನಟ ವಿಜಯ್ ಸೇತುಪತಿ. ಹೀರೋ, ವಿಲನ್ ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತ ಫೇಮಸ್ ಆದವರು ವಿಜಯ್. ಇದೀಗ ಅವರು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ತಮಿಳಿನ ‘ಮಾನಗರಂ’ ಸಿನಿಮಾವು ಹಿಂದಿಗೆ ರಿಮೇಕ್ ಆಗುತ್ತಿದ್ದು, ಅದರಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಹಾಗೆಯೇ, ‘ಅಂಧಾಧುನ್’ ಖ್ಯಾತಿಯ ಶ್ರೀರಾಮ್ ರಾಘವನ್ ನಿರ್ದೇಶನದ ‘ಮೇರಿ ಕ್ರಿಸ್‌ಮಸ್’ ಸಿನಿಮಾದಲ್ಲಿ ಕತ್ರಿನಾ ಕೈಫ್ ಜೊತೆಗೆ ವಿಜಯ್ ಸೇತುಪತಿ ನಟಿಸಲಿದ್ದಾರೆ. ಈ ಎರಡು ಸಿನಿಮಾಗಳು ಕೂಡ 2022ರಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.
Exclusive: ‘ಕನ್ನಡದ ಅಖಾಡ ಸಿನಿಮಾವೇ ನನ್ನ ಲಾಂಚ್ ಪ್ಯಾಡ್’- ನಟ ವಿಜಯ್ ಸೇತುಪತಿ
ಬಾಲಿವುಡ್ ಅಂಗಳದಲ್ಲಿ ಬೆಲ್ಲಂಕೊಂಡ

ತೆಲುಗು ಚಿತ್ರರಂಗದಲ್ಲಿ ಅವರೇಜ್ ಸಿನಿಮಾಗಳನ್ನು ನೀಡುತ್ತಲೇ ಹೆಸರು ಮಾಡಿದ ಹೀರೋ ಬೆಲ್ಲಂಕೊಂಡ ಶ್ರೀನಿವಾಸ್. ಸದ್ಯ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. 2005ರಲ್ಲಿ ರಾಜಮೌಳಿ ತೆಲುಗಿನಲ್ಲಿ ನಿರ್ದೇಶನ ಮಾಡಿದ್ದ ‘ಛತ್ರಪತಿ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದಾರೆ ಶ್ರೀನಿವಾಸ್. ವಿ.ವಿ. ವಿನಾಯಕ್ ಇದರ ನಿರ್ದೇಶನ ಮಾಡುತ್ತಿದ್ದು, 2022ರಲ್ಲೇ ಸಿನಿಮಾ ತೆರೆಗೆ ಬರಲಿದೆ. ಆ ಮೂಲಕ ಬೆಲ್ಲಂಕೊಂಡ ಶ್ರೀನಿವಾಸ್‌ಗೆ ಬಾಲಿವುಡ್‌ನಲ್ಲಾದರೂ ಸಕ್ಸಸ್ ಸಿಗಲಿದೆಯೇ? ಕಾದು ನೋಡಬೇಕು.
ತೆಲುಗಿಗೆ ರಿಮೇಕ್ ಆಗಲಿದೆ ತಮಿಳಿನ ಸೂಪರ್ ಹಿಟ್ ‘ಕರ್ಣನ್’! ಧನುಷ್ ಪಾತ್ರ ಮಾಡೋದ್ಯಾರು?
Read more
[wpas_products keywords=”deal of the day party wear dress for women stylish indian”]