ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ.
- ಭಾರತವನ್ನು ಸೋಲಿಸುವುದು ನನ್ನ ವೃತ್ತಿ ಜೀವನದ ದೊಡ್ಡ ಗುರಿ: ಎಲ್ಗರ್.
- ಮೂರನೇ ಟೆಸ್ಟ್ ಪಂದ್ಯದಲ್ಲಿ ಸೆಣಸುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ.
ಭಾರತ ವಿರುದ್ಧ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಸಂದರ್ಶನದಲ್ಲಿ ಮಾತನಾಡಿದ ಡೀನ್ ಎಲ್ಗರ್,”ಈ ಮೈದಾನದಲ್ಲಿ ಗೆದ್ದರೆ, ನನ್ನ ವೃತ್ತಿ ಜೀವನದ ಅತ್ಯಂತ ದೊಡ್ಡ ಗೆಲುವು ಇದಾಗಲಿದೆ. ಒಂದು ತಂಡವಾಗಿ ಕೇಪ್ ಟೌನ್ ಟೆಸ್ಟ್ ಗೆದ್ದರೆ ಎಲ್ಲಾ ಆಟಗಾರರ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ,” ಎಂದು ಹೇಳಿದ್ದಾರೆ.
“ಒಂದು ಆಟಗಾರರ ಗುಂಪಾಗಿ ನಮಗೆ ಇದು ದೊಡ್ಡ ವಿಷಯ. ಕಳೆದ ಹಲವು ತಿಂಗಳುಗಳಿಂದ ನಾವು ಸಾಕಷ್ಟು ಪ್ರಯತ್ನವನ್ನು ಹಾಕುತ್ತಿದ್ದೇವೆ. ಹಾಗಾಗಿ ಇಲ್ಲಿಯವರೆಗೂ ನಾವು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಕೆಲವು ಸಂಗತಿಗಳನ್ನು ಬಿಟ್ಟರೆ ಇನ್ನುಳಿದ ಎಲ್ಲ ಅಂಶಗಳು ನಮ್ಮ ಹಾದಿಯಲ್ಲಿ ಸಾಗುತ್ತಿವೆ. ಎಲ್ಲವನ್ನೂ ಸರಿಯಾದ ಹಾದಿಯಲ್ಲಿ ನಡೆಸಲು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ ಸ್ಕೋರ್‌ಕಾರ್ಡ್
ತವರು ಟೆಸ್ಟ್ ಸರಣಿ ಹೊರತಾಗಿಯೂ ಭಾರತ ತಂಡದ ವಿರುದ್ಧ ಗೆಲುವು ಪಡೆಯಬೇಕಾದರೆ ನಾವು ದೊಡ್ಡ ಪ್ರಯತ್ನವನ್ನು ಹಾಕಬೇಕಾಗುತ್ತದೆ ಎಂದು ಇದೇ ವೇಳೆ 34ರ ಪ್ರಾಯದ ಆಟಗಾರ ತಿಳಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾದಲ್ಲಿಯೇ ಭಾರತ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೂ ಸೋತೇ ಇಲ್ಲ ಎಂಬುದು ಆತಿಥೇಯರಿಗೆ ಪ್ಲಸ್ ಪಾಯಿಂಟ್ ಆಗಿದೆ.
“ಕಳೆದ ಟೆಸ್ಟ್ ಪಂದ್ಯದ ಗೆಲುವು ಈ ಪಂದ್ಯಕ್ಕೆ ನಮ್ಮಲ್ಲಿ ಸಾಕಷ್ಟು ವಿಶ್ವಾಸವನ್ನು ಹೆಚ್ಚಿಸಿದೆ. ಆದರೆ ಅತಿಯಾದ ವಿಶ್ವಾಸ ಇಲ್ಲಿ ನಮಗೆ ಯಾವುದೇ ಕ್ಷಣದಲ್ಲಿ ಹಿನ್ನಡೆ ತಂದುಕೊಡಬಹುದು. ಹಾಗಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಆಡಬೇಕಾದ ಅಗತ್ಯವಿದೆ. ವಿಶ್ವದ ನಂ.1 ತಂಡವಾದ ಭಾರತ ವಿರುದ್ಧ 2-1 ಅಂತರದಲ್ಲಿ ತವರು ಟೆಸ್ಟ್ ಸರಣಿ ಗೆದ್ದರೆ, ಇದು ತಂಡದ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ,”ಎಂದು ಡೀನ್ ಎಲ್ಗರ್ ತಿಳಿಸಿದ್ದಾರೆ.
‘ಶಾರ್ದುಲ್ ಇದ್ದಾರೆ, ಆದಷ್ಟು ಬೇಗ ಫಿಟ್ ಆಗಿ’ : ಹಾರ್ದಿಕ್‌ಗೆ ಚೋಪ್ರಾ ವಾರ್ನಿಂಗ್!
ಅಂದಹಾಗೆ ಭಾರತ ವಿರುದ್ಧ ಮೊದಲನೇ ಹಾಗೂ ಸೆಂಚೂರಿಯನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 113 ರನ್‌ಗಳಿಂದ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ, ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಕಗಿಸೊ ರಬಾಡ, ಡುವಾನ್ ಒಲಿವಿಯರ್ ಹಾಗೂ ಮಾರ್ಕೊ ಯೆನ್ಸನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.
ಭಾರತ ತಂಡ ನೀಡಿದ್ದ 240 ರನ್ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ, ಭಾರತದ ಮಾರಕ ವೇಗಿಗಳನ್ನು ಸಮರ್ಥವಾಗಿ ಎದುರಿಸಿತ್ತು. ಒಂದು ತುದಿಯಲ್ಲಿ ಕೊನೆಯವರೆಗೂ ಬ್ಯಾಟ್ ಮಾಡಿದ್ದ ಡೀನ್ ಎಲ್ಗರ್ ಅಜೇಯ 96 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದ್ದರು. ಆ ಮೂಲಕ ಸರಣಿಯನ್ನು 1-1 ಸಮಬಲ ಸಾಧಿಸಲು ತಂಡಕ್ಕೆ ನೆರವಾಗಿದ್ದರು.
Read more
[wpas_products keywords=”deal of the day gym”]