Online Desk
ರಾಮನಗರ: ಬೆಂಗಳೂರು ಮತ್ತು ಸುತ್ತಮುತ್ತಲ ಭಾಗದ ರೈತರಿಗೆ, ಜನರಿಗೆ ಅವರ ಹಕ್ಕಾದ ಕುಡಿಯುವ ನೀರನ್ನು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂದು ನಾವು ಇಂದು ಹೋರಾಡುತ್ತಿದ್ದೇವೆ. ಬಿಜೆಪಿಯವರಿಗೆ ನಾವು ಬೆಂಬಲ ನೀಡುತ್ತೇವೆ, ನೀವು ಬಂದು ಯೋಜನೆಗೆ ಶಂಕುಸ್ಥಾಪನೆ ಮಾಡಿ ಎಂದು ಹೇಳಿದೆವು. ಆದರೆ ಅವರಿಗೆ ತಾಕತ್ತು ಇನ್ನ ಎಂದು ಸಂಸದ ಡಿ ಕೆ ಸುರೇಶ್ ಗುಡುಗಿದ್ದಾರೆ.
ನಿನ್ನೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೇ ದಿನ ಮಾತನಾಡಿದ ಅವರು, ಬಿಜೆಪಿಯವರಿಗೆ ತಾಕತ್ತು ಇಲ್ಲ, ಮತದಾರರಿಗೆ ಪೊಳ್ಳು ಭರವಸೆಗಳನ್ನು ನೀಡುತ್ತಿದೆ. ಇಂದು ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸುತ್ತಿದ್ದಾರೆ. ಈ ಯೋಜನೆ ಅನುಷ್ಠಾನವಾಗಬೇಕು ಎಂದು ಹೇಳುವ, ಒತ್ತಾಯಿಸುವ ತಾಕತ್ತು ಒಬ್ಬನೇ ಒಬ್ಬ ಮಂತ್ರಿಗೆ ಸರ್ಕಾರದಲ್ಲಿ ಇಲ್ಲ ಎಂದು ಅವರು ಟೀಕಿಸಿದರು.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ವಾಗ್ವಾದ ಮುಂದುವರಿಕೆ
ಬಿಜೆಪಿಯವರ ಯೋಚನೆಯೊಂದೇ ಈ ಪಾದಯಾತ್ರೆಯನ್ನು ನಿಲ್ಲಿಸಬೇಕು, ಕೊರೋನಾ ಹಬ್ಬಿಸುತ್ತಾರೆ ಎಂದು ನೆಪವೊಡ್ಡಿ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಬೇಕೆಂಬುದೊಂದೇ. ನಾವು ಜೈಲಿಗೆ ಹೋಗಲು, ಸಾಯಲೂ ಸಿದ್ಧರಿದ್ದೇವೆ, ಆದರೆ ಬಿಜೆಪಿಯವರ ಬೆದರಿಕೆ ತಂತ್ರಗಳಿಗೆ ಮಣಿಯುವುದಿಲ್ಲ ಎಂದರು.
ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಸಂಸದರು, ಶಾಸಕರು ಹೋಗಿ ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡಲಿ, ಬಿಜೆಪಿಯವರಿಗೆ ತಾಕತ್ತಿದ್ದರೆ, ಗಂಡಸುತನ ಇದ್ದರೆ ಮೇಕೆದಾಟು ಯೋಜನೆ ಜಾರಿ ಮಾಡಿ ತೋರಿಸಲಿ, ನಮ್ಮ ನೀರು ನಮ್ಮ ಹಕ್ಕು ಎಂದು ಸವಾಲು ಹಾಕಿದರು.
Read more
[wpas_products keywords=”deal of the day”]