The New Indian Express
ಬೆಂಗಳೂರು: ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕೆಲಸದಿಂದ ಬಿಡುವು ಕಂಡುಕೊಳ್ಳುವುದು ಸವಾಲಿನ ಸಂಗತಿ. ಆದರೆ, ಡಾ.ನರಸಿಂಹಯ್ಯ ಶ್ರೀನಿವಾಸಯ್ಯ ಅವರು ‘ಭೂಮಿ ತಾಯಿ’ಗೆ ಹತ್ತಿರವಾಗಲು ಬಯಸುವ ವ್ಯಕ್ತಿ. ಪ್ರಕೃತಿ ನೋಡಲು ಮತ್ತು ಅದರ ನಡುವೆ ಬದುಕಲು ಇಷ್ಟಪಡುವ ಶ್ರೀನಿವಾಸಯ್ಯ ಇದು ಎಲ್ಲಾ ಕಾಯಿಲೆಗಳಿಗೆ ಮದ್ದು ಎಂಬುದನ್ನು ನಂಬಿದ್ದಾರೆ.
ಶ್ರೀನಿವಾಸಯ್ಯ ವೈದ್ಯಕೀಯ ಕೆಲಸ ಆರಂಭಿಸಿದಾಗ ಅವರೊಬ್ಬ ತೋಟಗಾರಿಕೆ, ಹೂ ಹಾಗೂ ಕೃಷಿಕರಾಗಿದ್ದರು. 2000 ದಶಕದ ಆರಂಭದಲ್ಲಿ ಅಮೆರಿಕ ಮತ್ತು ಯುರೋಪಿನಾದ್ಯಂತ ವ್ಯಾಪಕ ಪ್ರಯಾಣದ ನಂತರ, ಅವರು ಭಾರತದಲ್ಲಿ ಬಳಸದ ತೋಟಗಾರಿಕಾ ಜಾಗದ ಬಗ್ಗೆ ಮನನ ಮಾಡಿಕೊಂಡರು. ಹೀಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ನಿಸರ್ಗ ಧಾಮ (ನಾನಿಡಂ) ಪರಿಸರ ವಸ್ತು ಸಂಗ್ರಹಾಲಯ ತಲೆ ಎತಿತ್ತು.
ಈ ಸ್ಥಳನ್ನು ಭೂಮಿ ತಾಯಿಯಿಂದ ಕೆತ್ತಿದ ಪ್ರದೇಶ ಎಂದು ಕರೆಯುವ ಶ್ರೀನಿವಾಸಯ್ಯ, ಇಲ್ಲಿಗೆ ಯಾರೂ ಬೇಕಾದರೂ ಭೇಟಿ ನೀಡಬಹುದು, ಮನಸಿಗೆ ನೆಮ್ಮದಿ ಪಡೆಯಬಹುದು, ಪ್ರಕೃತಿಯೊಂದಿಗೆ ವಾಸಿಸಬಹುದು ಎಂದು ಹೇಳುತ್ತಾರೆ. ರೈತ ಕುಟುಂಬದಲ್ಲಿ ಬೆಳೆದ ಶ್ರೀನಿವಾಸಯ್ಯ, ಕಷ್ಟಗಳ ನಡುವೆ ಬೆಳೆದವರು. ಆದಾಗ್ಯೂ, ಕೃಷಿಯ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ.
20 ವರ್ಷಗಳ ಹಿಂದೆ ಕಾಡು ಮಾವಿನ ಸಸಿಯೊಂದಿಗೆ ಪ್ರಾರಂಭವಾದ ಪರಿಸರ ಮ್ಯೂಸಿಯಂ, 2020ರಲ್ಲಿ ಐದು ಎಕರೆ ಜಮೀನಿನೊಂದಿಗೆ ಪೂರ್ಣ ಸಾಮರ್ಥ್ಯಕ್ಕೆ ಬೆಳೆಯಿತು. ಪರಿಸರ ವಸ್ತು ಸಂಗ್ರಹಾಲಯ ಮಿನಿ ಅರಣ್ಯಕ್ಕಿಂತ ಕಡಿಮೆ ಏನಿಲ್ಲ. ಇಲ್ಲಿ ವ್ಯಾಪಕ ಶ್ರೇಣಿಯ ಬೀಜಗಳು, ಹಣ್ಣುಗಳು, ತರಕಾರಿಗಳು, ಗಿಡಮೂಲಿಕೆಗಳು, ಕೊಳ, ನವಿಲುಗಳು ಮತ್ತು ಕೆಲವು ಮಂಗಗಳು ಇವೆ.
“ಈ ಮ್ಯೂಸಿಯಂ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಪರಿಸರದ ಬಗ್ಗೆ ಶಿಕ್ಷಣ ನೀಡುತ್ತದೆ. ನಾವು ಬೆಳೆಸುವ ವೈವಿಧ್ಯಮಯ ಬೀಜಗಳ ಬಗ್ಗೆ ಮಾತನಾಡುವುದರಿಂದ ಹಿಡಿದು ನಂದಿ ಬೆಟ್ಟದಿಂದ ಹುಟ್ಟುವ ನದಿಗಳು, ಪರಿಸರ ಕಾಳಜಿಯ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುತ್ತದೆ ಎಂದು ರೊಬೊಟಿಕ್ ಸರ್ಜನ್ ಶ್ರೀನಿವಾಸಯ್ಯ ಹೇಳುತ್ತಾರೆ.
ಶ್ರೀನಿವಾಸಯ್ಯ ಬೆಟ್ಟಗಳಿಂದ ಹುಟ್ಟುವ ಐದು ನದಿಗಳ ಹೆಸರಿನ ಐದು ಗಾತ್ರದ ಜಲಮೂಲಗಳನ್ನು ಸಹ ರಚಿಸಿದ್ದಾರೆ. ರಾಜಕಾಲುವೆ ಮಾದರಿಯಲ್ಲಿ ಜಲಸಂರಕ್ಷಣೆಗಾಗಿ ಹಳೆಯ ಪಾರಂಪರಿಕ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಆಧುನಿಕತೆಗೆ ಅವಕಾಶ ನೀಡುವುದಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕ ಕೃಷಿಯಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳುವ ಶ್ರೀನಿವಾಸಯ್ಯ, ತಮ್ಮ ಮಕ್ಕಳು ಕೂಡಾ ಕೃಷಿ ಕಲೆ ತಿಳಿಯಲು ಬಯಸುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿದ್ದಾಗ ಬಿಳಿ ಬಣ್ಣದ ಕೋಟ್ ಧರಿಸುತ್ತೇನೆ. ಆದೇ ರೀತಿ ಕೃಷಿ ಮಾಡುವಾಗ ಶಾರ್ಟ್ಸ್ ಹಾಕಿಕೊಳ್ಳುತ್ತೇನೆ. ಇದು ನನ್ನ ಸಾಮಾಜಿಕ ಜವಾಬ್ದಾರಿಯಾಗಿದೆ ಎನ್ನುವ ಶ್ರೀನಿವಾಸಯ್ಯ, ಪರಿಸರ ಮ್ಯೂಸಿಯಂ ತನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದೆ. ಕೃಷಿಯು ಮಾನಸಿಕ ಹಾಗೂ ಶಾರೀರಿಕವಾಗಿ ಅಪಾರದ ಪ್ರಭಾವವನ್ನು ಬೀರಿರುವುದಾಗಿ ತಿಳಿಸಿದರು.
ಒಬ್ಬ ವೈದ್ಯನಾಗಿ, ಇದು ನನಗೆ ಶ್ರದ್ಧೆ, ತಾಳ್ಮೆಯನ್ನು ಹೆಚ್ಚಿಸಿದೆ ಮತ್ತು ಸಣ್ಣ ವಿಷಯಗಳು ಸಹ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ ಎಂಬುದನ್ನು ಅರಿತುಕೊಂಡೆ. ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಾಗ ವೈದ್ಯಕೀಯ ಕೆಲಸದಿಂದ ವಿಮುಖನಾಗುತ್ತೇನೆ ಎಂದು 46 ವರ್ಷದ ಶ್ರೀನಿವಾಸಯ್ಯ ತಿಳಿಸಿದರು.
ಶ್ರೀನಿವಾಸಯ್ಯ ಅವರ ಫಾರ್ಮ್ ನಲ್ಲಿ ನಿಂಬೆ ಮತ್ತು ನಿಂಬೆ ತೋಟ, ದೇವನಹಳ್ಳಿ ಚಕೋತ, ಗುಲಾಬಿ ತೋಟ
ಹೈಬಿಸ್ಕಸ್ ಉದ್ಯಾನ, ಹುಣಸೆ ಮರಗಳು, ಕಾಡು ಗೋಡಂಬಿ ಮರಗಳು, ಕಾಡು ಮಾವಿನ ಹಣ್ಣುಗಳು ಇವೆ.
Read more
[wpas_products keywords=”deal of the day”]