ನವದೆಹಲಿ: ತನ್ನ ಮಾನಸಿಕ ಆರೋಗ್ಯದ ಹೋರಾಟಗಳು ಮತ್ತು ಫಿಟ್‌ನೆಸ್ ಗುರಿಗಳ ಬಗ್ಗೆ ಮಾತನಾಡಲು ಹೆಸರುವಾಸಿಯಾಗಿರುವ ಸ್ಟಾರ್ ಕಿಡ್, ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್, ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳದ ಕಾರಣ ಕಳೆದ ಕೆಲ ವರ್ಷಗಳಿಂದ 20 ಕೆ.ಜಿ. ತೂಕವನ್ನು ಹೆಚ್ಚಿಸಿಕೊಂಡಿರುವುದರ ಬಗ್ಗೆ ಮಾತನಾಡಿದ್ದಾರೆ. ತೂಕ ಹೆಚ್ಚಾದ ಬಗ್ಗೆ ಗೊಂದಲಕ್ಕೀಡಾಗಿದ್ದ ನಾನು, ಈ ವರ್ಷ ಹೊಸ ದಾರಿಯೊಂದನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತನ್ನ ತೂಕ ಹೆಚ್ಚಾಗಿರುವುದು ಮತ್ತು 15 ದಿನಗಳ ಕಾಲ ಉಪವಾಸ ಮಾಡುವ ಮೂಲಕ ತೂಕ ಇಳಿಸಿಕೊಳ್ಳುವ ಪ್ರಯತ್ನದ ಬಗ್ಗೆ ಮಾತನಾಡಿದ್ದಾರೆ.
‘ತೂಕ ಇಳಿಸುವ ನನ್ನ ಪ್ರಯತ್ನದ ಭಾಗವಾಗಿ ನಾನು ಇತ್ತೀಚೆಗೆ 15 ದಿನಗಳ ಕಾಲ ಉಪವಾಸ ಮಾಡಿದ್ದೇನೆ. ನನ್ನ ಜೀವನದ ಬಹುಪಾಲು ಸಮಯ ನಾನು ತುಂಬಾ ಸಕ್ರಿಯಳಾಗಿದ್ದೆ. ನಂತರ ಕಳೆದ ನಾಲ್ಕೈದು ವರ್ಷಗಳಲ್ಲಿ ನಾನು ತುಂಬಾ ನಿಷ್ಕ್ರಿಯಳಾಗಿದ್ದೇನೆ. ಇದರ ಪರಿಣಾಮವಾಗಿ ನಾನು 20 ಕೆಜಿ ತೂಕ ಹೆಚ್ಚಾಗಿದ್ದೇನೆ. ಈ ವಿಚಾರ ನಿಜವಾಗಿಯೂ ನನ್ನ ತಲೆಯಲ್ಲಿ ಗೊಂದಲಕ್ಕೊಳಗಾಗಿದೆ. ಇತರ ವಿಷಯಗಳ ಜೊತೆಗೆ ಜರ್ಮನಿಯಲ್ಲಿ ಮಾಡಬೇಕಿರುವ ಕೆಲಸಗಳ ಪಟ್ಟಿಯಲ್ಲಿ ತೂಕ ಇಳಿಸುವುದು ಸೇರಿದೆ’ ಎಂದು ಬರೆದುಕೊಂಡಿದ್ದಾರೆ.
‘ತೂಕವನ್ನು ಕಡಿಮೆ ಮಾಡಲು ನಾನು ಕಷ್ಟಪಟ್ಟು ಪ್ರಯತ್ನಿಸಲು ಹೊಸದಾದ ದಾರಿ ಮತ್ತು ಲಯವನ್ನು ಕಂಡುಕೊಂಡೆ. ಈಗ ಅದನ್ನು ಹಿಡಿದಿಟ್ಟುಕೊಳ್ಳಲು ನಾನು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ನಾನು ಕೆಲವು ವಿಷಯಗಳನ್ನು ಕಲಿತಿದ್ದೇನೆ. ಅವುಗಳಲ್ಲಿ ಬಹಳಷ್ಟು ಅಭ್ಯಾಸಗಳನ್ನು ಪ್ರಾರಂಭಿಸಬೇಕು. ಹಾಗಾಗಿ, ಏನೆಲ್ಲ ಸಾಧ್ಯವೋ ಅವುಗಳನ್ನು ನಾನು ಮಾಡುತ್ತೇನೆ. ಅದು ಹೇಗೆ ಸಾಗುತ್ತದೆ ಎಂದು ನೋಡೋಣ’ .
ಈ ಸುದೀರ್ಘ ಪೋಸ್ಟ್ ಜೊತೆಗೆ, ಇರಾ ತಮ್ಮ ಯುರೋಪ್ ಪ್ರವಾಸದಲ್ಲಿ ತನ್ನ ಗೆಳೆಯ ನೂಪುರ್ ಶಿಖರೆ ಅವರೊಂದಿಗಿರುವ ಮುದ್ದಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನಟಿ ರೀನಾ ದತ್ತ ಮತ್ತು ಅಮೀರ್ ಖಾನ್ ಅವರ ಇಬ್ಬರು ಮಕ್ಕಳಲ್ಲಿ ಇರಾ ಖಾನ್ ಕೂಡ ಒಬ್ಬರು. 2002ರಲ್ಲಿ ಅಮಿರ್ ಮತ್ತು ರೀನಾ ವಿಚ್ಛೇದನ ಪಡೆದುಕೊಂಡರು. ಇರಾ ಖಾನ್ 2019 ರಲ್ಲಿ ನಿರ್ದೇಶನವನ್ನು ಪ್ರಾರಂಭಿಸಿದರು.
Read More…Source link
[wpas_products keywords=”deal of the day party wear for men wedding shirt”]