Karnataka news paper

‘ಸೀತಮ್ಮನ ಮಗ’ನಿಗಾಗಿ ಹಾಡಿದ ‘ಸರಿಗಮಪ’ ರಿಯಾಲಿಟಿ ಶೋ ಸ್ಪರ್ಧಿ ಮೆಹಬೂಬ್ ಸಾಬ್


ಹೈಲೈಟ್ಸ್‌:

  • ‘ಸರಿಗಮಪ’ ರಿಯಾಲಿಟಿ ಶೋ ಸ್ಪರ್ಧಿ ಮೆಹಬೂಬ್ ಸಾವ್
  • ಯತಿರಾಜ್ ಬರೆದ ಹಾಡು ಹಾಡಿದ ಮೆಹಬೂಬ್ ಸಾಬ್
  • ಅಮ್ಮ ಬರೆದ ಗೀತೆಗೆ ದನಿಯಾದ ಮೆಹಬೂಬ್ ಸಾಬ್

‘ಸರಿಗಮಪ’ ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೆಹಬೂಬ್ ಸಾಬ್ ಅವರು ‘ಸೀತಮಮ್ಮನ ಮಗ’ ಚಿತ್ರಕ್ಕಾಗಿ ಯತಿರಾಜ್ ಬರೆದಿರುವ ‘ಸೀತೆಯೆಂಬ ಹೆಸರಲ್ಲೇನೋ ದೋಷವುಂಟು..ಯುಗಗಳೇ ಕಳೆದರೂನು ಲೋಪವುಂಟು’ ಎಂಬ ಅಮ್ಮನ ಕುರಿತಾದ ಭಾವುಕ ಗೀತೆಯನ್ನು ಹಾಡಿದ್ದಾರೆ. ವಿನುಮನಸು ಸಂಗೀತ ನೀಡಿರುವ ಈ ಹಾಡಿನ ಧ್ವನಿಮುದ್ರಣ ರೇಣು ಸ್ಟುಡಿಯೋದಲ್ಲಿ ನಡೆಯಿತು.

ಮೆಹಬೂಬ್ ಸಾಬ್ ಹೇಳಿದ್ದೇನು?
“ಈ ಹಿಂದೆ ನಾನು ಹಾಡಿದ್ದ “ಬಿಟ್ಟೋಗ್ ಬೇಡ ನನ್ನ..” ಗೀತೆಯಂತೆ ಈ ಹಾಡು ಕೂಡ ಜನಪ್ರಿಯತೆ ಪಡೆಯಲಿದೆ. ಇದುವರೆಗೂ ಅಮ್ಮನ ಕುರಿತಾಗಿ ಬಂದಿರುವ ಎಲ್ಲಾ ಹಾಡುಗಳಂತೆ ಈ ಹಾಡು ಕೂಡ ಜನಪ್ರಿಯವಾಲಿ” ಎಂದು ಮೆಹಬೂಬ್ ಸಾಬ್ ಚಿತ್ರತಂಡಕ್ಕೆ ಶುಭಕೋರಿದರು.

ಚೈತ್ರಾ ಶ್ರೀನಿವಾಸ್, ಸೋನು ಸಾಗರ ನಟನೆ
ಸೋನು ಫಿಲಂಸ್ ಲಾಂಛನದಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಚಿತ್ರವನ್ನು ಯತಿರಾಜ್ ನಿರ್ದೇಶಿಸುತ್ತಿದ್ದಾರೆ. ಯತಿರಾಜ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್, ಸಿಂಚನಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಇಜ್ಜಲಘಟ್ಟ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ರ‍್ಯಾಂಬೋ 2 ಗಾಗಿ ಹಾಡಿದ ದೃಷ್ಟಿ ವಿಶೇಷ ಚೇತನ ಮೆಹಬೂಬ್

ಅನೇಕ ಸಿನಿಮಾ ಹಾಡುಗಳಿಗೆ ಮೆಹಬೂಬ್ ಗಾಯನ
ಸರಿಗಮಪ ಸೀಸನ್‌-13ರಲ್ಲಿ ಪಾಲ್ಗೊಂಡು ಮೆಹಬೂಬ್ ಅವರು ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿದ್ದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಪಿಂಜಾರ ಸಮಾಜದ ಶರೀಫ್‌ ಮತ್ತು ರಜೀಯಾ ಬೇಗಂ ದಂಪತಿ ಪುತ್ರ ಮೆಹಬೂಬ್ ಅವರು ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಈ ಹಿಂದೆ ಅವರು ನಿರ್ದೇಶಕ ಸಂದೇಶ್‌ ಶೆಟ್ಟಿ ನಿರ್ದೇಶನದ ‘ಕತ್ತಲಕೋಣೆ’ ಚಿತ್ರದ ಹಾಡು ಹಾಡಿದ್ದರು. ರ‍್ಯಾಂಬೋ 2 (Rambo 2 ), ಮನೋರಥ ಸೇರಿದಂತೆ ಸಾಕಷ್ಟು ಸಿನಿಮಾ ಹಾಡುಗಳಿಗೆ ಮೆಹಬೂಬ್ ಈಗಾಗಲೇ ದನಿಯಾಗಿದ್ದಾರೆ.

ಮೆಹಬೂಬ್‌ ಸಾಬ್‌ಗೆ ಸಿನಿಮಾ ಹಾಡಿಗೆ ದನಿಯಾಗುವ ಚಾನ್ಸ್‌

ಸರಿಗಮಪ ಚಾಂಪಿಯನ್‌ಶಿಪ್‌
ಈಗಾಗಲೇ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳಿಗೆ ವಿಧ ವಿಧವಾದ ಅವಕಾಶಗಳು ಸಿಕ್ಕಿವೆ. ಸಂಚಿತ್ ಹೆಗಡೆ ಅವರು ಸದ್ಯ ದಕ್ಷಿಣ ಭಾರತದಲ್ಲಿ ಹೆಸರು ಮಾಡುತ್ತಿದ್ದಾರೆ. ರಜತ್ ಹೆಗಡೆ, ನಿಹಾಲ್ ತಾವ್ರೊ ಮುಂತಾದವರು ಈಗಾಗಲೇ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ಹಾಡು ಹಾಡಿದ್ದಾರೆ. ಸದ್ಯ ಸರಿಗಮಪ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಇಷ್ಟು ಸೀಸನ್‌ಗಳಲ್ಲಿ ಹಾಡಿದ ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ. ನಾದಬ್ರಹ್ಮ ಹಂಸಲೇಖ, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಈ ಶೋನಲ್ಲಿ ತೀರ್ಪುಗಾರರು, ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ. ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಹೇಮಂತ್, ಸುಚೇತನ್ ಪ್ರಸಾದ್, ಅನುರಾಧಾ ಭಟ್ ಮುಂತಾದವರು ಈ ಶೋದಲ್ಲಿ ಮಾಡಿರುವ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.



Read more

[wpas_products keywords=”deal of the day party wear dress for women stylish indian”]