Karnataka news paper

ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ರತ್ನನ್ ಪ್ರಪಂಚ’ಗೆ ಮೆಚ್ಚುಗೆಯ ಸುರಿಮಳೆ


ಹೈಲೈಟ್ಸ್‌:

  • #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ‘ಅತ್ಯುತ್ತಮ ಓಟಿಟಿ ಚಿತ್ರ’ ಯಾವುದು?
  • ‘ಅತ್ಯುತ್ತಮ ಓಟಿಟಿ ಚಿತ್ರ’ಕ್ಕೆ ಕೂಡಲೆ ವೋಟ್ ಮಾಡಿ
  • ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ‘ರತ್ನನ್ ಪ್ರಪಂಚ’ ಮುನ್ನಡೆ

2021ರಲ್ಲಿಯೂ ಕೊರೊನಾ ವೈರಸ್ ಸೋಂಕಿನ ಆತಂಕ ಎಲ್ಲರನ್ನೂ ಕಾಡಿತು. ಕೋವಿಡ್-19 ಭೀತಿಯಿಂದಾಗಿ 2021ರಲ್ಲೂ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಚಿತ್ರಮಂದಿಗಳೂ ಸಾಕಷ್ಟು ಕಾಲ ಬಂದ್ ಆಗಿದ್ವು. ಚಿತ್ರಮಂದಿರಗಳು ಓಪನ್ ಆಗಲಿ.. ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ಸಿಗಲಿ.. ಅಂತ ಎಷ್ಟೋ ಸಿನಿಮಾಗಳು ಕಾದವು. ಈ ಮಧ್ಯೆ ಓಟಿಟಿ ವೇದಿಕೆ ಕೂಡ ಮುನ್ನೆಲೆಗೆ ಬಂತು. ಹೀಗಾಗಿ, ಓಟಿಟಿ ವೇದಿಕೆಯಲ್ಲೂ ಕೆಲ ಸಿನಿಮಾಗಳು ತೆರೆಗೆ ಬಂದವು. ಹಾಗಾದ್ರೆ, ಕಳೆದ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತ್ಯುತ್ತಮ ಸಿನಿಮಾ ಯಾವುದು? ಅದನ್ನ ಆಯ್ಕೆ ಮಾಡುವ ಸಮಯವಿದು…

‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌ಗೆ ನಾಮನಿರ್ದೇಶನ ಮಾಡಲಾಗಿದೆ.

2021ರ ಜನವರಿಯಿಂದ ನವೆಂಬರ್ 30ರವರೆಗೆ ಓಟಿಟಿಯಲ್ಲಿ ತೆರೆಕಂಡ ಚಿತ್ರಗಳಲ್ಲಿ ‘ಅತ್ಯುತ್ತಮ ಚಿತ್ರ’ವನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು… 2021ರ ಬೆಸ್ಟ್ ಓಟಿಟಿ ಚಿತ್ರ ಯಾವುದು ಎಂಬುದನ್ನು ನೀವೇ ನಿರ್ಧರಿಸಿ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು.

ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ರಾಬರ್ಟ್’ ಚಿತ್ರದ ಛಾಯಾಗ್ರಾಹಕನಿಗೆ ಹೆಚ್ಚಿನ ಮತಗಳು ಸಿಕ್ಕಿವೆ!

ಲೀಡಿಂಗ್‌ನಲ್ಲಿ ‘ರತ್ನನ್ ಪ್ರಪಂಚ’
2021ರಲ್ಲಿ ಧನಂಜಯ, ಉಮಾಶ್ರೀ ನಟನೆಯ ‘ರತ್ನನ್ ಪ್ರಪಂಚ’ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ, ‘ರತ್ನನ್ ಪ್ರಪಂಚ’ ಚಿತ್ರವನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ಕ್ಕೆ ಆಯ್ಕೆ ಮಾಡಲಾಗಿತ್ತು.

ಅತ್ಯುತ್ತಮ ಓಟಿಟಿ ಸಿನಿಮಾ ವಿಭಾಗದಲ್ಲಿ ‘ರತ್ನನ್ ಪ್ರಪಂಚ’ ಜೊತೆಗೆ ‘ಜೈ ಭೀಮ್’, ‘ಇಕ್ಕಟ್’, 1980, ಟಕ್ ಜಗದೀಶ್ ಚಿತ್ರಗಳು ನಾಮನಿರ್ದೇಶನಗೊಂಡಿದ್ದವು.

ವಿಕ ವೆಬ್ ಸಿನಿಮಾ ಅವಾರ್ಡ್ಸ್: ಹೆಚ್ಚು ವೋಟ್ಸ್ ಪಡೆಯುತ್ತಿರುವ ಸಂಗೀತ ನಿರ್ದೇಶಕ ಯಾರು ಗೊತ್ತೇ?

ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ‘ರತ್ನನ್ ಪ್ರಪಂಚ’ ಚಿತ್ರಕ್ಕೆ 78% ವೋಟ್ಸ್ ಬಿದ್ದಿವೆ. ಜೈ ಭೀಮ್ ಚಿತ್ರಕ್ಕೆ 18%, ಇಕ್ಕಟ್‌ ಸಿನಿಮಾಗೆ 2%, 1980 ಚಿತ್ರಕ್ಕೆ 1% ಮತ್ತು ಟಕ್ ಜಗದೀಶ್ ಚಿತ್ರಕ್ಕೆ 1% ವೋಟ್ಸ್ ಬಿದ್ದಿವೆ.

#ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರಲ್ಲಿ ಅತ್ಯುತ್ತಮ ಓಟಿಟಿ ಚಿತ್ರವನ್ನು ಆಯ್ಕೆ ಮಾಡಲು ಈ ಕೂಡಲೆ ವೋಟ್ ಮಾಡಿ..

ವೋಟ್ ಮಾಡುವುದು ಹೇಗೆ?
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ – ಈ ಲಿಂಕ್ ಕ್ಲಿಕ್ ಮಾಡಿ, ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ..

ಅತ್ಯುತ್ತಮ ಓಟಿಟಿ ಸಿನಿಮಾ ಯಾವುದು?
ಇಕ್ಕಟ್
ರತ್ನನ್ ಪ್ರಪಂಚ
1980
ಜೈ ಭೀಮ್‌
ಟಕ್ ಜಗದೀಶ್‌
ಈ ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ



Read more

[wpas_products keywords=”deal of the day party wear dress for women stylish indian”]